ಸುಲಭವಾದ; ಸಲೀಸಾದ; ಸರಾಗವಾದ; ಕಷ್ಟವಲ್ಲದ: easy prey ಸುಲಭವಾಗಿ ಬಲಿಯಾಗುವ ವ್ಯಕ್ತಿ.
ಸಂಕೋಚವಿಲ್ಲದ; ನಿಸ್ಸಂಕೋಚವಾದ.
ಸರಳವಾದ; ಅತಿ ಕಟ್ಟು ನಿಟ್ಟಾಗಿರದ: easy manners ಸರಳವಾದ ನಡವಳಿಕೆ.
ಸುಲಭನಮ್ಯ; ಸುಲಭವಾಗಿ — ಒಪ್ಪಿಸಲಾಗುವ, ಒಲಿಸಲಾಗುವ: a man of easy virtue (ಲಂಚ ಮೊದಲಾದ ಪ್ರಲೋಭನಕ್ಕೆ) ಸುಲಭವಾಗಿ ಬಗ್ಗುವ ವ್ಯಕ್ತಿ.
(ಸರಕುಗಳ ವಿಷಯದಲ್ಲಿ) ಅಗ್ಗದ; ಸುಲಭವಾಗಿ ದೊರೆಯುವ.
(ಮಾರುಕಟ್ಟೆ, ಪೇಟೆಗಳ ವಿಷಯದಲ್ಲಿ) ಹೆಚ್ಚು ಬೇಡಿಕೆಯಿಲ್ಲದ; ಗಿರಾಕಿ ಕಡಮೆಯಾದ; ಅಗ್ಗವಾದ; ಸೋವಿಯಾದ; ಭರಾಟೆ ಕುಗ್ಗಿದ; ಮಂದಿಯಾದ: the market is easy ಪೇಟೆ ಮಂದಿಯಾಗಿದೆ; (ಹೆಚ್ಚು ಬೇಡಿಕೆ ಇಲ್ಲದೆ) ಪೇಟೆಯಲ್ಲಿ (ವ್ಯಾಪಾರದ) ಭರಾಟೆ ಕಡಿಮೆಯಾಗಿದೆ.
easy
ಕ್ರಿಯಾವಿಶೇಷಣ
ಪದಗುಚ್ಛ
ನುಡಿಗಟ್ಟು
stand easy! (ಬ್ರಿಟಿಷ್ ಪ್ರಯೋಗ) (ಸೈನಿಕ ಕವಾಯತಿನ ಆಜ್ಞೆ) ಪೂರ್ಣ ಆರಾಮವಾಗಿ ನಿಲ್ಲಿಸಿ ಸಾಮಾನ್ಯ ಆರಾಮ ನಿಲುವಿನಿಂದ (stand at ease) ಪೂರ್ತಿ ಆರಾಮ ನಿಲುವಿಗೆ (stand easy) ಬನ್ನಿ.
ಸುಲಭವಾಗಿ; ಸಲೀಸಾಗಿ; ಸರಾಗವಾಗಿ; ಧಾವಂತಪಡದೆ.
ಕಳವಳವಿಲ್ಲದಂತೆ; ಕಾತರಗೊಳ್ಳದಂತೆ.
easy
ನಾಮವಾಚಕ
ಪದಗುಚ್ಛ
ಸ್ವಲ್ಪ, ಅಲ್ಪ, ಲಘು — ವಿಶ್ರಾಂತಿ. an easy ಚಲಿಸುವಾಗ ಸಿಕ್ಕುವ ಲಘು ವಿಶ್ರಾಂತಿ: the ship reached the port without easy ನಡುವೆ ಒಮ್ಮೆಯೂ ವಿಶ್ರಾಂತಿಯಿಲ್ಲದೆ ಹಡಗು ಬಂದರನ್ನು ಮುಟ್ಟಿತು.
easy
ಅಕರ್ಮಕ ಕ್ರಿಯಾಪದ
ಪದಗುಚ್ಛ
(ಕವಾಯತು ಮೊದಲಾದವುಗಳನ್ನು ನಡೆಸುವ ಸಂದರ್ಭದಲ್ಲಿ ಆಜ್ಞೆಯಾಗಿ) ನಿಧಾನವಾಗಿ ನಡೆ! easy all! (ಬ್ರಿಟಿಷ್ ಪ್ರಯೋಗ) (ಸಾಮಾನ್ಯವಾಗಿ ದೋಣಿ ನಡೆಸುವಲ್ಲಿ ಆಜ್ಞೆಯಾಗಿ) ನಿಲ್ಲು! ನಿಲ್ಲಿಸು!
easy chair
ನಾಮವಾಚಕ
ಆರಾಮ ಕುರ್ಚಿ; ಕೈಗಳಿರುವ ಮತ್ತು ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡಿರುವ ಕುರ್ಚಿ.