logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Orcadian
ಗುಣವಾಚಕ
(ಸ್ಕಾಟ್ಲೆಂಡಿನ ಉತ್ತರ ತೀರದ ಆಚೆ ಇರುವ) ಆರ್ಕ್‍ನೀ ದ್ವೀಪಸ್ತೋಮದ.

Orcadian
ನಾಮವಾಚಕ
ಆರ್ಕ್‍ನೀ ದ್ವೀಪ ಸ್ತೋಮದವನು.

orch.
ಸಂಕ್ಷಿಪ್ತ
  • orchestra.
  • orchestrated by.

  • orchard
    ನಾಮವಾಚಕ
    ಹಣ್ಣುತೋಟ; ಫಲೋದ್ಯಾನ.

    orcharding
    ನಾಮವಾಚಕ
    ಹಣ್ಣು ತೋಟಗಾರಿಕೆ; ಫಲೋದ್ಯಾನ ಕೃಷಿ.

    orchardist
    ನಾಮವಾಚಕ
    = orchardman.

    orchardman
    ನಾಮವಾಚಕ
    ಹಣ್ಣು ತೋಟಗಾರ; ಹಣ್ಣು ಕೃಷಿಕ; ಹಣ್ಣು ಬೆಳೆಗಾರ; (ಹಣ್ಣು)ತೋಟದಲ್ಲಿ ಹಣ್ಣು ಬೆಳೆಯುವವನು.

    orchestic
    ಗುಣವಾಚಕ
    ಕುಣಿತದ; ನೃತ್ಯದ; ನಾಟ್ಯದ; ನರ್ತನದ.

    orchestics
    ನಾಮವಾಚಕ
    ನರ್ತನಕಲೆ; ಕುಣಿತದ ಕಲೆ; ನಾಟ್ಯಕಲೆ.

    orchestra
    ನಾಮವಾಚಕ
  • (ಪ್ರಾಚೀನ ಗ್ರೀಸಿನ ನಾಟಕಶಾಲೆಗಳಲ್ಲಿ ರಂಗದ ಮುಂಭಾಗದಲ್ಲಿ ಮೇಳದವರು ಹಾಡುತ್ತ ಕುಣಿಯುತ್ತಿದ್ದ) ಅರ್ಧ ವೃತ್ತಾಕಾರದ ಮೇಳರಂಗ.
  • (ಆಧುನಿಕ ನಾಟಕ ಯಾ ಸಂಗೀತ ಶಾಲೆಗಳಲ್ಲಿ) ವಾದ್ಯಾಂಗಣ ಯಾ ಮೇಳಾಂಗಣ.
  • ಆರ್ಕೆಸ್ಟ್ರ; ವಾದ್ಯವೃಂದ; ವಾದ್ಯಗೋಷ್ಠಿ; ವಾದ್ಯಮೇಳ, ಸಾಮಾನ್ಯವಾಗಿ ತಂತಿ ಮತ್ತು ತಾಲವಾದನಕಾರರ ದೊಡ್ಡ ತಂಡ.
  • (ಅಮೆರಿಕನ್‍ ಪ್ರಯೋಗ) ನಾಟಕಶಾಲೆಯ, ಮುಖ್ಯವಾಗಿ ನೆಲದಂತಸ್ತಿನಲ್ಲಿರುವ, ಆಸನ ಪಂಕ್ತಿ, ಆಸನಗಳ ಒಂದು ತಂಡ.
  • = orchestra pit.


  • logo