(ರೂಪಕವಾಗಿ) ಜೀರ್ಣಿಸಿಕೊಳ್ಳಲಾಗದ; ಅರಗಿಸಿಕೊಳ್ಳಲಾಗದ; ಸುಲಭವಾಗಿ ಓದಲು ಯಾ ಅರ್ಥಮಾಡಿಕೊಳ್ಳಲು ಕಷ್ಟವಾದ; ಓದಲಾಗದಷ್ಟು ಯಾ ಅರಿಯದಷ್ಟು ಜಟಿಲವಾದ: an indigestible mass of facts ಜೀರ್ಣಿಸಿಕೊಳ್ಳಲಾಗದಂಥ ವಿಷಯಗಳ ರಾಶಿ.
indigestion
ನಾಮವಾಚಕ
ಅಜೀರ್ಣ; ಆಹಾರ ಜೀರ್ಣವಾಗದಿರುವಿಕೆ; ಅರಗದ ಸ್ಥಿತಿ.
ಅಜೀರ್ಣದಿಂದಾಗುವ ನೋವು.
(ರೂಪಕವಾಗಿ) ಅಜೀರ್ಣ; ಅರಗದಿರುವಿಕೆ; ವಿಷಯಗಳನ್ನು ಅರಗಿಸಿಕೊಳ್ಳಲಾರದ ಯಾ ಗ್ರಹಿಸಿಕೊಳ್ಳಲಾಗದ ಮಾನಸಿಕ ಸ್ಥಿತಿ: staleness on the part of the teachers and indigestion on the part of the students ಉಪಾಧ್ಯಾಯರ ನೀರಸತೆ, ವಿದ್ಯಾರ್ಥಿಗಳ ಅಜೀರ್ಣತೆ.
indigestive
ಗುಣವಾಚಕ
ಅಜೀರ್ಣದಿಂದ ನರಳುತ್ತಿರುವ.
ಅಜೀರ್ಣಕಾರಿ; ಅಜೀರ್ಣವನ್ನುಂಟುಮಾಡುವ.
indign
ಗುಣವಾಚಕ
(ಪ್ರಾಚೀನ ಪ್ರಯೋಗ) ಅಯೋಗ್ಯ; ತಗದ.
indignant
ಗುಣವಾಚಕ
(ವ್ಯಕ್ತಿ, ವಸ್ತುಗಳ ವಿರುದ್ಧ) ಸಾತ್ತ್ವಿಕ ಕ್ರೋಧವುಳ್ಳ; ನ್ಯಾಯವಾಗಿ ಕೋಪಗೊಂಡ, ರೇಗಿದ, ಕೆರಳಿದ; ಕುಪಿತ; ಕೋಪವೂ ಧಿಕ್ಕಾರವೂ ಕೂಡಿದ ಯಾ ತನಗಾದ ಅನ್ಯಾಯಕ್ಕಾಗಿ ರೇಗುವ ಮನೋಭಾವವುಳ್ಳ.