logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cacuminal
ಗುಣವಾಚಕ
(ಭಾಷಾಶಾಸ್ತ್ರ) ಮೂರ್ಧನ್ಯ; (ಉಚ್ಚಾರಣೆಯ ವಿಷಯದಲ್ಲಿ) ನಾಲಗೆಯ ತುದಿಯನ್ನು ಮಡಿಚಿ, ಅದರ ಕೆಳಭಾಗವನ್ನು ಅಂಗುಳಿಗೆ ತಾಕಿಸಿ ಉಚ್ಚರಿಸುವ.

cad
ನಾಮವಾಚಕ
  • ಮರ್ಯಾದೆ ತಿಳಿಯದವನು; ಕೀಳು ತೆರದವನು.
  • ಅಸಭ್ಯ (ವರ್ತನೆಯವನು); ಅನಾಗರಿಕ; ಅಸಂಸ್ಕೃತ.
  • ನೀಚ; ಭಂಡ; ಕೀಳ; ತುಚ್ಛ; ಹಲ್ಕಾ.
  • (ಗತಪ್ರಯೋಗ) ಬಸ್‍ ಕಂಡಕ್ಟರು.
  • (ಬ್ರಿಟಿಷ್‍ ವಿಶ್ವವಿದ್ಯಾಲಯಗಳಲ್ಲಿ) (ಅಶಿಷ್ಟ) (ಗತಪ್ರಯೋಗ) ತೈನಾತಿ; ಆಟಗಳ ಆಳು; ಆಟಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯಮಾಡುತ್ತಾ ಅವರ ಬಳಿಯಲ್ಲೇ ಓಡಾಡುತ್ತಿರುವವ.

  • cadastral
    ಗುಣವಾಚಕ
  • (ನಕಾಶೆ ಯಾ ಸರ್ವೆಯ ವಿಷಯದಲ್ಲಿ) (ಕಂದಾಯ ಗೊತ್ತುಪಡಿಸಲು ರಚಿಸಿರುವ) ಜಮೀನುದಾಖಲೆಯ; ಪಟ್ಟೆಯ; ವಿಸ್ತೀರ್ಣ, ವಾರಸುದಾರ, ಬೆಲೆ ಮೊದಲಾದವನ್ನು ಒಳಗೊಂಡಿರುವ, ತೋರಿಸುವ.
  • ಖಾತೆಯ; ಪಹಣಿಯ; ಜಮೀನಿನ ಪಟ್ಟೆಗೆ ಸಂಬಂಧಿಸಿದ.

  • cadastre
    ನಾಮವಾಚಕ
    (ಅಧಿಕೃತ) ಖಾತೆ; ಪಹಣಿ; ಪಟ್ಟೆ; ಜಮೀನು–ದಾಖಲೆ, ರಿಜಿಸ್ಟರು.

    cadaver
    ನಾಮವಾಚಕ
    (ಮುಖ್ಯವಾಗಿ ಮನುಷ್ಯನ) ಹೆಣ; ಶವ; ಕಳೇಬರ.

    cadaveric
    ಗುಣವಾಚಕ
    (ವೈದ್ಯಶಾಸ್ತ್ರ) (ಶರೀರ ವಿಜ್ಞಾನ)
  • ಕಳೇಬರದಂಥ; ಶವದ; ಶವಕ್ಕೆ ಸಂಬಂಧಿಸಿದ.
  • ಹೆಣ ಮುಟ್ಟಿದ್ದರಿಂದ ಉಂಟಾದ; ಶವಸ್ಪರ್ಶದಿಂದ ಉಂಟಾದ.

  • cadaverous
    ಗುಣವಾಚಕ
  • ಹೆಣದ; ಶವದ; ಹೆಣಕ್ಕೆ ಸಂಬಂಧಿಸಿದ; ಶವಸಂಬಂಧಿ.
  • ಹೆಣದಂಥ; ಶವದಂಥ; ಶವಸದೃಶ.
  • ಪ್ರೇತಕಳೆಯ; ಹೆಣಮೋರೆಯ; ತೀರ ಬಿಳಿಚಿಕೊಂಡ; ನಿಸ್ತೇಜ.
  • ಕಂಗೆಟ್ಟ; ಬಡಕಲಾಗಿರುವ; ಮೂಳೆಬಿಟ್ಟುಕೊಂಡು ವಿಕಾರವಾಗಿರುವ.

  • caddice
    ನಾಮವಾಚಕ
    =caddis.

    caddie
    ನಾಮವಾಚಕ
  • (ದಾಂಡು ಮೊದಲಾದವುಗಳನ್ನು ಒಯ್ಯುವ) ಕ್ಯಾಡಿ; ಗಾಲ್‍ ಆಟಗಾರನ ಪರಿಚರ.
  • (ಸ್ಕಾಟ್ಲಂಡ್‍) ಯಾವುದಾದರೂ ಕೆಲಸ ಹುಡುಕುತ್ತ ಕಾದಿರುವವನು.
  • (ಸ್ಕಾಟ್ಲಂಡ್‍) (ಸಲಿಗೆಯಾಗಿ) ಹೈದ; ಹುಡುಗ.
  • (ಬಳಕೆಗೆ ಸಿದ್ಧವಾಗಿರುವಂತೆ ಸಣ್ಣಪುಟ್ಟ ಪದಾರ್ಥಗಳನ್ನು ಇರಿಸುವ) ಸಣ್ಣ—ಡಬ್ಬಿ, ಪೆಟ್ಟಿಗೆ, ಸಂಪುಟ.

  • caddie car
    ನಾಮವಾಚಕ
    (ಗಾಲ್‍ ಆಟದ) ದಾಂಡುಬಂಡಿ; ಆಟ ಆಡುವಾಗ ಗಾಲ್‍ ದಾಂಡುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಬಳಸುವ, ಎರಡು ಚಕ್ರದ ಹಗುರ ಬಂಡಿ.


    logo