logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

index number
ನಾಮವಾಚಕ
ಸೂಚ್ಯಂಕ; ಯಾವುದೇ ನಿರ್ದಿಷ್ಟಕಾಲದಲ್ಲಿದ್ದ ಬೆಲೆ, ಕೂಲಿ, ಮೊದಲಾದವನ್ನು ಆಧಾರವಾಗಿಟ್ಟುಕೊಂಡು ಇತರ ಕಾಲಗಳಲ್ಲಿ ಚಾಲ್ತಿ ಇರುವ ಬೆಲೆ ಮೊದಲಾದವನ್ನು ಸೂಚಿಸುವ ಸಂಖ್ಯೆ.

index-linked
ಗುಣವಾಚಕ
ಸೂಚ್ಯಂಕ ಆಧಾರಿತ; ಸೂಚ್ಯಂಕ ಸಂಬದ್ಧ; ಬೆಲೆ ಸೂಚ್ಯಂಕಕ್ಕೆ ಸಂಬಂಧ ಕಲ್ಪಿಸಿದ.

indexation
ನಾಮವಾಚಕ
(ಕೂಲಿ ಮೊದಲಾದವನ್ನು) ಬೆಲೆಸೂಚ್ಯಂಕದ ಏರಿಳಿತಕ್ಕೆ ತಕ್ಕಂತೆ ಸರಿಹೊಂದಿಸುವುದು.

indexer
ನಾಮವಾಚಕ
ಸೂಚಿಕಾರ; ಸೂಚಿ ತಯಾರಕ; ಪುಸ್ತಕದ ವಿಷಯ ಮೊದಲಾದವುಗಳ ಅಕಾರಾದಿ ತಯಾರಿಸುವವ.

indexical
ಗುಣವಾಚಕ
  • ಅಕಾರಾದಿಯ; ಅನುಕ್ರಮಣಿಯ.
  • ಅನುಕ್ರಮಣಿಗೆ, ಅಕಾರಾದಿಗೆ ಸಂಬಂಧಿಸಿದ.
  • ಅಕಾರಾದಿಯಂಥ; ಅನುಕ್ರಮಣಿಯ ಸ್ವರೂಪದ.

  • indexless
    ಗುಣವಾಚಕ
    ಅನುಕ್ರಮಣಿರಹಿತ; ಅಕಾರಾದಿ(ಸೂಚಿ)ಯಿಲ್ಲದ: an indexless book ಅಕಾರಾದಿ(ಸೂಚಿ)ಯಿಲ್ಲದ ಪುಸ್ತಕ.

    India
    ನಾಮವಾಚಕ ಪದಗುಚ್ಛ
    ಇಂಡಿಯಾ(ದೇಶ); ಹಿಂದೂಸ್ಥಾನ; ಭರತಖಂಡ; ಭಾರತ. Republic of India ಭಾರತ ಗಣರಾಜ್ಯ; 1947ರಲ್ಲಿ ಸ್ವತಂತ್ರವಾದ ಭಾರತ ದೇಶ.

    India ink
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = Indian ink.

    India Office
    ನಾಮವಾಚಕ
    (ಚರಿತ್ರೆ) ಇಂಡಿಯಾ ಆಫೀಸು; ಭಾರತ ದೇಶಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ, ಬ್ರಿಟಿಷ್‍ ಸರ್ಕಾರದ ಒಂದು ಇಲಾಖೆ.

    India rubber
    ನಾಮವಾಚಕ
    (india-rubber ಎಂದೂ ಪ್ರಯೋಗ) ಇಂಡಿಯಾ ರಬ್ಬರು; ಪೆನ್ಸಿಲ್ಲಿನ ಗುರುತು ಮೊದಲಾದವನ್ನು ಅಳಿಸಲು ಬಳಸುವ, ಕೆಲವು ಗಿಡಗಳ ಗಟ್ಟಿಯಾದ ರಸ.


    logo