ಲೆನಿನ್ – ವಾದ, ಸಿದ್ಧಾಂತ; ರಷ್ಯದ ಮಹಾಕ್ರಾಂತಿಯ ನಾಯಕನಾದ ಲೆನಿನ್ (1870 – 1924) ಪ್ರತಿಪಾದಿಸಿದ ಕಮ್ಯೂನಿಸ್ಟ್ ಸಿದ್ಧಾಂತ ಮತ್ತು ರಾಜನೀತಿ.
Leninist
ನಾಮವಾಚಕ
ಲೆನಿನ್‍ವಾದಿ; ಲೆನಿನ್ ಪಂಥಿ; ಲೆನಿನ್ ಪಂಥದವನು; ಲೆನಿನ್ನನ ಯಾ ಅವನ ಸಿದ್ಧಾಂತದ ಅನುಯಾಯಿ.
Leninist
ಗುಣವಾಚಕ
ಲೆನಿನ್ನನ – ಸಿದ್ಧಾಂತದ, ಪಂಥದ.
Leninite
ನಾಮವಾಚಕ
= 1Leninist.
Leninite
ಗುಣವಾಚಕ
= 2Leninist.
lenition
ನಾಮವಾಚಕ
(ಧ್ವನಿವಿಜ್ಞಾನ) (ಕೆಲ್ಟಿಕ್ ಭಾಷೆಗಳಲ್ಲಿ) ಮೃದೂಕರಣ; ಮೃದೂಚ್ಚಾರಣ; ಶಿಥಿಲೀಕರಣ; ಸ್ನಾಯುಬಿಗಿತ ಮತ್ತು ಶ್ವಾಸ ಬಲವನ್ನು ಕಡಿಮೆ ಮಾಡಿ ವ್ಯಂಜನವನ್ನು ಉಚ್ಚರಿಸುವ ಮೂಲಕ ಅದನ್ನು ಮೃದುಗೊಳಿಸುವ ಯಾ ಶಿಥಿಲಗೊಳಿಸುವ ಪ್ರಕ್ರಿಯೆ ಯಾ ಪರಿಣಾಮ: ಪ, ಟ ಗಳಿಗಿಂತ ಬ, ಡ ಗಳು ಶಿಥಿಲ ವ್ಯಂಜನಗಳು.
lenitive
ಗುಣವಾಚಕ
(ವೈದ್ಯಶಾಸ್ತ್ರ) ( ಉಪಸರ್ಗ) ಶಾಮಕ; ಶಮನಕಾರಿ; (ನೋವು ಮೊದಲಾದವನ್ನು) ಕಡಿಮೆ ಮಾಡುವ.
lenitive
ನಾಮವಾಚಕ
(ವೈದ್ಯಶಾಸ್ತ್ರ) ( ಉಪಸರ್ಗ) ಶಾಮಕ; ಉಪಶಮನಕಾರಿ; ನೋವು ಮೊದಲಾದವನ್ನು ಕಡಿಮೆ ಮಾಡುವ ಮೂಲಿಕೆ, ಮುಲಾಮು, ಮೊದಲಾದವು.
lenity
ನಾಮವಾಚಕ
(ಸಾಹಿತ್ಯಕ)
ದಯಾಪರತೆ; ಸೌಮ್ಯತೆ.
ದಯೆ; ಕೃಪೆ; ಕರುಣೆ; ಕ್ಷಮೆ; ಕ್ಷಮಿಸುವ ಕ್ರಿಯೆ.
leno
ನಾಮವಾಚಕ
ಲೀನೋ; ಹೆಣೆಯಲು ಮುಂಚೆ ಹಾಸುದಾರಗಳನ್ನು ಜೋಡಿಯಾಗಿ ಹೊಸೆದು, ಜಾಲರಿ ಜಾಲರಿಯಾಗಿ ನೆಯ್ದ ಬಟ್ಟೆ.