logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orchestra pit
ನಾಮವಾಚಕ
ವಾದ್ಯಗೋಷ್ಠಿ ಕುಳಿ; ನಾಟಕಶಾಲೆ, ಸಂಗೀತಶಾಲೆ, ಮೊದಲಾದವುಗಳಲ್ಲಿ ರಂಗಸ್ಥಳದ ಮುಂದುಗಡೆ, ವಾದ್ಯವೃಂದದವರಿಗಾಗಿ ಇರುವ ತಗ್ಗಾದ ಸ್ಥಳ.

orchestra stalls
ನಾಮವಾಚಕ
(ಬಹುವಚನ) (ಸಂಗೀತ ಯಾ ನಾಟಕಶಾಲೆಯ) ಮುನ್‍ಸಾಲು; ಅಗ್ರಪಂಕ್ತಿ; ಆಸನಗಳ ಮುಂದಿನ ಸಾಲು.

orchestral
ಗುಣವಾಚಕ
  • (ಪ್ರಾಚೀನ ಗ್ರೀಸಿನ ನಾಟಕಶಾಲೆಗಳ) ಮೇಳರಂಗದ.
  • (ಆಧುನಿಕ ನಾಟಕ ಯಾ ಸಂಗೀತ ಶಾಲೆಯ) ವಾದ್ಯಾಂಗಣದ ಯಾ ಮೇಳಾಂಗಣದ.
  • (ನಾಟಕ ಯಾ ಸಂಗೀತ ಶಾಲೆಯ) ವಾದ್ಯವೃಂದದ; ವಾದ್ಯ ಗೋಷ್ಠಿಯ; ವಾದ್ಯಮೇಳದ.

  • orchestrally
    ಕ್ರಿಯಾವಿಶೇಷಣ
  • (ಪ್ರಾಚೀನ ಗ್ರೀಸಿನ ನಾಟಕಶಾಲೆಗಳ) ಮೇಳರಂಗದಂತೆ.
  • (ಆಧುನಿಕ ನಾಟಕ ಯಾ ಸಂಗೀತ ಶಾಲೆಯ) ವಾದ್ಯಾಂಗಣದಂತೆ ಯಾ ಮೇಳಾಂಗಣದಂತೆ.
  • (ನಾಟಕ ಯಾ ಸಂಗೀತ ಶಾಲೆಯ) ವಾದ್ಯ ವೃಂದದಂತೆ; ವಾದ್ಯವೃಂದದ ರೀತಿಯಲ್ಲಿ.

  • orchestrate
    ಸಕರ್ಮಕ ಕ್ರಿಯಾಪದ
  • (ಸಂಗೀತಮೇಳಕ್ಕಾಗಿ, ಗೋಷ್ಠಿಗಾಗಿ) ರಚಿಸು; ಹೊಂದಿಸು; ಏರ್ಪಡಿಸು ( ಅಕರ್ಮಕ ಕ್ರಿಯಾಪದ ಸಹ).
  • (ರೂಪಕವಾಗಿ) ಸುಸಮನ್ವಿತವಾಗಿ ಯಾ ಅತ್ಯಂತ ಪರಿಣಾಮಕಾರಿಯಾಗುವಂತೆ (ಒಂದರ ಅಂಶಗಳನ್ನು) ಸಂಯೋಜಿಸು.

  • orchestration
    ನಾಮವಾಚಕ
  • (ಮೇಳಗಾನಕ್ಕಾಗಿ, ವೃಂದವಾದ್ಯಕ್ಕಾಗಿ) ರಚಿಸುವುದು, ಸಂಯೋಜಿಸುವುದು, ಏರ್ಪಡಿಸುವುದು.
  • (ವೃಂದವಾದ್ಯದ) ಸಂಯೋಜನೆ(ಯ) ರೀತಿ, ರೂಪ.

  • orchestrator
    ನಾಮವಾಚಕ
    ವೃಂದವಾದ್ಯ ಸಂಯೋಜಕ; ಮೇಳವಾದ್ಯಕ್ಕೆ ಸಂಗೀತ, ವಾದ್ಯ, ಮೊದಲಾದವನ್ನು ಸಂಯೋಜಿಸುವವನು.

    orchestrina
    ನಾಮವಾಚಕ
    (ಆರ್ಕೆಸ್ಟ್ರದಂಥ ವಾದ್ಯಸಂಗೀತವನ್ನು ನುಡಿಯಬಲ್ಲ) ಆರ್ಗನ್‍ ವಾದ್ಯ; ಮೇಳಸ್ವರದ ಆರ್ಗನ್‍ ವಾದ್ಯ.

    orchestrion
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = orchestrina.

    orchid
    ನಾಮವಾಚಕ
    ಆರ್ಕಿಡ್‍; ಸೀತೆ ಹೂವಿನ ಗಿಡ; ಸೀತಾಳ ಗೆಡ್ಡೆ; ಮರಬಾಳೆ; ಸಾಲಾಮಿಸ್ರಿ; ಏಕದಳ ಬೀಜವರ್ಗದ, ಉಜ್ವಲ ವರ್ಣಗಳ ಚಿತ್ರ ವಿಚಿತ್ರ ಹೂ ಬಿಡುವ, ಗೆಡ್ಡೆಬೇರಿನ ಸಸ್ಯ ಜಾತಿ.


    logo