logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indescribability
ನಾಮವಾಚಕ
  • ಅನಿರ್ದಿಷ್ಟತೆ; ಅಸ್ಪಷ್ಟತೆ.
  • ಅವರ್ಣನೀಯತೆ; ವರ್ಣನಾತೀತತೆ; ಅನಿರ್ವಚನೀಯತೆ.

  • indescribable
    ಗುಣವಾಚಕ
  • ಅನಿರ್ದಿಷ್ಟ; ಅಸ್ಪಷ್ಟ: a strange indescribable feeling ವಿಚಿತ್ರವಾದ ಒಂದು ಅಸ್ಪಷ್ಟ ಭಾವನೆ.
  • (ಒಂದು ವಸ್ತು ಬಹಳ ಶ್ರೇಷ್ಠವಾಗಿ ಯಾ ರಮಣೀಯವಾಗಿ ಯಾ ಕೆಟ್ಟದ್ದಾಗಿ ಇರುವುದರಿಂದ) ಅವರ್ಣನೀಯ; ವರ್ಣನಾತೀತ; ಅನಿರ್ವಚನೀಯ; ವಿವರಿಸಲಾಗದ; ವಿವರಿಸಲಸದಳವಾದ: indescribable joy ಅವರ್ಣನೀಯ ಆನಂದ. indescribable horror ವರ್ಣನಾತೀತವಾದ ಘೋರತೆ.

  • indescribably
    ಕ್ರಿಯಾವಿಶೇಷಣ
  • ಅನಿರ್ದಿಷ್ಟವಾಗಿ; ಅಸ್ಪಷ್ಟವಾಗಿ.
  • ಅವರ್ಣನೀಯವಾಗಿ; ಅನಿರ್ವಚನೀಯವಾಗಿ; ವರ್ಣಿಸಲಾಗದಂತೆ.

  • indestructibility
    ನಾಮವಾಚಕ
    ಅವಿನಾಶಿತ್ವ; ಅಕ್ಷಯತ್ವ; ಅನಾಶ್ಯತೆ.

    indestructible
    ಗುಣವಾಚಕ
    ಅವಿನಾಶಿ; ಅನಾಶ್ಯ; ಅಕ್ಷಯ; ನಾಶಮಾಡಲಾಗದ.

    indestructibly
    ಕ್ರಿಯಾವಿಶೇಷಣ
    ಅವಿನಾಶಿಯಾಗಿ; ನಾಶಮಾಡಲಾಗದ ರೀತಿಯಲ್ಲಿ.

    indeterminable
    ಗುಣವಾಚಕ
  • ಗೊತ್ತುಪಡಿಸಲಾಗದ; ನಿರ್ಧರಿಸಲಾಗದ; ಅನಿರ್ಣೇಯ; ಅನಿರ್ಧಾರ್ಯ.
  • (ವ್ಯಾಜ್ಯ ಮೊದಲಾದವುಗಳ ವಿಷಯದಲ್ಲಿ) ತೀರ್ಮಾನಿಸಲಾಗದ; ಪರಿಹರಿಸಲಾಗದ; ಇತ್ಯರ್ಥಮಾಡಲಾಗದ; ಬಗೆಹರಿಸಲಾಗದ.

  • indeterminably
    ಕ್ರಿಯಾವಿಶೇಷಣ
  • ನಿರ್ಧರಿಸಲಾಗದಂತೆ; ಅನಿರ್ಣೇಯವಾಗಿ; ಅನಿರ್ಧಾರ್ಯವಾಗಿ.
  • (ವ್ಯಾಜ್ಯ) ತೀರ್ಮಾನಿಸಲಾಗದಂತೆ; ಪರಿಹರಿಸಲಾಗದಂತೆ.

  • indeterminacy
    ನಾಮವಾಚಕ
    = indetermination.

    indeterminate
    ಗುಣವಾಚಕ ಪದಗುಚ್ಛ
    indeterminate vowel ಅನಿಷ್ಕೃಷ್ಟ ಸ್ವರ, ಉದಾಹರಣೆಗೆ ago, moment, ಮೊದಲಾದವುಗಳಲ್ಲಿ ಓರೆ ಅಕ್ಷರದಿಂದ ಗುರುತಿಸಿರುವಂಥ ಸ್ವರದ ಶಬ್ದ, ಧ್ವನಿ.
  • (ವಿಸ್ತಾರ, ಲಕ್ಷಣ, ಮೊದಲಾದವುಗಳ ವಿಷಯದಲ್ಲಿ) ಅನಿರ್ಧಾರಿತ; ಅನಿರ್ಣೀತ; ಅನಿರ್ದಿಷ್ಟ; ಒಂದೂ ಗೊತ್ತಿಲ್ಲದ.
  • ಸಂದಿಗ್ಧ; ಅನಿಶ್ಚಿತ.
  • ಅಸ್ಪಷ್ಟ; ಅನಿಷ್ಕೃಷ್ಟ.
  • (ಗಣಿತ) (ಸಂಖ್ಯೆ ಯಾ ರಾಶಿಯ ವಿಷಯದಲ್ಲಿ) ಅನಿರ್ಧಾರಿತ; ಅನಿರ್ಣೀತ; ನಿರ್ದಿಷ್ಟ ಮೌಲ್ಯವಿಲ್ಲದ, ಉದಾಹರಣೆಗೆ $\frac{ 0}{ 0}$.
  • (ಗಣಿತ) (ಸಈಕರಣದ ವಿಷಯದಲ್ಲಿ) ಅನಿಯತ; ಬೀಜಾಂಕಗಳಿಗೆ ಲೆಕ್ಕವಿಲ್ಲದಷ್ಟು ಯಾ ಅಸಂಖ್ಯಾತ ಮೌಲ್ಯಗಳನ್ನು ಕೊಡಬಹುದಾದ.


  • logo