logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oratorial
ಗುಣವಾಚಕ
= oratorical.

oratorian
ನಾಮವಾಚಕ
(ರೋಮನ್‍ ಕ್ಯಾಥೊಲಿಕ್‍ ಚರ್ಚಿನ) ಅರೇಟರಿ ಸಂಘದ ಸದಸ್ಯ.

oratorian
ಗುಣವಾಚಕ
(ರೋಮನ್‍ ಕ್ಯಾಥೊಲಿಕ್‍ ಚರ್ಚಿನ) ಆರೇಟರಿ ಸಂಘದ; ಆರೇಟರಿ ಸಂಘದವನ.

oratorical
ಗುಣವಾಚಕ
  • ಭಾಷಣಕಲೆಯ; ಭಾಷಣಕಲೆಗೆ ಸಂಬಂಧಿಸಿದ.
  • ವಾಗ್ಮಿತೆಯಿಂದ ಕೂಡಿದ.
  • ವಾಗ್ಮಿಗೆ ಸಂಬಂಧಿಸಿದ.
  • ವಾಗಾಡಂಬರಂದಿಂದ ಕೂಡಿದ.

  • oratorically
    ಕ್ರಿಯಾವಿಶೇಷಣ
  • ವಾಗ್ಮಿತೆಯಿಂದ (ಕೂಡಿ); ವಾಕ್ಪಟುತ್ವದಿಂದ (ಕೂಡಿ).
  • ವಾಗಾಡಂಬರದಿಂದ (ಕೂಡಿ).

  • oratorio
    ನಾಮವಾಚಕ
    ಆರಟೋರಿಯೊ; (ಅಭಿನಯ, ದೃಶ್ಯಾವಳಿ, ವೇಷ ಪೋಷಾಕು ಯಾವುದೂ ಇಲ್ಲದೆ ತನಿಗಾಯಕರು ಯಾ ವಾದಕರು, ಸಾಮೂಹಿಕ ಗಾಯಕರು ಯಾ ವಾದಕರು ಇಲ್ಲವೆ ಗಾಯನ ಯಾ ವಾದ್ಯ ಮೇಳದವರು ನಡೆಸುವ, ಧಾರ್ಮಿಕ ವಿಷಯವನ್ನು ಕುರಿತ) ನಾಟಕಮಿಶ್ರಿತ ಕೃತಿ; ಗೀತರೂಪಕ.

    oratory
    ನಾಮವಾಚಕ
  • (Oratory) (ಕ್ರೈಸ್ತ) (ಏಕಾಂತ ಪೂಜೆಗಾಗಿ ರಚಿಸಿರುವ) ಸಣ್ಣ ಪೂಜಾಮಂದಿರ; ಏಕಾಂತ ಪೂಜಾಗೃಹ.
  • (Oratory)
    1. (ಯಾವ ವ್ರತಗಳನ್ನೂ ತಳೆಯದೆ, ಜನತೆಗಾಗಿ ಸರಳೋಪದೇಶಗಳನ್ನು ಮಾಡುತ್ತ ಸರಳ ಪೂಜಾವಿಧಿಗಳನ್ನು ಕೈಗೊಳ್ಳುತ್ತಿದ್ದ, 1564ರಲ್ಲಿ ರೋಂನಲ್ಲಿ ಸ್ಥಾಪಿತವಾದ) ರೋಮನ್‍ ಕ್ಯಾಥೊಲಿಕ್‍ ಪಾದ್ರಿಗಳ ಸಂಘ, ಅರೇಟರಿ ಸಂಘ.
    2. ಇಂಗ್ಲೆಂಡ್‍ ಮೊದಲಾದವುಗಳಲ್ಲಿನ ಇದರ ಶಾಖೆ.
  • ಭಾಷಣ.
  • ಭಾಷಣ ಕಲೆ.
  • ವಾಗ್ಮಿತೆ; ವಾಕ್ಪುಟುತ್ವ; ವಾಗ್ದಾರೆ; ವಾಗ್ದೋರಣೆ; ವಾಗ್ಝರಿ.
  • ವಾಗಾಡಂಬರದ ನಿರೂಪಣೆ; ಅಲಂಕಾರಮಯವಾಗಿ ಆಡಂಬರದ ಹಾಗೂ ಉತ್ಪ್ರೇಕ್ಷಾಮಯ ಶೈಲಿಯಲ್ಲಿ ವಿಷಯದ ನಿರೂಪಣೆ.

  • orb
    ನಾಮವಾಚಕ
  • ವೃತ್ತರೇಖೆ; ವರ್ತುಲ ಮಂಡಲ ಯಾ ವಲಯ (ಈಗ ವಿರಳ ಪ್ರಯೋಗ).
  • ಗೋಳ; ಮಂಡಲ; ಗೋಳಾಕಾರದ ವಸ್ತು.
  • (ಕಾವ್ಯಪ್ರಯೋಗ) ಆಕಾಶಕಾಯ.
  • (ಕಾವ್ಯಪ್ರಯೋಗ) ಕಣ್ಣುಗುಡ್ಡೆ ಯಾ ಕಣ್ಣು.
  • (ಮುಖ್ಯವಾಗಿ ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಜನು ಹಿಡಿದು ಒಯ್ಯುವ, ರಾಜಲಾಂಛನಗಳಲ್ಲೊಂದಾದ) ಶಿಲುಬೆ ಗೋಳ; ಶಿರೋಭಾಗದಲ್ಲಿ ಶಿಲುಬೆಯುಳ್ಳ ಚಿನ್ನದ ಗೋಳ.

  • orb
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಗುಂಡಾಗು; ಗೋಳವಾಗು.
  • (ವಲಯದೊಳಗಿರುವಂತೆ) ಸುತ್ತುಗಟ್ಟು; ಸುತ್ತುವರಿ.
  • ಗುಂಡಾಗಿಸು; ಗೋಳವನ್ನಾಗಿ ಮಾಡು.

  • orbicular
    ಗುಣವಾಚಕ
    (ಔಪಚಾರಿಕ)
  • ವೃತ್ತಾಕಾರದ; ವರ್ತುಲ; ಚಕ್ರಾಕಾರದ; ಮಂಡಲಾಕಾರದ; ವಲಯಾಕಾರದ: orbicular muscle (ವೈದ್ಯಶಾಸ್ತ್ರ) (ರಂಧ್ರವನ್ನಾಗಲಿ ನಾಳವನ್ನಾಗಲಿ ಮುಚ್ಚಲು ಅನುಕೂಲಿಸುವಂತೆ, ಅದನ್ನು ಸುತ್ತುವರಿದಿರುವ) ವರ್ತುಲ ಸ್ನಾಯು.
  • ಗುಂಡಾದ; ದುಂಡನೆಯ; ಗೋಳಾಕಾರದ; ಚೆಂಡಿನಂತಿರುವ.
  • (ರೂಪಕವಾಗಿ) ಪೂರ್ಣವಾಗಿರುವ; ಸಮಗ್ರ.


  • logo