ಲೆನ್ಸು; ಮಸೂರ; ಯವ; ಬೆಳಕಿನ ರಶ್ಮಿಗಳನ್ನು ಕೇಂದ್ರೀಕರಿಸಬಲ್ಲ ಯಾ ಚದುರಿಸಬಲ್ಲ, ಒಂದೇ ಕಡೆ ಯಾ (ಸಾಮಾನ್ಯವಾಗಿ) ಎರಡೂ ಕಡೆ ಬಾಗಿರುವ ಮೈಯುಳ್ಳ ಗಾಜಿನ ಅಥವಾ ಬೇರಾವುದಾದರೂ ಪಾರದರ್ಶಕ ವಸ್ತುವಿನ ಬಿಲ್ಲೆ.
(ಭೌತವಿಜ್ಞಾನ) ಲೆನ್ಸು; ಯವ; ಬೆಳಕು, ಶಬ್ದ, ಇಲೆಕ್ಟ್ರಾನುಗಳು, ಮೊದಲಾದವುಗಳ ಚಲನೆಯ ದಿಕ್ಕನ್ನು ನಾಭೀಕರಿಸಲು ಯಾ ಪರಿವರ್ತಿಸಲು ಬಳಸುವ ಒಂದು ಸಾಧನ.
lensed
ಗುಣವಾಚಕ
ಲೆನ್ಸುಳ್ಳ; ಮಸೂರವುಳ್ಳ.
lensless
ಗುಣವಾಚಕ
ಲೆನ್ಸ್‍ರಹಿತ; ಲೆನ್ಸಿಲ್ಲದ; ಮಸೂರರಹಿತ.
Lent
ನಾಮವಾಚಕ
(ಕ್ರೈಸ್ತಧರ್ಮ) ಲೆಂಟ್ ಕಾಲ; (ಮರುಭೂಮಿಯಲ್ಲಿ ಏಸುಕ್ರಿಸ್ತನು ಮಾಡಿದ ಉಪವಾಸದ ನೆನಪಿಗಾಗಿ ಕ್ರೈಸ್ತರು ಈ ಅವಧಿಯಲ್ಲಿ ವ್ರತೋಪವಾಸಗಳನ್ನು ಆಚರಿಸುವ) ಬೂದಿ ಬುಧವಾರದಿಂದ ಈಸ್ಟರ್ ಹಬ್ಬದ ಹಿಂದಿನ ದಿನದವರೆಗಿನ ನಲವತ್ತು ದಿನಗಳು.
(ಬ್ರಿಟಿಷ್ ಪ್ರಯೋಗ) (ಬಹುವಚನದಲ್ಲಿ) (ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ) ಲೆಂಟ್ (ಕಾಲದಲ್ಲಿ ನಡೆಯುವ) ದೋಣಿ ಪಂದ್ಯಗಳು.
lent
ಕ್ರಿಯಾಪದ
lend ಧಾತುವಿನ ಭೂತರೂಪ ಮತ್ತು ಭೂತಕೃದಂತ.
Lent lily
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಮುಖ್ಯವಾಗಿ ಕಾಡು ನೆಲನೈದಿಲೆ, ಡ್ಯಾಹೊಡಿಲ್.
Lent term
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಲೆಂಟ್ ಅವಧಿ; ವಿಶ್ವವಿದ್ಯಾನಿಲಯದ ಶಿಕ್ಷಣ ವರ್ಷದಲ್ಲಿ ಲೆಂಟ್ ಹಬ್ಬದ ರಜಾ ಅವಧಿ.
Lenten
ಗುಣವಾಚಕ
ಲೆಂಟ್ ಹಬ್ಬದ; ಲೆಂಟ್ ಅವಧಿಯಲ್ಲಿಯ; ಲೆಂಟ್ ಹಬ್ಬಕ್ಕೆ ಯಾ ಅವಧಿಗೆ ತಕ್ಕ ಯಾ ಉಚಿತವಾದ.