logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orbicularity
ನಾಮವಾಚಕ
  • ವರ್ತುಲತೆ; ವೃತ್ತಾಕಾರವಾಗಿರುವಿಕೆ; ಚಕ್ರದಂತಿರುವಿಕೆ.
  • ಗುಂಡಾಗಿರುವಿಕೆ; ದುಂಡಾಗಿರುವುದು; ಗೋಳಾಕಾರವಾಗಿರುವಿಕೆ; ಚೆಂಡಿನಂತಿರುವುದು.
  • ಪೂರ್ಣತೆ; ಸಮಗ್ರತೆ.

  • orbicularly
    ಕ್ರಿಯಾವಿಶೇಷಣ
  • ವರ್ತುಲವಾಗಿ; ವೃತ್ತಾಕಾರವಾಗಿ; ಚಕ್ರಾಕಾರವಾಗಿ.
  • ಗುಂಡಾಗಿ; ದುಂಡಾಗಿ; ಗೋಳಾಕಾರವಾಗಿ; ಚೆಂಡಿನಂತೆ.
  • ಪೂರ್ಣವಾಗಿ; ಸಮಗ್ರವಾಗಿ.

  • orbiculate
    ಗುಣವಾಚಕ
    (ಸಸ್ಯವಿಜ್ಞಾನ) ವರ್ತುಲ; ವೃತ್ತಾಕಾರದ: an orbiculate leaf ವರ್ತುಲ ಪತ್ರ; ದುಂಡಾದ ಎಲೆ.

    orbit
    ನಾಮವಾಚಕ
  • ಕಣ್ಣುಗೂಡು; ಕಣ್ಣುಕುಳ; ನೇತ್ರಕುಹರ.
  • (ಹಕ್ಕಿಯ ಯಾ ಕ್ರಿಮಿಕೀಟದ) ಕಣ್ಣ ಸುತ್ತಲ ಅಂಚು; ನೇತ್ರಪ್ರಾಂತ.
  • ಕಕ್ಷೆ; (ಗ್ರಹ, ಉಪಗ್ರಹ, ಧೂಮಕೇತು, ಮೊದಲಾದವುಗಳ) ವರ್ತುಲ ಯಾ ದೀರ್ಘವೃತ್ತಾಕಾರದ ಪಥ.
  • (ರೂಪಕವಾಗಿ) ಕಾರ್ಯಕ್ಷೇತ್ರ; ಕಾರ್ಯವ್ಯಾಪ್ತಿ.
  • (ಅಣುಕೇಂದ್ರದ ಸುತ್ತ ಸುತ್ತುವ) ಇಲೆಕ್ಟ್ರಾನಿನ ಕಕ್ಷೆ, ಪಥ.
  • (ಕಾಯವೊಂದರ ಸುತ್ತ) ಒಂದು ಪ್ರದಕ್ಷಿಣೆ; ಒಂದು ಸುತ್ತು.
  • ಪಥವೊಂದರಲ್ಲಿ ಸುತ್ತುತ್ತಿರುವ ಸ್ಥಿತಿ; ಪರಿಭ್ರಮಣ (ಸ್ಥಿತಿ).

  • orbit
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಕಾಯ ಮೊದಲಾದವುಗಳ) ಸುತ್ತ ಒಂದು ಕಕ್ಷೆಯಲ್ಲಿ ಸುತ್ತು, ಚಲಿಸು.
  • ಒಂದು ಕಕ್ಷೆಯಲ್ಲಿ–ಇಡು, ಸೇರಿಸು.

  • orbital
    ಗುಣವಾಚಕ
  • (ಖಗೋಳ ವಿಜ್ಞಾನ ಮತ್ತು ಭೌತವಿಜ್ಞಾನ) (ಗ್ರಹ ಮೊದಲಾದವುಗಳ) ಕಕ್ಷೆಯ; ಪಥದ.
  • (ಅಂಗರಚನಾಶಾಸ್ತ್ರ) ಕಣ್ಣುಗುಳಿಯ.
  • (ರಸ್ತೆಯ ವಿಷಯದಲ್ಲಿ) ನಗರದ–ಬಾಹ್ಯ ವಲಯದ, ಹೊರವಲಯದ, ಹೊರಗೆ ಸುತ್ತಲೂ ಸಾಗುವ.

  • orbital
    ನಾಮವಾಚಕ
    (ಭೌತವಿಜ್ಞಾನ) ಕಕ್ಷಕ; ಅಣು ಮತ್ತು ಪರಮಾಣುಗಳಲ್ಲಿ ಒಂದು ನಿರ್ದಿಷ್ಟ ಇಲೆಕ್ಟ್ರಾನಿನ ಚಲನಯ ಬಗ್ಗೆ ಷ್ರೋಡಿಂಗರ್‍ ತರಂಗ ಸಮೀಕರಣದಿಂದ ಹೊರಬೀಳುವ ಫಲಿತಾಂಶ ಯಾ ಅದರ ಚಿತ್ರರೂಪಣ.

    orbital sander
    ನಾಮವಾಚಕ
    ಚಕ್ರಕ್ಷೇಪಕ; ಪಕ್ಕದಿಂದ ಪಕ್ಕಕ್ಕೆ ತೂಗಾಡದೆ, ಚಕ್ರದಂತೆ ಸುತ್ತುತ್ತಾ ಮರಳೆರಚುವ ಯಂತ್ರ.

    orbiter
    ನಾಮವಾಚಕ
    ಕಕ್ಷೆಗ; ಕಕ್ಷೆಗಾಮಿ; ಕಕ್ಷೆಯಲ್ಲಿ ಸುತ್ತುವಂಥದು, ಮುಖ್ಯವಾಗಿ ಮಾನವ ನಿರ್ಮಿತ ಉಪಗ್ರಹ.

    orca
    ನಾಮವಾಚಕ
  • ತಿಮಿಂಗಲ ಯಾ ಅದರಂಥ ಪ್ರಾಣಿ.
  • ಕಡಲಿನ (ಯಾವುದೇ ಇತರ) ಭಾರಿ ಪ್ರಾಣಿ, ದೈತ್ಯ ಪ್ರಾಣಿ.


  • logo