logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

order-paper
ನಾಮವಾಚಕ
(ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿ) ಅಂದಿನ ಕಾರ್ಯಕ್ರಮದ (ಲಿಖಿತ ಯಾ ಮುದ್ರಿತ) ಪಟ್ಟಿ; ಅಜೆಂಡ; ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಪಟ್ಟಿ.

orderer
ನಾಮವಾಚಕ
ಆದೇಶಕ; ಆದೇಶಿಸುವವ; ಆದೇಶ ಆಜ್ಞೆ ನೀಡುವ ವ್ಯಕ್ತಿ.

orderliness
ನಾಮವಾಚಕ
ಒಪ್ಪ ಓರಣ; (ಸು)ವ್ಯವಸ್ಥೆ; (ಸ)ಕ್ರಮವಾಗಿರುವಿಕೆ; ಅಣಿಯಾಗಿರುವುದು; ವ್ಯವಸ್ಥಿತ–ಸ್ಥಿತಿ, ಗುಣ, ವರ್ತನೆ.

orderly
ಗುಣವಾಚಕ ಪದಗುಚ್ಛ
  • ಕ್ರಮಬದ್ಧವಾಗಿ ಜೋಡಿಸಿದ, ಅಳವಡಿಸಿದ, ಅಣಿಗೊಳಿಸಿದ; ಒಪ್ಪ ಓರಣಗೊಳಿಸಿದ; ವ್ಯವಸ್ಥೆಗೊಳಿಸಿದ; ವ್ಯವಸ್ಥಿತ.
  • ಕ್ರಮಬದ್ಧವಾಗಿ, ನಿಯಮಬದ್ಧವಾಗಿ–ನಡೆದುಕೊಳ್ಳುವ; ನಿಯಮಗಳಿಗೆ ವಿಧೇಯ; ಶಿಸ್ತು ಪಾಲಿಸುವ.
  • (ಸೈನ್ಯ)
    1. ಆಜ್ಞೆಯ; ಆಜ್ಞೆಗಳಿಗೆ ಸಂಬಂಧಿಸಿದ.
    2. ಆಜ್ಞಾವಾಹಕ; ಆಜ್ಞೆಯನ್ನು ಮುಟ್ಟಿಸುವ ಕರ್ತವ್ಯವುಳ್ಳ.
    3. ಆಜ್ಞಾಪಾಲನೆಯ; ಆಜ್ಞೆಯನ್ನು ಪರಿಪಾಲಿಸಬೇಕಾದ.

  • orderly
    ನಾಮವಾಚಕ
  • (ಸೈನ್ಯ) ಅಧಿಕಾರಿಯ ಬಳಿಯಲ್ಲೇ ಇದ್ದು ಅವನ ಅಪ್ಪಣೆಗಳನ್ನು ನಡೆಸುವ ಸೈನಿಕ; ಆಜ್ಞಾವಾಹಕ; ತೈನಾತಿ.
  • (ಆಸ್ಪತ್ರೆಯಲ್ಲಿ) ಗುಡಿಸುವವನು; ಚೊಕ್ಕಟಮಾಡುವವನು.

  • ordinal
    ಗುಣವಾಚಕ
  • (ಸಂಖ್ಯೆಗಳ ಶ್ರೇಣಿಯಲ್ಲಿ) ಕ್ರಮಸೂಚಕ; ಸ್ಥಾನಸೂಚಕ: ordinal numbers (ಒಂದನೆಯ, ಎರಡನೆಯ, ಮೊದಲಾದ) ಕ್ರಮಸಂಖ್ಯೆಗಳು.
  • (ಜೀವವಿಜ್ಞಾನ) (ಯಾವುದೇ) ವರ್ಗದ; ವರ್ಗೀಯ.

  • ordinal
    ನಾಮವಾಚಕ
  • (ಬಿಷಪ್‍ ಮೊದಲಾದ ಪಾದ್ರಿಗಳಿಗೆ ದೀಕ್ಷೆ ಕೊಡುವಾಗ ಬಳಸುವ) ದೀಕ್ಷಾ(ವಿಧಿ) ಗ್ರಂಥ; ದೀಕ್ಷೆ ಕೊಡುವಲ್ಲಿ ಅನುಸರಿಸಬೇಕಾದ ಕಾರ್ಯಗಳನ್ನು ವಿಧಿಸುವ ಗ್ರಂಥ.
  • (ಸಂಖ್ಯೆಗಳ ಶ್ರೇಣಿಯಲ್ಲಿ) ಕ್ರಮಸೂಚಕ (ಸಂಖ್ಯೆ); ಸ್ಥಾನಸೂಚಕ (ಸಂಖ್ಯೆ), ಉದಾಹರಣೆಗೆ ‘first’, ‘second’, ‘third’, ಮೊದಲಾದವು.

  • ordinance
    ನಾಮವಾಚಕ
  • (ಅಧಿಕಾರಯುತ) ನಿರ್ದೇಶ; ಆದೇಶ; ವಿಧಿ; ಶಾಸನ; ವಿಶೇಷಾಜ್ಞೆ; ಸುಗ್ರೀವಾಜ್ಞೆ; ಅಧಿಶಾಸನ.
  • ಧಾರ್ಮಿಕ ಕ್ರಿಯೆ, ವಿಧಿ.
  • (ಪ್ರಾಚೀನ ಪ್ರಯೋಗ) = ordonnance.
  • ಸ್ಥಳೀಯ ಅಧಿಕಾರ ವಿಧಿಸಿದ–ಶಾಸನ, ಕಾನೂನು.

  • ordinand
    ನಾಮವಾಚಕ
    (ಕ್ರೈಸ್ತ) (ಯಾವುದೇ ವರ್ಗದ) ಪಾದ್ರಿಯ ಸ್ಥಾನಕ್ಕೆ ದೀಕ್ಷಿತನಾಗಲು ಬಯಸುವ ಅಭ್ಯರ್ಥಿ; ದೀಕ್ಷಾರ್ಥಿ.

    ordinarily
    ಕ್ರಿಯಾವಿಶೇಷಣ
    ಸಾಮಾನ್ಯವಾಗಿ; ಸಾಧಾರಣವಾಗಿ.


    logo