logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orfe
ನಾಮವಾಚಕ
ಒಂದು ಬಗೆಯ ಹೊಮ್ಮೀನು, ಚಿನ್ನದ ಬಣ್ಣದ ಮೀನು.

organ
ನಾಮವಾಚಕ ಪದಗುಚ್ಛ
  • ಆರ್ಗನ್‍ (ವಾದ್ಯ); ತಿದಿಯೊತ್ತಿ ಕೀಲಿಕೈಗಳ ಮೂಲಕ ಪಿಳ್ಳಂಗೋವಿಗಳಲ್ಲಿ ಗಾಳಿ ಹರಿಸಿ ವಾದಿಸುವ, ವಿಶೇಷ ರೀತಿಯ ನಾದವುಳ್ಳ ಒಂದು ವಾದ್ಯ.
  • ಇಂಥದೇ ನಾದ ಹೊರಡಿಸುವ ವಿದ್ಯುದುಪಕರಣ.
  • = barrel-organ.
  • ಹಾರ್ಮೋನಿಯಮ್‍ ವಾದ್ಯ; ಲೋಹದ ನಾಲಿಗೆಗಳಿಂದ ನಾದಗಳು ಹುಟ್ಟುವಂತೆ ಕೀಲಿಕೈಗಳನ್ನಳವಡಿಸಿದ ಮಣೆಯುಳ್ಳ ಒಂದು ಗಾಳಿವಾದ್ಯ.
  • ಅಂಗ; ಅವಯವ; ಸಾಮಾನ್ಯವಾಗಿ ವಿಶಿಷ್ಟವಾದ ಒಂದು ಕಾರ್ಯಮಾಡುವ ದೇಹ ಭಾಗ: vocal organs ಉಚ್ಚಾರಣಾಂಗಗಳು. disgestive organs ಜೀರ್ಣಾಂಗಗಳು.
  • (ಮುಖ್ಯವಾಗಿ ಹಾಸ್ಯ ಪ್ರಯೋಗ) ಶಿಶ್ನ; ಪುರುಷ ಜನನಾಂಗ.
  • (ಪ್ರಾಚೀನ ಪ್ರಯೋಗ) (ಒಬ್ಬನ) ಶಾರೀರ; ಧ್ವನಿ; ಕಂಠ: has a magnificent organ (ಅವನಿಗೆ) ಅದ್ಭುತವಾದ ಶಾರೀರವಿದೆ.
  • ವಾರ್ತಾವಾಹಕ ಯಾ ಅಭಿಪ್ರಾಯ ವಾಹಕ; (ಮುಖ್ಯವಾಗಿ ಒಂದು ಪಕ್ಷ, ಧ್ಯೇಯ, ಪಂಥ, ಉದ್ದೇಶ, ಮೊದಲಾದವುಗಳ) ಪ್ರಚಾರ ಪತ್ರಿಕೆ.
  • (ಪ್ರಾಚೀನ ಪ್ರಯೋಗ) (ನಿರ್ದಿಷ್ಟ ಸಾಮರ್ಥ್ಯದ ಸ್ಥಾನವೆಂದು ಭಾವಿಸಲಾಗಿದ್ದ) ಮೆದುಳಿನ ಭಾಗ.

  • organ builder
    ನಾಮವಾಚಕ
    ಆರ್ಗನ್‍ ವಾದ್ಯ ತಯಾರಕ.

    organ piano
    ನಾಮವಾಚಕ
    ಆರ್ಗನ್‍ ಪಿಯಾನೋ; ಆರ್ಗನ್‍ ವಾದ್ಯದಂತೆ ಎಡೆಬಿಡದೆ ನಾದ ಕೊಡುವ ಪಿಯಾನೋ ವಾದ್ಯ.

    organ-blower
    ನಾಮವಾಚಕ
    ಆರ್ಗನ್‍ಶ್ವಾಸಕ; ಆರ್ಗನ್‍ವಾದ್ಯದ ತಿದಿಯೊತ್ತುವ ವ್ಯಕ್ತಿ ಯಾ ಸಾಧನ.

    organ-grinder
    ನಾಮವಾಚಕ
    ಆರ್ಗನ್‍ವಾದಕ.

    organ-loft
    ನಾಮವಾಚಕ
    (ಚರ್ಚಿನಲ್ಲಿಯ ಯಾ ಗಾಯನ ಮಂದಿರದಲ್ಲಿಯ) ಆರ್ಗನ್‍ ವೇದಿಕೆ, ಅಟ್ಟ.

    organ-pipe
    ನಾಮವಾಚಕ
    ಆರ್ಗನ್‍ (ವಾದ್ಯದ) ಕೊಳವೆ(ಗಳಲ್ಲೊಂದು).

    organ-screen
    ನಾಮವಾಚಕ
    ಆರ್ಗನ್‍ ಜಾಲರಿ; (ಕೆಥೀಡ್ರಲ್‍ ಮೊದಲಾದವುಗಳಲ್ಲಿ) ಆರ್ಗನ್‍ ವಾದ್ಯವನ್ನು ಇಡಲು ನಿರ್ಮಿಸಿರುವ, ಅಲಂಕಾರ ಕೆತ್ತನೆ ಮಾಡಿದ, ಅಡ್ಡಗೋಡೆ.

    organ-stop
    ನಾಮವಾಚಕ
  • ಆರ್ಗನ್‍ ವಾದ್ಯದಲ್ಲಿ ಸದೃಶ ನಾದಗಳನ್ನು ಉಂಟು ಮಾಡುವ ಪಿಳ್ಳಂಗೋವಿಗಳ ಸಮೂಹ.
  • ಇವನ್ನು ನುಡಿಸುವ ಯಾಂತ್ರಿಕ ಸಾಧನದ ಹಿಡಿ.


  • logo