logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ord.
ಸಂಕ್ಷಿಪ್ತ
ordinary.

ordain
ಸಕರ್ಮಕ ಕ್ರಿಯಾಪದ
  • (ಕ್ರೈಸ್ತಧರ್ಮ)
    1. ವಿಧಿ ಪೂರ್ವಕವಾಗಿ ಪಾದ್ರಿಯ ಸ್ಥಾನಕ್ಕೆ ನೇಮಿಸು.
    2. ಪಾದ್ರಿಯ ದೀಕ್ಷೆ ಕೊಡು: he was an ordained priest ಅವನೊಬ್ಬ ವಿಧಿವತ್ತಾಗಿ ನೇಮಕಗೊಂಡ ಯಾ ದೀಕ್ಷೆ ಪಡೆದ ಪಾದ್ರಿ.
  • (ದೇವರು, ವಿಧಿ, ಮೊದಲಾದವುಗಳ ವಿಷಯದಲ್ಲಿ) ಮೊದಲೇ ಗೊತ್ತು ಮಾಡುವ; ನಿಷ್ಕರ್ಷಿಸು; ಸಂಕಲ್ಪಿಸು; ಹಣೆಯಲ್ಲಿ ಬರೆ ವಿಧಿಸು; ನಿಯಾಮಕ ಮಾಡು: has ordained us to die ನಾವು ಸಾಯಲೇಬೇಕೆಂದು ವಿಧಿಸಿದ್ದಾನೆ, ವಿಧಿಸಿದೆ.
  • ಅಧಿಕೃತವಾಗಿ ನೇಮಿಸು; ವಿಧಿಸು; ಕಟ್ಟಳೆ ಮಾಡು: what the laws ordain ಶಾಸನಗಳ ವಿಧಿಸುವಂತಹದು.

  • ordainer
    ನಾಮವಾಚಕ
  • ವಿಧಿವತ್ತಾಗಿ ಪಾದ್ರಿಯ ದೀಕ್ಷೆ ಕೊಡುವವ.
  • ನಿಯಾಮಕ; ವಿಧಿಸುವವ.

  • ordainment
    ನಾಮವಾಚಕ
    (ವಿರಳ ಪ್ರಯೋಗ)
  • ಕಟ್ಟಳೆ; ಆಜ್ಞೆ.
  • ನಿಯಮನ; ಕಟ್ಟಳೆ ಮಾಡುವುದು; ಆಜ್ಞೆ ವಿಧಿಸುವುದು.

  • ordeal
    ನಾಮವಾಚಕ ಪದಗುಚ್ಛ
    ordeal tree ಅಗ್ನಿಪರೀಕ್ಷೆ ಮರ, ವೃಕ್ಷ; ಹಿಂದೆ ಅಗ್ನಿಪರೀಕ್ಷೆಗಳಲ್ಲಿ ಬಳಸುತ್ತಿದ್ದ ಒಂದು ಬಗೆಯ ಮರ (ಈ ಮರದ ಹಣ್ಣು ವಿಷಪೂರಿತವಾಗಿದ್ದು ಅದನ್ನು ಅಗ್ನಿಪರೀಕ್ಷೆಗಳಲ್ಲಿ ಬಳಸುತ್ತಿದ್ದರು).
  • ದಿವ್ಯ; ತಪ್ಪಿತಸ್ಥನೆಂಬ ಶಂಕೆಗೊಳಪಟ್ಟವನು ಅಪರಾಧಿಯೆ ಅಲ್ಲವೆ ಎಂಬುದನ್ನು ನಿರ್ಣಯಿಸಲು ಪೂರ್ವದಲ್ಲಿ ರೂಢಿಯಲ್ಲಿದ್ದ (ಉದಾಹರಣೆಗೆ ಕುದಿಯುವ ನೀರಿನಲ್ಲಿ ಕೈ ಅದ್ದಿಸಿ ಅದು ಸುಡದಿದ್ದಲ್ಲಿ ಅವನು ನಿರಪರಾಧಿಯೆಂದು ದೇವರೇ ಯಾ ದೈವವೇ ತೀರ್ಮಾನಿಸಿತೆಂದು ಭಾವಿಸುತ್ತಿದ್ದ) ಉಗ್ರ ಪರೀಕ್ಷೆ.
  • (ಶೀಲ, ಸಹನೆಗಳನ್ನು ತೀವ್ರವಾಗಿ) ಪರೀಕ್ಷಿಸುವ ಘಟನೆ, ಅನುಭವ; ಅಗ್ನಿಪರೀಕ್ಷೆ; ವಿಷಮ ಪರೀಕ್ಷೆ.

  • order
    ನಾಮವಾಚಕ ಪದಗುಚ್ಛ
  • ಶ್ರೇಣಿ; ಸೋಪಾನ; ಸಾಲು; ಪಂಕ್ತಿ (ಈಗ ವಿರಳ ಪ್ರಯೋಗ): order on order of sculptured figures ಶ್ರೇಣಿಯ ಮೇಲೆ ಶ್ರೇಣಿಯಾಗಿದ್ದ ಶಿಲ್ಪಕೃತಿಗಳು.
  • ಸಾಮಾಜಿಕ ವರ್ಗ, ದರ್ಜೆ, ಅಂತಸ್ತು: the higher orders ಮೇಲ್ದರ್ಜೆಗಳು.
  • ಬಗೆ; ತರಹ; ಪ್ರಕಾರ; ರೀತಿ: talents of a high order ಉನ್ನತ ಮಟ್ಟದ ಸಹಜ ಶಕ್ತಿಗಳು.
  • (ದೇವತಾ)ವರ್ಗ; ‘ಸೆರಾಹಿಮ್‍’, ‘ಚೆರುಬಿಮ್‍’, ಮೊದಲಾದ ಒಂಬತ್ತು ವರ್ಗದ ದೇವತೆಗಳಲ್ಲಿ ಯಾವುದೇ ವರ್ಗ.
  • (ಕ್ರೈಸ್ತ ಪಾದ್ರಿಗಳ) ವರ್ಗ; ಶ್ರೇಣಿ; ದರ್ಜೆ; ಬಿಷಪ್‍, ಡೀಕನ್‍, ಮೊದಲಾದ ಬೇರೆ ಬೇರೆ ದರ್ಜೆಗಳಲ್ಲಿ ಒಂದು: (holy) orders ಪಾದ್ರಿ ಪದವಿ, ಹುದ್ದೆ.
  • (ಮಾಂಕ್‍ಗಳು, ಹ್ರಯರ್‍ಗಳು ಮತ್ತು ಹಿಂದೆ (ಕ್ರೈಸ್ತ) ಧರ್ಮವೀರರು, ಮೇಸನರು, ಮೊದಲಾದವರ) ವರ್ಗ; ದಳ; ಪಂಥ: Franciscan order ಸಂತ ಹಾನ್ಸಿಸ್ಸನ ವರ್ಗ, ದಳ, ಪಂಥ.
  • (ರಾಜನಿಂದ ಬಿರುದು ಮೊದಲಾದವುಗಳನ್ನು ಪಡೆದು ಸನ್ಮಾತಿತರಾದವರ)
    1. ವರ್ಗ; ಶ್ರೇಣಿ: Order of the Garter ಗಾರ್ಟರ್‍ ವರ್ಗ.
    2. ಇಂಥ ವರ್ಗದವರ ಲಾಂಛನ: wears the order of the Golden Fleece ‘ಗೋಲ್ಡನ್‍ ಹ್ಲೀಷ್‍’ ವರ್ಗದ ಲಾಂಛನವನ್ನು ಧರಿಸುತ್ತಾನೆ.
  • (ವಾಸ್ತುಶಿಲ್ಪ) ರೀತಿ; ಶೈಲಿ: five (classical) orders ಐದು ಅಭಿಜಾತ ಶೈಲಿಗಳು (ಡೋರಿಕ್‍, ಅಯಾನಿಕ್‍, ಕೊರಿಂತಿಯನ್‍, ಟಸ್ಕನ್‍ ಮತ್ತು ಕಾಂಪೊಸಿಟ್‍). Figure: orders-8
  • (ಗಣಿತ) ದರ್ಜೆ:
    1. ಯಾವುದೇ ಬೀಜಗಣಿತೋಕ್ತಿಯಲ್ಲಿರುವ ಪದಗಳಲ್ಲಿ ಕಾಣಬರುವ ಅತ್ಯುನ್ನತ ಘಾತ: $\left(ax^2+bx+c\right)$ is an equation of the second order. $\left(ax^2+bx+c\right)$ ಎಂಬುದು ಎರಡನೆ ದರ್ಜೆಯ ಗಣಿತೋಕ್ತಿ.
    2. (ಯಾವುದೇ ಮೊತ್ತದ ಪ್ರಮಾಣವನ್ನು ನಿರ್ದೇಶಿಸುವ) ದರ್ಜೆ; ಮಟ್ಟ: the wavelength of visible light is of the order of thousand angstroms ದೃಶ್ಯ ಬೆಳಕಿನ ಅಲೆಯುದ್ದ ಹಲವು ಸಾವಿರ ಆಂಗ್‍ಸ್ಟ್ರಾಮ್‍ಗಳ ದರ್ಜೆಯದು.
  • (ಜೀವವಿಜ್ಞಾನ) ಗಣ; ಪ್ರಾಣಿಗಳ ವರ್ಗೀಕರಣದಲ್ಲಿ ವರ್ಗಕ್ಕಿಂತ ಕೆಳಗಿನದು ಮತ್ತು ವಂಶಕ್ಕಿಂತ ಮೇಲಿನದು.
  • (ಸಾಮಾನ್ಯವಾಗಿ 10ರ ಗುಣದ, ಗಾತ್ರದ ಆಧಾರದ ಮೇಲೆ ವರ್ಗೀಕರಿಸಿದ ಪದ್ಧತಿ ಯಾ ವ್ಯವಸ್ಥೆಯಲ್ಲಿನ) ವರ್ಗ: order of magnitude ಗಾತ್ರದ ಆಧಾರದ ಮೇಲೆ, ಸಾಮಾನ್ಯವಾಗಿ 10ರ ಘಾತದ ಆಧಾರದ ಮೇಲೆ, ವರ್ಗೀಕರಿಸಲಾಗುವ ಪದ್ಧತಿಯ ಒಂದು ವರ್ಗ.
  • ಕ್ರಮ; ಅನುಕ್ರಮ: alphabetical order ಅಕಾರಾದಿ ಕ್ರಮ.
  • ವ್ಯವಸ್ಥಿತ ಕ್ರಮ; ವ್ಯವಸ್ಥೆ; ಪ್ರತಿಯೊಂದು ಅಂಶ, ಭಾಗ, ಮೊದಲಾದವು ತಮ್ಮ ಉಚಿತ ಸ್ಥಾನದಲ್ಲಿರುವ ಸ್ಥಿತಿ: love of order (ಉತ್ತಮ) ವ್ಯವಸ್ಥೆಯ ಪ್ರೇಮ.
  • (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಕಾರ್ಯಕ್ರಮ; ವಿಧಾನ: take order to do (ಯಾವುದನ್ನೇ) ಮಾಡಲು (ಅಗತ್ಯವಾದ) ಕಾರ್ಯಕ್ರಮವನ್ನು ಅನುಸರಿಸು.
  • ಜಗತ್ತು, ಸಮಾಜ, ಮೊದಲಾದವುಗಳ ಸ್ವರೂಪ ಯಾ ವ್ಯವಸ್ಥೆ, ಕ್ರಮ: the moral order of the world ಜಗತ್ತಿನ ನೈತಿಕ ವ್ಯವಸ್ಥೆ.
  • (ಶಾಸನಸಭೆ ಮೊದಲಾದವುಗಳಲ್ಲಿ ಅನುಸರಿಸಬೇಕಾದ ನಿಯಮಾವಳಿಗಳು, ಕಾರ್ಯವಿಧಾನ, ಮೊದಲಾದವುಗಳ) ಶಿಸ್ತು; ಕ್ರಮ; ಪರಿಪಾಟ; ರೀತಿ: Order! Order! ಶಿಸ್ತು! ಶಿಸ್ತು!.
  • ಶಾಂತಿವ್ಯವಸ್ಥೆ; ಶಾಂತಿ (ಪರಿಸ್ಥಿತಿ); ಗಲಭೆ, ಗೊಂದಲಗಳು ಇಲ್ಲದೆ, ಕಾನೂನುಗಳನ್ನು ಪಾಲನೆ ಮಾಡುತ್ತ ಇರುವ ಸ್ಥಿತಿ: law and order ಶಾಂತ ಸ್ಥಿತಿ; ಶಾಸನ ಬದ್ಧ ವ್ಯವಸ್ಥೆ; ಶಾಂತಿ: law and order was restored ಶಾಂತಿಯನ್ನು ಪುನಃ ಸ್ಥಾಪಿಸಲಾಯಿತು. keep order ಶಾಂತಿ (ಸ್ಥಿತಿ) ಪಾಲಿಸಿ.
  • (ಸೈನ್ಯ) ಸಾಲು; ಪಂಕ್ತಿ; ಶ್ರೇಣಿ; ಸೈನಿಕರನ್ನು ಜೋಡಿಸಿರುವ ಕ್ರಮ: open order ತೆರೆದ ಸಾಲು; ವಿರಳ ಸಾಲು; ಸೈನಿಕ–ಸೈನಿಕರ ನಡುವೆ ಅಂತರವಿರುವಂತೆ ನಿಲ್ಲಿಸಿದ ಸೈನಿಕರ ಸಾಲು. close order ಮುಚ್ಚಿದ ಸಾಲು; ಒತ್ತು ಸಾಲು; ಸೈನಿಕರೆಲ್ಲ ಒತ್ತಾಗಿ, ನಡುವೆ ಅಂತರ ಇಲ್ಲದೆ ನಿಲ್ಲುವ ಸಾಲು.
  • (ಬಹುವಚನದಲ್ಲಿ ಸಹ) ಕಟ್ಟುಪಾಡು; ಕಟ್ಟಳೆ; ಅಪ್ಪಣೆ; ಆಜ್ಞೆ; ಆದೇಶ; ಹುಕುಮು: gave orders ಅಪ್ಪಣೆ, –ಕೊಟ್ಟ. till further orders ಮುಂದಿನ ಆದೇಶದವರೆಗೆ.
  • (ಬ್ಯಾಂಕಿಂಗ್‍ ಮೊದಲಾದವುಗಳ) ನಿರ್ದೇಶ; ಸೂಚನೆ.
  • (ವಾಣಿಜ್ಯ)
    1. ಕೋರಿಕೆ; ನಿರ್ದೇಶ; ಸೂಚನೆ; ಆರ್ಡರು; ವ್ಯಾಪಾರಿಗೋ ತಯಾರಕನಿಗೋ ಯಾವುದೇ ಸರಕನ್ನು ಸರಬರಾಜು ಮಾಡುವಂತೆ ಕಳುಹಿಸಿದ ಸೂಚನೆ.
    2. ಹಾಗೆ ಒದಗಿಸಿದ ಸರಕು ಮೊದಲಾದವುಗಳ ಮೊತ್ತ.
  • (ನಾಟಕ ಯಾ ಸಂಗೀತ ಶಾಲೆ, ಮ್ಯೂಸಿಯಮ್‍, ಖಾಸಗಿ ಮನೆ, ಮೊದಲಾದವುಗಳಿಗೆ ಶುಲ್ಕರಹಿತವಾಗಿ ಯಾ ಅಲ್ಪ ಶುಲ್ಕಕ್ಕೆ ಯಾ ಒಂದು ಹಕ್ಕಾಗಿ, ಪ್ರವೇಶಿಸಲು ಕೊಡುವ) ಪ್ರವೇಶಪತ್ರ; ಅಪ್ಪಣೆ ಚೀಟಿ; ಪಾಸು.
  • (ಕ್ರೈಸ್ತಧರ್ಮ) ಧಾರ್ಮಿಕ ವಿಧಿ; ವಿಧ್ಯುಕ್ತವಾದ ಕರ್ಮವಿಧಾನ: the order of confirmation (ಜ್ಞಾನಸ್ನಾನವಾದವರಿಗೆ ನೀಡುವ) ಸ್ಥಿರೀಕರಣ ಸಂಸ್ಕಾರ ವಿಧಿ.

  • order
    ಸಕರ್ಮಕ ಕ್ರಿಯಾಪದ ಪದಗುಚ್ಛ
  • ಕ್ರಮಗೊಳಿಸು; ವ್ಯವಸ್ಥೆಗೊಳಿಸು; ಅಣಿ ಮಾಡು; ಗೊತ್ತಿಗೆ ತರು; (ಪ್ರಾಚೀನ ಪ್ರಯೋಗ) has ordered his troops ತನ್ನ ಪಡೆಗಳನ್ನು ವ್ಯವಸ್ಥೆಗೊಳಿಸಿದ್ದಾನೆ, ಸನ್ನದ್ಧಗೊಳಿಸಿದ್ದಾನೆ.
  • (ದೇವರು, ವಿಧಿ, ಮೊದಲಾದವುಗಳ ವಿಷಯದಲ್ಲಿ) ವಿಧಿಸು; ನಿಯಮಿಸು; ನಿಯಾಮಕ ಮಾಡು: so we hoped, but it was otherwise ordered ಹಾಗೆಯೇ ನಾವು ಆಶಿಸಿದ್ದೆವು, ಆದರೆ ವಿಧಿಯು ಬೇರೆ ರೀತಿ ನಿಯಾಮಕ ಮಾಡಿತ್ತು; ದೈವನಿಯತಿ ಬೇರೆಯಾಗಿತ್ತು.
  • ಆಜ್ಞೆ ಮಾಡು; ಕಟ್ಟಳೆ ಮಾಡು; ಹುಕಮ್‍ ಕೊಡು; ವಿಧಿಸು: order a retreat ಹಿಮ್ಮೆಟ್ಟಲು ಆಜ್ಞಾಪಿಸು. ordered him a mustard plaster ಸಾಸಿವೆಯ ಪಟ್ಟು (ಪೋಲ್ಟಿಸ್‍) ಹಾಕಿಕೊಳ್ಳಬೇಕೆಂದು ಅವನಿಗೆ (ವೈದ್ಯನು) ವಿಧಿಸಿದನು.
  • (ವ್ಯಕ್ತಿ ಮೊದಲಾದವರನ್ನು ಒಂದೆಡೆಗೆ ಯಾ ಒಂದೆಡೆಯಿಂದ ಹೋಗೆಂದು) ಆಜ್ಞಾಪಿಸು; ಅದೇಶ ಕೊಡು: was ordered to Egypt ಈಜಿಪ್ಟಿಗೆ ಹೋಗಬೇಕೆಂದು ಆಜ್ಞಾಪಿಸಲಾಯಿತು.
  • (ವ್ಯಾಪಾರಿ, ಆಳು, ಮೊದಲಾದವರಿಗೆ ವಸ್ತುಗಳನ್ನು ಒದಗಿಸಬೇಕೆಂದು) ಅಪ್ಪಣೆ ಮಾಡು; ಗೊತ್ತು ಮಾಡು.

  • order book
    ನಾಮವಾಚಕ
  • (ವ್ಯಾಪಾರಿಯು ಸರಕುಗಳಿಗಾಗಿ ತನಗೆ ಬಂದ ಕೋರಿಕೆಗಳನ್ನೆಲ್ಲ ಬರೆದಿಡುವ) ಆರ್ಡರು ಪುಸ್ತಕ; ಕೋರಿಕೆಯ ಪುಸ್ತಕ.
  • ಬರುತ್ತಿರುವ ಕೋರಿಕೆಗಳ ಮಟ್ಟ.

  • order clerk
    ನಾಮವಾಚಕ
    (ಸರಕುಗಳಿಗಾಗಿ ಬಂದ ಕೋರಿಕೆಗಳನ್ನು ಬರೆದಿಡುವ) ಆರ್ಡರ್‍, ಕೋರಿಕೆ ಗುಮಾಸ್ತೆ.

    order-form
    ನಾಮವಾಚಕ
    ಆರ್ಡರ್‍ ಹಾರಂ; ಕೋರಿಕೆಯ ಪತ್ರ; ಗಿರಾಕಿಯು ತನ್ನ ಕೋರಿಕೆಯನ್ನು ಬರೆದು ಕಳುಹಿಸುವ ಪತ್ರ, ನಮೂನೆ.


    logo