logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Indiaman
ನಾಮವಾಚಕ
(ಬಹುವಚನ Indiamen). (ಚರಿತ್ರೆ) ಇಂಡಿಯಾಮನ್‍; ಭಾರತದೊಡನೆ ವ್ಯಾಪಾರ ನಡೆಸುತ್ತಿರುವ ಹಡಗು.

Indian
ಗುಣವಾಚಕ
  • ಭಾರತೀಯ; ಇಂಡಿಯಾ ದೇಶದ.
  • ಇಂಡಿಯನ್‍:
    1. ಈಸ್ಟ್‍ ಇಂಡೀಸ್‍ ಪ್ರದೇಶದ.
    2. ಅಮೆರಿಕದ ಆದಿವಾಸಿ ಇಂಡಿಯನರ ಯಾ ಅವರ ವಂಶದವರ.
    3. ವೆಸ್ಟ್‍ ಇಂಡೀಸ್‍ ಪ್ರದೇಶದ ನಿವಾಸಿ ಯಾ ಮೂಲನಿವಾಸಿಯ.

  • Indian
    ನಾಮವಾಚಕ ಪದಗುಚ್ಛ
  • ಇಂಡಿಯಾದವನು; ಭಾರತೀಯ; ಇಂಡಿಯಾದಲ್ಲಿ ಹುಟ್ಟಿದವ.
  • ಇಂಡಿಯನ್‍:
    1. ಅಮೆರಿಕದ ಆದಿವಾಸಿ ಯಾ ಅವರ ವಂಶದವರು.
    2. (ಬ್ರಿಟಿಷ್‍ ಪ್ರಯೋಗ) = Red Indian.
    3. ವೆಸ್ಟ್‍ ಇಂಡೀಸ್‍ ಪ್ರದೇಶದ ಮೂಲನಿವಾಸಿ ಯಾ ನಿವಾಸಿ.
  • (ಚರಿತ್ರೆ) ಹಿಂದೆ ಭಾರತದಲ್ಲಿ ವಾಸವಾಗಿದ್ದ ಯೂರೋಪಿನವನು, ಮುಖ್ಯವಾಗಿ ಇಂಗ್ಲಿಷ್‍ನವನು.

  • Indian civilian
    ನಾಮವಾಚಕ
    (ಚರಿತ್ರೆ) ಭಾರತದ, ಇಂಡಿಯನ್‍ ಸಿವಿಲ್‍ ಸರ್ವಿಸ್‍ನಲ್ಲಿದ್ದ ಅಧಿಕಾರಿ.

    Indian clubs
    ನಾಮವಾಚಕ
    (ಅಂಗಸಾಧನೆಯಲ್ಲಿ ಬಳಸುವ ಸೀಸೆಯಾಕಾರದ) ಗದೆಗಳು; ಕೊಂತಗಳು; ಕರೇಲಗಳು.

    Indian cobra
    ನಾಮವಾಚಕ
    ಭಾರತದ ನಾಗರಹಾವು; ನಜನಜ ಕುಲಕ್ಕೆ ಸೇರಿದ, ಬಹಳ ವಿಷಕರವಾದ ಸರ್ಪ.

    Indian corn
    ನಾಮವಾಚಕ
    ಮುಸುಕಿನ ಜೋಳ; ಮೆಕ್ಕೆ ಜೋಳ.

    Indian cress
    ನಾಮವಾಚಕ
    ಅಮೆರಿಕದಲ್ಲಿ ಬೆಳೆಯುವ, ಟ್ರಪೀಯೋಲಮ್‍ ಕುಲದ ಯಾವುದೇ ಗಿಡ.

    Indian ink
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ)
  • ಇಂಡಿಯನ್‍ – ಇಂಕು, ಮಸಿ, ಶಾಯಿ; ಹಿಂದೆ ಚೀನಾ, ಜಪಾನುಗಳಲ್ಲಿ ತಯಾರಿಸುತ್ತಿದ್ದ, ಮಸಿ(ಗಟ್ಟಿ).
  • ಇಂಡಿಯನ್‍ ಇಂಕಿನ ದ್ರಾವಣ.

  • Indian meal
    ನಾಮವಾಚಕ
    ಮುಸುಕಿನ ಯಾ ಮೆಕ್ಕೆಜೋಳದ ಹಿಟ್ಟು.


    logo