logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Indian millet
ನಾಮವಾಚಕ
= durra.

Indian rope-trick
ನಾಮವಾಚಕ
ಭಾರತೀಯ ಹಗ್ಗದ ಚಳಕ; ಹಗ್ಗವನ್ನು ಯಾವುದೇ ಆಧಾರವಿಲ್ಲದೆ ನೆಟ್ಟಗೆ ನಿಲ್ಲಿಸಿ ಅದನ್ನು ಹತ್ತಿ ಹೋಗುತ್ತಾರೆಂದು ಹೇಳಲಾಗಿರುವ, ಭಾರತೀಯ ಯಕ್ಷಿಣಿಯವರ ಕೌಶಲ.

Indian summer
ನಾಮವಾಚಕ
ಇಂಡಿಯನ್‍ ಗ್ರೀಷ್ಮ:
  • (ಉತ್ತರ ಅಮೆರಿಕ ಸಂಸ್ಥಾನಗಳಲ್ಲಿ) ಶರತ್ಕಾಲದ ಕೊನೆಯಲ್ಲಿ ಕಾಣಬರುವ ಮಬ್ಬಾದ, ಶುಷ್ಕ, ಪ್ರಶಾಂತ ಹವಾಗುಣ.
  • ಬೇರೆ ದೇಶಗಳಲ್ಲೂ ಉಂಟಾಗಬಹುದಾದ ಇಂಥ ಹವಾಗುಣ, ವಾಯುಗುಣ.
  • (ರೂಪಕವಾಗಿ) ಜೀವನದ ಇಳಿವಯಸ್ಸಿನ ಪ್ರಶಾಂತಕಾಲ; ಅಪರವಯಸ್ಸಿನ ಶಾಂತಸ್ಥಿತಿ; ಅವಸಾನದ ಶಾಂತಿ.

  • Indian weed
    ನಾಮವಾಚಕ
    ಹೊಗೆಸೊಪ್ಪು; ತಂಬಾಕು.

    Indianism
    ನಾಮವಾಚಕ
  • ಭಾರತೀಯತೆ; ಭಾರತೀಯರ ಸಂಪ್ರದಾಯದ ಯಾ ಸಂಸ್ಕೃತಿಯ ವಿಶಿಷ್ಟ ಲಕ್ಷಣ.
  • ಇಂಡಿಯನಿಸಂ; ಅಮೆರಿಕದ ರೆಡ್‍ ಇಂಡಿಯನರ ಸಂಪ್ರದಾಯದ ಯಾ ಸಂಸ್ಕೃತಿಯ ವಿಶಿಷ್ಟ ಲಕ್ಷಣ.
  • (ಭಾಷೆಯ ವಿಷಯದಲ್ಲಿ)
    1. ಇಂಡಿಯನ್‍ ಪ್ರಯೋಗ; ಅಮೆರಿಕದ ರೆಡ್‍ ಇಂಡಿಯನ್‍ ಭಾಷೆಯ ವಿಶಿಷ್ಟ ಪದ ಯಾ ಪದಗುಚ್ಛ ಪ್ರಯೋಗ.
    2. ಭಾರತೀಯ ಪ್ರಯೋಗ; ಭಾರತೀಯರು ಇಂಗ್ಲಿಷನ್ನು ಬಳಸುವಲ್ಲಿ ಕಂಡು ಬರುವ ವಿಲಕ್ಷಣ ಪ್ರಯೋಗಗಳು.

  • Indianization
    ನಾಮವಾಚಕ
  • ಭಾರತೀಕರಣ; ರೀತಿಯಲ್ಲಿ ಯಾ ರಚನೆಯಲ್ಲಿ ಭಾರತೀಯ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವುದು ಯಾ ಭಾರತೀಯವಾಗಿ ಮಾಡುವುದು.
  • (ಅಮೆರಿಕನ್‍ ಪ್ರಯೋಗ) ಇಂಡಿಯನೀಕರಣ; ರೆಡ್‍ ಇಂಡಿಯನ್ನರ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವುದು.

  • Indianize
    ಸಕರ್ಮಕ ಕ್ರಿಯಾಪದ
  • ಭಾರತೀಕರಿಸು; ಭಾರತೀಯವಾಗಿಸು:
    1. (ಗುಣ, ಲಕ್ಷಣ, ಸಂಪ್ರದಾಯ, ಮೊದಲಾದವುಗಳಲ್ಲಿ) ಭಾರತೀಯವೆನ್ನಿಸು; ಇಂಡಿಯಾ ದೇಶದ್ದು ಎನಿಸುವಂತೆ ಮಾಡು.
    2. ಭಾರತದ ಪರಿಸ್ಥಿತಿಗೆ ಹೊಂದಿಸು.
    3. (ಸರಕಾರದ ಇಲಾಖೆ ಮೊದಲಾದವಕ್ಕೆ) ಭಾರತೀಯರನ್ನೇ ಹೆಚ್ಚಾಗಿ ಸೇರಿಸು.
  • (ಅಮೆರಿಕನ್‍ ಪ್ರಯೋಗ) ಇಂಡಿಯನೀಕರಿಸು; ರೆಡ್‍ ಇಂಡಿಯನ್ನರ ಗುಣಲಕ್ಷಣಗಳನ್ನು ಅಳವಡಿಸಿಕೊ.

  • Indic
    ಗುಣವಾಚಕ
  • ಭಾರತೀಯ.
  • ಇಂಡಿಕ್‍; ಸಂಸ್ಕೃತ ಹಾಗೂ ಅದರಿಂದ ಈಚೆಗೆ ಹುಟ್ಟಿದ ಭಾಷೆಗಳೂ ಒಳಗೊಂಡ ಇಂಡೋಯೂರೋಪಿಯನ್‍ ಭಾಷಾವರ್ಗಕ್ಕೆ ಸೇರಿದ.

  • Indic
    ನಾಮವಾಚಕ
    ಇಂಡಿಕ್‍; ಸಂಸ್ಕೃತ ಹಾಗೂ ಅದರಿಂದ ಈಚೆಗೆ ಹುಟ್ಟಿಕೊಂಡ ಭಾಷೆಗಳನ್ನೊಳಗೊಂಡ ಇಂಡೋ ಯೂರೋಪಿಯನ್‍ ಭಾಷಾವರ್ಗ.

    indicate
    ಸಕರ್ಮಕ ಕ್ರಿಯಾಪದ
  • ತೋರಿಸು; ನಿರ್ದೇಶಿಸು; ತಿಳಿಸು; ತಿಳಿಯಪಡಿಸು.
  • ಸೂಚಿಸು; ಕೋರು; ಅಪೇಕ್ಷಿಸು.
  • ಸೂಚ್ಯವಾಗಿ, ಸಂಗ್ರಹವಾಗಿ, ಸಂಕ್ಷೇಪವಾಗಿ – ಹೇಳು.
  • (ವೈದ್ಯಶಾಸ್ತ್ರ, ಭೂತಕೃದಂತದಲ್ಲಿ) ಅಪೇಕ್ಷಿತವಾಗಿರು ಯಾ ಅಗತ್ಯವಾಗಿರು.
  • (ಯಾವುದೇ ವಸ್ತು, ವಿಷಯ, ಮೊದಲಾದವುಗಳ) ಸೂಚನೆ, ಗುರುತು, ಲಕ್ಷಣ, ಚಿಹ್ನೆ, ಸಂಕೇತ, ತೋರಿಕೆ – ಆಗಿರು.
  • (ಮಾಪಕ ಮೊದಲಾದವುಗಳ ವಿಷಯದಲ್ಲಿ) ಸೂಚಿಸು; ಅಳತೆಗುರುತಿನ ಮೇಲಿನ ಸಂಖ್ಯೆ ತೋರಿಸು.


  • logo