logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ordinariness
ನಾಮವಾಚಕ
ಸಾಮಾನ್ಯತೆ; ಸಾಧಾರಣ ಸ್ಥಿತಿ, ಲಕ್ಷಣ.

ordinary
ಗುಣವಾಚಕ ಪದಗುಚ್ಛ
  • ಯಥಾಕ್ರಮದ ಯಥಾಸ್ಥಿತಿಯ.
    1. ಸಾಮಾನ್ಯ; ಸಾಧಾರಣ; ವಾಡಿಕೆಯ; ಮಾಮೂಲಿನ; ರೂಢಿಯಾಗಿರುವ; ಬಳಕೆಯಲ್ಲಿರುವ: in the ordinary course of events ಘಟನೆಗಳ ಸಾಧಾರಣ ರೂಢಿಯ ಕ್ರಮದಲ್ಲಿ.
    2. ನೀರಸ; ಸರ್ವಸಾಮಾನ್ಯ; ವಿಶೇಷವಲ್ಲದ; ಅಸಾಧಾರಣವಲ್ಲದ: ordinary people ಸಾಮಾನ್ಯಜನ.
  • (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) (ನ್ಯಾಯಾಧೀಶನ ವಿಷಯದಲ್ಲಿ) ಪ್ರತ್ಯಕ್ಷ ಯಾ ಪದನಿಮಿತ್ತ ಅಧಿಕಾರವುಳ್ಳ (ಬೇರೊಬ್ಬರ ಪ್ರತಿನಿಧಿಯಾಗಿ ಬಂದದ್ದಲ್ಲದ).
  • (ಸ್ಟಾಕು, ಷೇರು, ಮೊದಲಾದವುಗಳ ವಿಷಯದಲ್ಲಿ) ಸಾಮಾನ್ಯ; ವಿಶೇಷ ಸವಲತ್ತುಗಳಿಲ್ಲದ.

  • ordinary
    ನಾಮವಾಚಕ ಪದಗುಚ್ಛ
    the Ordinary
  • (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ಪದನಿಮಿತ್ತ, ಸ್ಥಾನನಿಮಿತ್ತ–ಅಧಿಕಾರಿ; (ಬೇರೊಬ್ಬರ ಪ್ರತಿನಿಧಿಯಾಗಿ ಅಲ್ಲದೆ) ತನ್ನ ಸ್ಥಾನದಿಂದ ಪಡೆದ ಅಧಿಕಾರವುಳ್ಳವನು, ಮುಖ್ಯವಾಗಿ ನ್ಯಾಯಾಧೀಶ.
  • (Ordinary) (ಕ್ರೈಸ್ತಧರ್ಮ)
    1. ಪೂಜಾವಿಧಿ (ಗ್ರಂಥ).
    2. ದಿನದಿಂದ ದಿನಕ್ಕೆ ಬದಲಾಗದ ಪೂಜೆಯ ನಿತ್ಯವಿಧಿ; ಮುಖ್ಯವಾಗಿ ಪ್ರಭುಭೋಜನ ಸಂಸ್ಕಾರದ ಪೂಜಾವಿಧಿ ನಿಯಮ.
  • (ಬ್ರಿಟಿಷ್‍ ಪ್ರಯೋಗ) (ಚರಿತ್ರೆ)
    1. (ಭೋಜನಶಾಲೆಯಲ್ಲಿ) ಗೊತ್ತಾದ ಕಾಲಕ್ಕೆ, ಗೊತ್ತಾದ ಬೆಲೆಗೆ ಬಡಿಸುವ ಊಟ; ಸಾಮಾನ್ಯ ಊಟ; ಸಾರ್ವಜನಿಕ ಊಟ.
    2. ಇದನ್ನು ಒದಗಿಸುವ ಹೋಟೆಲು.
  • (ಅಮೆರಿಕನ್‍ ಪ್ರಯೋಗ) ಹೋಟೆಲು.
  • (ವಂಶಲಾಂಛನ ವಿದ್ಯೆ) (ಅತ್ಯಂತ ಪ್ರಾಚೀನವೂ, ಸರಳವೂ, ಸಾಧಾರಣವೂ ಆದ) ಸಾಮಾನ್ಯ ಲಾಂಛನ.
  • (ಅಮೆರಿಕನ್‍ ಪ್ರಯೋಗ) (ಚರಿತ್ರೆ) ಆರ್ಡಿನರಿ; ಒಂದು ಚಕ್ರ ಬಹುದೊಡ್ಡದೂ ಇನ್ನೊಂದು ಬಹುಸಣ್ಣದೂ ಆದ, ಹಿಂದಿನ ಕಾಲದ ಬೈಸಿಕಲ್ಲು. Figure: ordinary-6

  • ordinate
    ನಾಮವಾಚಕ
    (ಜ್ಯಾಮಿತಿ) ಆರ್ಡಿನೇಟ್‍; ಒಂದು ಸಮತಲದಲ್ಲಿಯ ಯಾವುದೋ ಬಿಂದುವಿನ ಸ್ಥಾನವನ್ನು ನಿರ್ದೇಶಿಸಲು ಬಳಸುವ ಎರಡು ನಿರ್ದೇಶಕಗಳಲ್ಲಿ ಒಂದಾದ ನಿರ್ದೇಶಕ ಬಿಂದುವಿಗೂ ಅಕ್ಷಕ್ಕೂ ಇರುವ ದೂರ.

    ordination
    ನಾಮವಾಚಕ
  • ಶ್ರೇಣೀಕರಣ; ವರ್ಗೀಕರಣ; ಅಂತಸ್ತುಗಳಾಗಿ ವಿಂಗಡಿಸುವುದು.
  • (ಕ್ರೈಸ್ತಧರ್ಮ) ದೀಕ್ಷಾಪ್ರದಾನ:
    1. ದೀಕ್ಷೆ ಕೊಡುವುದು.
    2. (ಚರ್ಚುಗಳ) ಪಾದ್ರಿವರ್ಗಕ್ಕೆ ಸೇರಿಸುವುದು.
  • ಕಟ್ಟಳೆ ಮಾಡುವುದು; ವಿಧಿಸುವುದು; (ಅನು)ಶಾಸನ ಮಾಡುವುದು.

  • ordnance
    ನಾಮವಾಚಕ ಪದಗುಚ್ಛ
  • (ಪೀಠದ ಮೇಲಿಟ್ಟು ಸಿದ್ಧಪಡಿಸಿಟ್ಟ) ಫಿರಂಗಿಗಳು.
  • (ಬ್ರಿಟಿಷ್‍ ಪ್ರಯೋಗ) ಗೋಲಂದಾಜು ಇಲಾಖೆ; ಸೈನಿಕ ಸಾಮಗ್ರಿಗಳ ಶಸ್ತ್ರಗಳ ಖಾತೆ.

  • ordonnance
    ನಾಮವಾಚಕ
    (ಮುಖ್ಯವಾಗಿ ಸಾಹಿತ್ಯಕೃತಿಯ ಯಾ ವಾಸ್ತುಶಿಲ್ಪದ) ಸುಬದ್ಧ, ವ್ಯವಸ್ಥಿತ–ವಿನ್ಯಾಸ, ಸಂವಿಧಾನ, ಅಂಗಸಂಯೋಜನೆ.

    Ordovician
    ಗುಣವಾಚಕ
    (ಭೂವಿಜ್ಞಾನ) ಆರ್ಡವಿಷಿಯನ್‍; ಅಕಶೇರುಕ ಸಮುದ್ರಜೀವಿಗಳು ಹೇರಳವಾಗಿಯೂ, ಮೊತ್ತ ಮೊದಲ ಕಶೇರುಕಗಳ ವಿರಳವಾಗಿಯೂ ಕಂಡುಬರುವ, ಪ್ರಾಗ್ಜೀವಿಶಕದ ಎರಡನೆಯ ಅವಧಿಯ ಮತ್ತು ಆ ಅವಧಿಗೆ ಸಂಬಂಧಿಸಿದ.

    Ordovician
    ನಾಮವಾಚಕ
    ಆರ್ಡವಿಷಿಯನ್‍; ಅಕಶೇರುಕ ಜೀವಿಗಳು ಹೇರಳವಾಗಿಯೂ, ಮೊತ್ತಮೊದಲ ಕಶೇರುಕಗಳು ವಿರಳವಾಗಿಯೂ ಕಂಡುಬರುವ, ಪ್ರಾಗ್ಜೀವಿಶಕದ ಎರಡನೆಯ ಅವಧಿ ಯಾ ವ್ಯವಸ್ಥೆ.

    ordure
    ನಾಮವಾಚಕ
    1. ಮಲ; ಹೇಲು.
    2. ಸಗಣಿ; ಹಿಕ್ಕೆ.
  • ಹೊಲಸು ಮಾತು; ಬಂಡುನುಡಿ; ಅಶ್ಲೀಲ ಭಾಷೆ.


  • logo