logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indiction
ನಾಮವಾಚಕ
  • ಪಂಚದಶವಾರ್ಷಿಕ; ಹದಿನೈದು ವರ್ಷಗಳ ಒಂದು ಕಾಲಚಕ್ರ; ಕ್ರಿಸ್ತಶಕ 312ನೆಯ ಸೆಪ್ಟೆಂಬರ್‍ 1ರಿಂದ, ಕಾನ್‍ಸ್ಟೆಂಟೈನನು ಪ್ರಾರಂಭಿಸಿದ, ರೋಮನ್‍ ಚಕ್ರಾಧಿಪತ್ಯದ ಹಣಕಾಸಿನ ವ್ಯವಸ್ಥೆಯ ಕಾಲಮಾನ.
  • (ಪ್ರತಿ ಹದಿನೈದು ವರ್ಷಕಾಲದ ಆರಂಭದಲ್ಲಿ ರೋಮನ್‍ ಚಕ್ರವರ್ತಿಗಳು ವಿಧಿಸುತ್ತಿದ್ದ)
    1. ಆಸ್ತಿ ಕಂದಾಯದ ವಿಧಾನ.
    2. ಕಂದಾಯ.
  • (ಪ್ರಾಚೀನ ಪ್ರಯೋಗ) ಪ್ರಕಟಣೆ; ಸಾರುವುದು.

  • indictment
    ನಾಮವಾಚಕ ಪದಗುಚ್ಛ
    bill of indictment (ಚರಿತ್ರೆ ಮತ್ತು ಅಮೆರಿಕನ್‍ ಪ್ರಯೋಗ) ಮಹಾನ್ಯಾಯದರ್ಶಿ ಮಂಡಲಿಗೆ ಒಪ್ಪಿಸಿದ ಆಪಾದನೆ ಪತ್ರ.
  • (ನ್ಯಾಯಶಾಸ್ತ್ರ) ಅಭಿಯೋಗ; ವಿಧಿವತ್ತಾದ ಆಪಾದನೆ, ದೋಷಾರೋಪಣೆ.
  • (ನ್ಯಾಯಶಾಸ್ತ್ರ) ಅಭಿಯೋಗ ಪ್ರಕ್ರಿಯೆ; ವಿಧಿವತ್ತಾದ ನ್ಯಾಯಾಲಯದ ಮುಂದೆ ದೋಷ ಹೊರಿಸುವ ಕ್ರಮ.
  • ಆಪಾದನ ಪತ್ರ; ಅಭಿಯೋಗಪತ್ರ.

  • Indies
    ನಾಮವಾಚಕ ಪದಗುಚ್ಛ
    (ಬಹುವಚನ) (ಪ್ರಾಚೀನ ಪ್ರಯೋಗ) ಭಾರತ ಹಾಗೂ ನೆರೆಹೊರೆಯ ಪ್ರದೇಶಗಳು.
  • East Indies ಈಸ್ಟ್‍ ಇಂಡೀಸ್‍; ಇಂಡಿಯಾದ ಪೂರ್ವಕ್ಕಿರುವ ದ್ವೀಪಗಳು ಮೊದಲಾದವು.
  • the Indies (ಪ್ರಾಚೀನ ಪ್ರಯೋಗ) ಭಾರತ ಮತ್ತು ಸುತ್ತಮುತ್ತಲ ಪ್ರದೇಶಗಳು.
  • West Indies ವೆಸ್ಟ್‍ ಇಂಡೀಸ್‍; ಮಧ್ಯ ಅಮೆರಿಕದ ದ್ವೀಪಗಳು.

  • indifference
    ನಾಮವಾಚಕ
  • ಔದಾಸೀನ್ಯ; ಅನಾದರ; ಅನಾಸಕ್ತಿ; ಉಪೇಕ್ಷೆ; ಅಲಕ್ಷ್ಯ; ತಾತ್ಸಾರ; ಅಸಡ್ಡೆ; ಆಸಕ್ತಿ ಯಾ ಗಮನ ಇಲ್ಲದಿರುವುದು.
  • ತಾಟಸ್ಥ್ಯ; ನಿಷ್ಪಕ್ಷಪಾತ; ಯಾವ ಕಡೆಗೂ ಒಲವಿಲ್ಲದಿರುವಿಕೆ: trusting in your wisdom and indifference ನಿನ್ನ ವಿವೇಕ ಹಾಗೂ ನಿಷ್ಪಕ್ಷಪಾತ ಸ್ವಭಾವವನ್ನು ನಂಬಿ.
  • ಅಪ್ರಾಧಾನ್ಯ; ಅಪ್ರಾಮುಖ್ಯ: a matter of indifference ಅಪ್ರಾಮುಖ್ಯದ ವಿಷಯ.

  • indifferent
    ಗುಣವಾಚಕ ಪದಗುಚ್ಛ
  • ಅಸಡ್ಡೆಯ; ಅಲಕ್ಷ್ಯದ; ಅನಾದರದ; ತಾತ್ಸಾರದ; ಉದಾಸೀನ ಭಾವದ.
  • ನಿಷ್ಪಕ್ಷಪಾತದ; ತಾಟಸ್ಥ್ಯ ಸ್ವಭಾವದ.
  • ಸುಮಾರಾದ; ಸಾಧಾರಣ; ಒಳ್ಳೆಯದೂ ಅಲ್ಲದ, ಕೆಟ್ಟದ್ದೂ ಅಲ್ಲದ: an indifferent specimen (ತೀರ) ಸಾಧಾರಣವಾದ ನಮೂನೆ.
  • ಅಷ್ಟೇನೂ ಒಳ್ಳೆಯದಲ್ಲದ; ಕೆಟ್ಟದ್ದೆಂದು ಎಣಿಸಬಹುದಾದ.
  • ಬಹುತೇಕ ಕೆಟ್ಟದೆನ್ನಬಹುದಾದ.
  • (ರಾಸಾಯನಿಕ, ವಿದ್ಯುತ್‍, ಕಾಂತ, ಮೊದಲಾದ ಗುಣಗಳಲ್ಲಿ) ತಟಸ್ಥವಾಗಿರುವ.
  • ಗೌಣ; ಪ್ರಮುಖವಲ್ಲದ; ಅಪ್ರಧಾನವಾದ: whether you do it or not is quite indifferent ನೀನು ಅದನ್ನು ಮಾಡುತ್ತೀಯೋ ಬಿಡುತ್ತೀಯೋ, ಅದು ಮುಖ್ಯವಲ್ಲ.

  • indifferentism
    ನಾಮವಾಚಕ
    (ಮುಖ್ಯವಾಗಿ ಧಾರ್ಮಿಕ ಮತಭೇದಗಳ ವಿಷಯದಲ್ಲಿ) ಉದಾಸೀನತಾ ವಾದ; ತಾಟಸ್ಥ್ಯ; ನಿರಾಸಕ್ತಿ.

    indifferentist
    ನಾಮವಾಚಕ
    ಉದಾಸೀನತಾವಾದಿ; ತಟಸ್ಥವಾದಿ.

    indifferently
    ಕ್ರಿಯಾವಿಶೇಷಣ
  • ಒಂದೇ ಸಮನಾಗಿ; ಒಂದೇ ರೀತಿ; ಏಕಪ್ರಕಾರವಾಗಿ; ನಿಷ್ಪಕ್ಷಪಾತವಾಗಿ; ತಾರತಮ್ಯವಿಲ್ಲದೆ; ಭೇದಭಾವವಿಲ್ಲದೆ: beloved indifferently of the senators and the commons ಸೆನೆಟರ್‍ಗಳು ಮತ್ತು ಸಾಮಾನ್ಯರು, ಎಲ್ಲರೂ, ಒಂದೇ ಸಮನಾಗಿ ಪ್ರೀತಿಸಿದ.
  • ಉದಾಸೀನವಾಗಿ; ಅಸಡ್ಡೆಯಿಂದ; ಅನಾದರದಿಂದ; ಉಪೇಕ್ಷೆಯಿಂದ.
  • ಅಷ್ಟೇನೂ ಒಳ್ಳೆಯದ್ದಾಗಿರದೆ; ಕೆಟ್ಟದ್ದೆನ್ನಬಹುದಾದ ರೀತಿಯಲ್ಲಿ: very indifferently ಬಹಳ ಕೆಟ್ಟದ್ದಾಗಿ.

  • indigence
    ನಾಮವಾಚಕ
    ಬಡತನ; ದಾರಿದ್ರ್ಯ; ಅಕಿಂಚನತೆ.

    indigene
    ನಾಮವಾಚಕ
    (ಪ್ರಾಚೀನ ಪ್ರಯೋಗ) ದೇಶೀಯ; ಸ್ಥಳೀಯ; ಆಯಾ ಸ್ಥಳಕ್ಕೆ ಸಂಬಂಧಿಸಿದ ಪ್ರಾಣಿ, ಸಸ್ಯ, ಮೊದಲಾದವು.


    logo