logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indeterminate sentence
ನಾಮವಾಚಕ
(ನ್ಯಾಯಶಾಸ್ತ್ರ) ಅನಿಷ್ಕೃಷ್ಟ ದಂಡಾಜ್ಞೆ; ಕೈದಿಯ ಒಳ್ಳೆಯ ನಡತೆ ಮೊದಲಾದವುಗಳ ಆಧಾರದ ಮೇಲೆ ಶಿಕ್ಷೆಯ ಅವಧಿಯನ್ನು ಕಡಮೆ ಮಾಡುವ ನಿಯಮಕ್ಕೊಳಪಡಿಸಿ ನ್ಯಾಯಾಧೀಶ ಕೊಡುವ ದಂಡಾಜ್ಞೆ.

indeterminately
ಕ್ರಿಯಾವಿಶೇಷಣ
  • ಅನಿರ್ಧಾರಿತವಾಗಿ; ಅನಿರ್ದಿಷ್ಟವಾಗಿ.
  • ಅನಿಶ್ಚಿತವಾಗಿ; ಸಂದಿಗ್ಧವಾಗಿ.
  • ಅಸ್ಪಷ್ಟವಾಗಿ; ಅನಿಷ್ಕೃಷ್ಟವಾಗಿ.

  • indeterminateness
    ನಾಮವಾಚಕ
  • ಅನಿರ್ದಿಷ್ಟತೆ.
  • ಅನಿಶ್ಚಿತತೆ; ಸಂದಿಗ್ಧತೆ.
  • ಅಸ್ಪಷ್ಟತೆ; ಅನಿಷ್ಕೃಷ್ಟತೆ.

  • indetermination
    ನಾಮವಾಚಕ
  • ಅನಿರ್ಣಯ(ತೆ); ಅನಿರ್ಧಾರ.
  • ಸಂದಿಗ್ಧತೆ; (ಮನಸ್ಸು ಮೊದಲಾದವುಗಳ) ಅನಿಶ್ಚಿತ ಸ್ಥಿತಿ.

  • indeterminism
    ನಾಮವಾಚಕ
  • (ತತ್ತ್ವಶಾಸ್ತ್ರ) ಪೌರುಷ ವಾದ; ಪುರುಷಕಾರ ಸಿದ್ಧಾಂತ; ಪುರುಷ ಸ್ವಾತಂತ್ರ್ಯವಾದ; ಮನುಷ್ಯನ ಕಾರ್ಯಗಳು ಕೇವಲ ಬಾಹ್ಯ ಪ್ರೇರಣೆಗೆ ಯಾ ಪರಿಸ್ಥಿತಿಗೆ ಅಧೀನವಾಗಿರದೆ ಸ್ವಲ್ಪಮಟ್ಟಿಗೆ ಪುರುಷ ಸಂಕಲ್ಪಕ್ಕೆ ಅನುಸಾರವಾಗಿ ಆಗುವುವೆಂಬ ಸಿದ್ಧಾಂತ.
  • ಅನಿಯತತ್ವವಾದ; ನೈಸರ್ಗಿಕ ವ್ಯಾಪಾರಗಳನ್ನು ಭೌತಶಾಸ್ತ್ರದ ನಿಯಮಗಳಿಂದ ನಿರ್ಧರಿಸಲಾಗುವುದಿಲ್ಲ ಎಂಬ ಸಿದ್ಧಾಂತ.

  • indeterminist
    ನಾಮವಾಚಕ
  • (ತತ್ತ್ವಶಾಸ್ತ್ರ) ಪೌರುಷವಾದಿ; ಪುರುಷಸ್ವಾತಂತ್ರ್ಯವಾದಿ.
  • ಅನಿಯತತ್ವವಾದಿ; ನೈಸರ್ಗಿಕ ವ್ಯಾಪಾರಗಳನ್ನು ಭೌತಶಾಸ್ತ್ರ ನಿಯಮಗಳಿಂದ ನಿರ್ಣಯಿಸಲಾಗುವುದಿಲ್ಲ ಎನ್ನುವವನು.

  • index
    ನಾಮವಾಚಕ
    (ಬಹುವಚನ indexes ಯಾ, ಮುಖ್ಯವಾಗಿ ತಂತ್ರವಿಜ್ಞಾನದಲ್ಲಿ indices ಉಚ್ಚಾರಣೆ ಇಂಡಿಸೀಸ್‍).
  • ತೋರುಬೆರಳು; ತರ್ಜನಿ.
  • (ಯಂತ್ರಸಲಕರಣೆಗಳಲ್ಲಿ) ಸೂಚಿ; ಅಳತೆ, ತೂಕ, ಮೊದಲಾದವನ್ನು ತೋರಿಸುವ ಮುಳ್ಳು.
  • = index number.
  • ಸೂಚಿ; ಯಾವುದೇ ಗುಣ ಯಾ ಲಕ್ಷಣವನ್ನು ಸೂಚಿಸಲು ಬಳಸುವ, ಮತ್ತು ಅಳತೆ ಮೊದಲಾದವುಗಳ ಮೇಲೆ ನಿರ್ಧರಿಸಲಾಗುವ ಒಂದು ಸಂಖ್ಯೆ ಯಾ ಪ್ರಮಾಣ (refractive index).
  • ಮಾರ್ಗದರ್ಶಕ (ಸೂತ್ರ); ಅಭಿಸೂಚಕ; ಸೂಚನೆ.
  • ನಿರ್ಧಾರಕ; ನಿರ್ಣಾಯಕ; ತೀರ್ಮಾನವನ್ನು ಸೂಚಿಸುವ ವಸ್ತು ಯಾ ವಿಷಯ.
  • ಅಕಾರಾದಿ; ಅನುಕ್ರಮಣಿ; ಸಾಮಾನ್ಯವಾಗಿ ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ವಿಷಯಗಳು, ಹೆಸರುಗಳು, ಮೊದಲಾದವುಗಳ ಅಕಾರಾದಿ ಸೂಚಿ.
  • = $^1$card index.
  • (ಚರಿತ್ರೆ, Index) ನಿಷಿದ್ಧ ಪುಸ್ತಕ ಸೂಚಿ; ರೋಮನ್‍ ಕ್ಯಾಥೊಲಿಕ್‍ರಿಗೆ ನಿಷಿದ್ಧವಾಗಿರುವ ಯಾ ನಿಷಿದ್ಧ ಭಾಗಗಳನ್ನು ತೆಗೆದು ಹಾಕಿದ ಪುಸ್ತಕಗಳ ಪಟ್ಟಿ.
  • (ಮುದ್ರಣ) ತೋರುಬೆರಳು ಗುರುತು; ತರ್ಜನಿ ಚಿಹ್ನೆ; ಟಿಪ್ಪಣಿ ಮೊದಲಾದವುಗಳತ್ತ ವಾಚಕರ ಗಮನ ಸೆಳೆಯಲು ಬಳಸುವ, ತೋರುಬೆರಳು ಚಾಚಿ, ಉಳಿದ ಬೆರಳುಗಳು ಒಳಮಡಿಸಿರುವ ಗುರುತು.
  • (ಗಣಿತ) ಘಾತ; ಘಾತಾಂಕ; ಘಾತಸೂಚಿ; ಯಾವುದೇ ಮೊತ್ತದಲ್ಲಿ ನಿರ್ದಿಷ್ಟ ಸಂಖ್ಯೆ ಯಾ ಬೀಜಗಣಿತ ಸಂಕೇತ ಎಷ್ಟು ಸಲ ಅಪವರ್ತನವಾಗಿ ಬರುತ್ತದೆ ಎಂಬುದನ್ನು ಸೂಚಿಸುವ ಸಂಖ್ಯೆ ಯಾ ಸಂಕೇತ: 3 is the index of the term $x$ in the term $x^3y^2\cdot x^3y^2$ ಎಂಬಲ್ಲಿ $x$ನ ಘಾತ $3$.

  • index
    ಸಕರ್ಮಕ ಕ್ರಿಯಾಪದ
  • (ಪುಸ್ತಕಕ್ಕೆ) ಅಕಾರಾದಿಯನ್ನು ರಚಿಸು; ಅನುಕ್ರಮಣಿ ಸೇರಿಸು.
  • (ಪದ ಮೊದಲಾದವನ್ನು) ಅಕಾರಾದಿಯಲ್ಲಿ ಸೇರಿಸು.
  • (ಕೂಲಿ ಮೊದಲಾದವನ್ನು) ಬೆಲೆ ಸೂಚ್ಯಂಕದೊಡನೆ ಸರಿ ಹೊಂದಿಸು.

  • index expurgatorius
    ನಾಮವಾಚಕ
    (ರೋಮನ್‍ ಕ್ಯಾಥೊಲಿಕ್‍) (ನಿಷಿದ್ಧ ಭಾಗಗಳನ್ನು ತೆಗೆದುಹಾಕಿದಲ್ಲಿ ಯಾವ ಗ್ರಂಥಗಳನ್ನು ಓದಬಹುದೆಂದು ಅಪ್ಪಣೆಯಿರುವುದೋ ಆ ಪುಸ್ತಕಗಳಲ್ಲಿ ತೆಗೆದುಹಾಕಬೇಕಾದ) ನಿಷಿದ್ಧ ಭಾಗಗಳ ಪಟ್ಟಿ.

    index finger
    ನಾಮವಾಚಕ
    = 1index (1).


    logo