logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indignantly
ಕ್ರಿಯಾವಿಶೇಷಣ
ಸಾತ್ತ್ವಿಕ ಕ್ರೋಧದಿಂದ; ನ್ಯಾಯವಾಗಿ – ಕೋಪಗೊಂಡು, ರೇಗಿ, ಕೆರಳಿ.

indignation
ನಾಮವಾಚಕ ಪದಗುಚ್ಛ
(ನ್ಯಾಯವಾದ) ಕ್ರೋಧ; ಕೋಪ; ಸಿಟ್ಟು; ರೇಗಾಟ; ರೋಷ; ನೀಚತನ, ಅನ್ಯಾಯ, ಕೆಡುಕು, ದುರ್ನಡತೆ, ಮೊದಲಾದವುಗಳಿಂದ ಉಂಟಾದ ಸಾತ್ತ್ವಿಕ ಕ್ರೋಧ. righteous indignation ಸಾತ್ತ್ವಿಕ ಕ್ರೋಧ; ಯುಕ್ತವಾದ ಕೋಪ.

indignation-meeting
ನಾಮವಾಚಕ
ಕ್ರೋಧಸಭೆ; ಕೋಪಸೂಚಕ ಸಾರ್ವಜನಿಕ ಸಭೆ.

indignity
ನಾಮವಾಚಕ
(ಬಹುವಚನ indignities).
  • (ಬೇರೊಬ್ಬರ ವಿಷಯದಲ್ಲಿ ತನ್ನ ಯಾ ಬೇರೊಬ್ಬರಿಂದ ತಾನು ಅನುಭವಿಸಿದ) ಅಯುಕ್ತವರ್ತನೆ; ಅನುಚಿತ ವರ್ತನೆ; ಅಯೋಗ್ಯವಾದ ನಡೆವಳಿ, ನಡತೆ.
  • ಉಪೇಕ್ಷೆ; ಅಲಕ್ಷ್ಯ; ಅವಮಾನ; ಕಡೆಗಣಿಕೆ; ಹೀನೈಕೆ.
  • ಹೀನಾಯತೆ; ಯಾವುದರದೇ ಅವಮಾನಕರ, ಹೀನಾಯಕರ ಗುಣ: the indignity of my position ನನ್ನ ಸ್ಥಾನದ ಹೀನಾಯ ಗುಣ.

  • indigo
    ನಾಮವಾಚಕ
    (ಬಹುವಚನ indigos). ಇಂಡಿಗೋ:
  • ನೀಲಿ; ಹಿಂದೆ ಇಂಡಿಗೋಹೆರ ಕುಲದ ಸಸ್ಯಗಳಿಂದ ಪಡೆಯುತ್ತಿದ್ದ, ಈಗ ಕೃತಕವಾಗಿ ತಯಾರಿಸುವ ಒಂದು ನೀಲಿ ರಂಗು, ವರ್ಣದ್ರವ್ಯ.
  • ಇಂಡಿಗೋಹೆರ ಕುಲದ ಸಸ್ಯ.
  • ಕೃತಕವಾಗಿ ತಯಾರಿಸಿದ ಇಂಡಿಗೋ ವರ್ಣದ್ರವ್ಯ.
  • ಊದಾ ನೀಲಿ (ಬಣ್ಣ).

  • indigo blue
    ನಾಮವಾಚಕ
    = indigo(d).

    indigo bunting
    ನಾಮವಾಚಕ
    = indigo-bird.

    indigo snake
    ನಾಮವಾಚಕ
    = cribco.

    indigo-bird
    ನಾಮವಾಚಕ
    ಇಂಡಿಗೋ ಹಕ್ಕಿ; ಉತ್ತರ ಅಮೆರಿಕದ ಊದಾನೀಲಿ ಬಣ್ಣದ ತಲೆಯಿರುವ ಹಿಂಚ್‍ ಹಕ್ಕಿ.

    indigotic
    ಗುಣವಾಚಕ
    ಇಂಡಿಗೋನ ಯಾ ಅದಕ್ಕೆ ಸಂಬಂಧಿಸಿದ.


    logo