logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lengthiness
ನಾಮವಾಚಕ
(ಭಾಷಣ, ಲೇಖನ, ಶೈಲಿ, ಭಾಷಣಕಾರ, ಮೊದಲಾದವರ ವಿಷಯದಲ್ಲಿ)
  • ವಿಪರೀತ ಉದ್ದವಾಗಿರುವಿಕೆ; ಅತಿ ದೀರ್ಘತೆ.
  • ಶಬ್ದಾಧಿಕ್ಯ; ಶಬ್ದಬಾಹುಳ್ಯ; ಅತಿಯಾಗಿ ಶಬ್ದಗಳನ್ನು ಬಳಸುವಿಕೆ.
  • ಬೇಸರ ತರುವಿಕೆ; ಜುಗುಪ್ಸೆ ಹುಟ್ಟಿಸುವಂತಿರುವುದು.

  • lengthman
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ರಸ್ತೆಯ ಯಾ ರೈಲು ದಾರಿಯ ಒಂದು ವಿಭಾಗವನ್ನು ನೋಡಿಕೊಳ್ಳುವವ.

    lengthways
    ಕ್ರಿಯಾವಿಶೇಷಣ
    ಉದ್ದುದ್ದವಾಗಿ.

    lengthwise
    ಕ್ರಿಯಾವಿಶೇಷಣ
    = lengthways.

    lengthwise
    ಗುಣವಾಚಕ
    ಉದ್ದುದ್ದವಾಗಿ ಬಿದ್ದಿರುವ ಯಾ ಚಲಿಸುವ.

    lengthy
    ಗುಣವಾಚಕ
  • ಬಹಳ ಉದ್ದವಾದ; ಅತಿದೀರ್ಘವಾದ.
  • (ಭಾಷಣ, ಲೇಖನ, ಶೈಲಿ, ಭಾಷಣಕಾರ, ಮೊದಲಾದವರ ವಿಷಯದಲ್ಲಿ)
    1. ಬಹಳ ಉದ್ದವಾದ; ಅತಿದೀರ್ಘವಾದ; ವಿಪರೀತ ಲಂಬಿಸಿದ.
    2. ಶಬ್ದಬಾಹುಳ್ಯದ; ಅತಿಯಾಗಿ ಪದತುಂಬಿದ.
    3. ಬೇಸರ ಹಿಡಿಸುವ; ಜುಗುಪ್ಸೆ ತರುವ; ಚಿಟ್ಟು ಬರಿಸುವ.

  • lenience
    ನಾಮವಾಚಕ
  • ಸಹನೆ; ತಾಳ್ಮೆ; ಸಹಿಷ್ಣುತೆ; ಸೈರಣೆ.
  • ಮೃದುತ್ವ; ಸೌಮ್ಯತೆ; ದಯಾಪರತೆ.
  • (ಶಿಕ್ಷೆ ಮೊದಲಾದವುಗಳ ವಿಷಯದಲ್ಲಿ) ಸೌಮ್ಯತೆ; ಕಠಿಣವಲ್ಲದಿರುವಿಕೆ.

  • leniency
    ನಾಮವಾಚಕ
    = lenience.

    lenient
    ಗುಣವಾಚಕ
  • ಸಹಿಷ್ಣು; ಸಹನಶೀಲ; ಸೈರಣೆಯುಳ್ಳ.
  • ಮೃದುವಾದ; ದಯಾಪರ; ದಯದಾಕ್ಷಿಣ್ಯಗಳಿಂದ ಕೂಡಿದ; ನಿಷ್ಠುರವಾಗಿರದ.
  • (ಶಿಕ್ಷೆ ಮೊದಲಾದವುಗಳ ವಿಷಯದಲ್ಲಿ) ಸೌಮ್ಯವಾದ; ಕಠಿಣವಲ್ಲದ; ಉಗ್ರವಲ್ಲದ; ಕಠೋರವಲ್ಲದ.
  • (ಪ್ರಾಚೀನ ಪ್ರಯೋಗ) ಉಪಶಾಮಕ; ಮಿದುಗೊಳಿಸುವ; ಮೃದುಕಾರಿಯಾದ: lenient balm ಉಪಶಾಮಕ ಮುಲಾಮು.

  • leniently
    ಕ್ರಿಯಾವಿಶೇಷಣ
  • ಸಹನೆಯಿಂದ; ಸೈರಣೆಯಿಂದ.
  • ಮೃದುವಾಗಿ.
  • (ಶಿಕ್ಷೆ ಮೊದಲಾದವುಗಳ ವಿಷಯದಲ್ಲಿ) ಸೌಮ್ಯವಾಗಿ; ಕಠೋರವಾಗಿಲ್ಲದೆ; ಉಗ್ರವಾಗಿಲ್ಲದೆ.


  • logo