logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indication
ನಾಮವಾಚಕ
  • ಸೂಚನೆ; ನಿರ್ದೇಶನ.
  • ಗುರುತು; ಲಕ್ಷಣ; ತೋರಿಕೆ; ಚಿಹ್ನೆ; ಸಂಕೇತ.
  • ಸೂಚನೆ; ಸೂಚಿಸಿದ್ದು ಯಾ ತೋರಿಸಿದ್ದು.
  • ಸೂಚಿತ ಸಂಖ್ಯೆ; ಮಾಪಕ ಯಾ ಉಪಕರಣ ಸೂಚಿಸಿದ ಸಂಖ್ಯೆ.

  • indicative
    ಗುಣವಾಚಕ
  • (ವ್ಯಾಕರಣ) (ಕ್ರಿಯಾಪದದ ಭಾವಾರ್ಥಕದ ವಿಷಯದಲ್ಲಿ) ನಿಶ್ಚಯಾರ್ಥಕ; (ಅದು ಅಭಿಪ್ರಾಯ ಯಾ ಅಭಿಲಾಶೆ ಎಂದಾಗಿರದೆ) ಒಂದು ವಿಷಯವನ್ನು ನಡೆದದ್ದೆಂದು, ನಿಶ್ಚಯಾಂಶವೆಂದು ಹೇಳುವ.
  • ಸೂಚಕ; ನಿರ್ದೇಶಕ; ಸೂಚನೆ ಕೊಡುವ.

  • indicative
    ನಾಮವಾಚಕ
    (ವ್ಯಾಕರಣ) ನಿರ್ದೇಶಾರ್ಥ; ನಿಶ್ಚಯಾರ್ಥ; ನಿರ್ದೇಶಕ ಕ್ರಿಯಾರ್ಥವನ್ನು ಸೂಚಿಸುವ ಧಾತುರೂಪ: Pravin plays football ಎಂಬ ವಾಕ್ಯದಲ್ಲಿ plays ಎಂಬುದು ನಿರ್ದೇಶಾರ್ಥಕ ಕ್ರಿಯಾಪದ.

    indicatively
    ಕ್ರಿಯಾವಿಶೇಷಣ
  • (ವ್ಯಾಕರಣ) ( ಕ್ರಿಯಾಪದದ ವಿಷಯದಲ್ಲಿ) ನಿರ್ದೇಶಾರ್ಥದಲ್ಲಿ; ನಿಶ್ಚಯಾರ್ಥದಲ್ಲಿ.
  • ಸೂಚನೆಗಳ ಪ್ರಕಾರ; ಸೂಚನೆಗಳಿಗೆ ಯಾ ಲಕ್ಷಣಗಳಿಗೆ ಅನುಗುಣವಾಗಿ.
  • ಸೂಚ್ಯವಾಗಿ; ಸೂಚಕವಾಗಿ; ಸೂಚಿಸುವಂತೆ.

  • indicator
    ನಾಮವಾಚಕ
  • ಸೂಚಕ:
    1. ಯಾವುದನ್ನೇ ಸೂಚಿಸುವ ವ್ಯಕ್ತಿ, ವಸ್ತು, ಮೊದಲಾದವು.
    2. ಯಂತ್ರಗಳ ಸ್ಥಿತಿ ಸೂಚಿಸಲು ಜೋಡಿಸಲಾಗಿರುವ ಸಾಧನ.
    3. ದಾಖಲೆ ಸೂಚಕ; ಉಪಕರಣ ಮೊದಲಾದವುಗಳಿಗೆ ಅಳವಡಿಸಿರುವ, ಯಾವುದನ್ನೇ ದಾಖಲಿಸುವ, ಸೂಚಿಸುವ ಸಾಧನ.
    4. (ರಸಾಯನವಿಜ್ಞಾನ) ದ್ರಾವಣದ ಆಈಯತೆ ಯಾ ಕ್ಷಾರೀಯತೆಯನ್ನು ಸಾಮಾನ್ಯವಾಗಿ ತನ್ನ ಬಣ್ಣದಿಂದ ಸೂಚಿಸಬಲ್ಲ ಪದಾರ್ಥ, ಸಾಮಾನ್ಯವಾಗಿ ಒಂದು ಕಾರ್ಬನಿಕ ವರ್ಣದ್ರವ್ಯ.
  • ಸೂಚಕ ಫಲಕ; ರೈಲ್ವೆ ಸ್ಟೇಷನ್‍ ಮೊದಲಾದವುಗಳಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಕೊಡುವ ಹಲಗೆ ಯಾ ಬೋರ್ಡು.
  • ದಿಕ್ಕುಸೂಚಿ; ತಿರುಗುಸೂಚಕ; ಇಂಡಿಕೇಟರು; ವಾಹನ ಮೊದಲಾದವು ಎಡ ಯಾ ಬಲಕ್ಕೆ ತಿರುಗುವುದನ್ನು ಸೂಚಿಸಲು ಅದಕ್ಕೆ ಜೋಡಿಸಿರುವ ಒಂದು ಸಾಧನ (ಮುಖ್ಯವಾಗಿ ಹತ್ತಿ ಆರುವ ಕೆಂಪುದೀಪ).

  • indicatory
    ಗುಣವಾಚಕ
    = 1indicative(2).

    indices
    ನಾಮವಾಚಕ
    index ಪದದ ಬಹುವಚನ

    indicium
    ನಾಮವಾಚಕ
    (ಮುಖ್ಯವಾಗಿ ಬಹುವಚನದಲ್ಲಿ indicia).
  • ಸೂಚನೆ; ಚಿಹ್ನೆ.
  • ಗುರುತು; ಅಂಕನ; ಮುದ್ರೆ; ಗುರುತಿಸುವ ಚಿಹ್ನೆ.
  • (ಅಮೆರಿಕನ್‍ ಪ್ರಯೋಗ) ಅಂಚೆಠಸ್ಸೆ; ಅಂಚೆಯ ತೆರ ಸಂದಾಯವಾಗಿದೆ ಎಂಬುದನ್ನು ಸೂಚಿಸುವ ಮುದ್ರೆ, ಗುರುತು.

  • indict
    ಸಕರ್ಮಕ ಕ್ರಿಯಾಪದ
  • (ಅಪರಾಧಕ್ಕಾಗಿ ಯಾ ಅಪರಾಧಿಯಾಗಿ ಯಾ ಅಪರಾಧದ ಮೇಲೆ, ಒಬ್ಬನ ಮೇಲೆ, ಮುಖ್ಯವಾಗಿ ಕಾನೂನನ್ನನುಸರಿಸಿ) ತಪ್ಪುಹೊರಿಸು; ದೋಷಾರೋಪಣೆ ಮಾಡು; ಅಭಿಯೋಗಿಸು.
  • ದೂಷಿಸು; ಆರೋಪಿಸು; ಆಪಾದಿಸು.

  • indictable
    ಗುಣವಾಚಕ
  • ತಪ್ಪು ಹೊರಿಸಬಹುದಾದ; ಅಭಿಯೋಗಿಸಬಹುದಾದ: an indictable offence ಅಭಿಯೋಗ್ಯ ಅಪರಾಧ.
  • ಆಪಾದನೀಯ; ಆರೋಪಣೀಯ; ತಪ್ಪಿಗೆ ಗುರಿಪಡಿಸುವ; ಆರೋಪಣೆಗೆ ಗುರಿ ಮಾಡುವ.


  • logo