logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indentation
ನಾಮವಾಚಕ
  • ಕಚ್ಚು ಕಚ್ಚು (ಆಗಿರುವುದು); ಕಚ್ಚು – ಮಾಡಿರುವುದು, ಮಾಡುವುದು.
  • ಕತ್ತರಿಕೆ; ಕಚ್ಚು.
  • ಕ್ರಕಚರೇಖೆ; ಕೋಚು ಕೋಚು.
  • (ಸಮುದ್ರತೀರ ಮೊದಲಾದವುಗಳಲ್ಲಿ ಒಳಕ್ಕೆ ದೂರ ಹೋಗಿರುವ) ಕೊಲ್ಲಿ; ಒಳಚಾಚು; ಒಳಕೋಚು.

  • indention
    ನಾಮವಾಚಕ
  • (ಮುದ್ರಣದಲ್ಲಿ) ಪಂಕ್ತಿಯ ಒಳಸರಿಕೆ ಯಾ ಒಳಚಾಚು.
  • = indentation.

  • indenture
    ನಾಮವಾಚಕ
  • ಕಚ್ಚುಪ್ರತಿ; ಕೊಚ್ಚು ದಸ್ತೈವಜು; ಕೋಚಾಗಿ ಕತ್ತರಿಸಿದ ಯಾ ಬೇರ್ಪಡಿಸಿದ ದಸ್ತೈವಜು.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಕೆಲಸದ ತರಬೇತಿ ಪಡೆಯುವವನನ್ನು ಅವನ ಮುಖ್ಯಸ್ಥನಿಗೆ ಕಟ್ಟಿಹಾಕುವ, ಬದ್ಧನಾಗಿರುವಂತೆ ಮಾಡುವ) ಮುದ್ರೆ ಒತ್ತಿದ ಕರಾರು ಯಾ ಒಪ್ಪಂದ.
  • (ವಿಧಿವತ್ತಾದ) ಪಟ್ಟಿ, ಯಾದಿ, ಪ್ರಮಾಣ ಪತ್ರ, ಮೊದಲಾದವು.
  • = indentation.

  • indenture
    ಸಕರ್ಮಕ ಕ್ರಿಯಾಪದ
    (ಮುಖ್ಯವಾಗಿ ತರಬೇತಿಗಾಗಿ ಬಂದ ಉಮೇದುವಾರನನ್ನು) ಕರಾರಿಗೆ ಒಳಪಡಿಸು; ಕರಾರಿನಿಂದ (ಒಬ್ಬನನ್ನು) ಬದ್ಧಗೊಳಿಸು, ಕಟ್ಟಿಹಾಕು.

    independence
    ನಾಮವಾಚಕ
  • ಅಪರಾಧೀನತೆ; ಸ್ವಾತಂತ್ರ್ಯ; ಅಪಾರತಂತ್ರ್ಯ.
  • ಸ್ವತಂತ್ರ ಆದಾಯ ಯಾ ವರಮಾನ.

  • Independence Day
    ನಾಮವಾಚಕ
    ಸ್ವಾತಂತ್ರ್ಯ ದಿನ; ಸ್ವತಂತ್ರತಾ ದಿನ:
  • (ಅಮೆರಿಕನ್‍ ಪ್ರಯೋಗ) ಜುಲೈ 4ನೆಯ ತಾರೀಖು; 1776ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಸಾರಿದ ದಿನ.
  • ಇತರ ದೇಶಗಳು ಇದೇ ರೀತಿ ಸ್ವಾತಂತ್ರ್ಯ ಪಡೆದ ದಿನ.

  • independency
    ನಾಮವಾಚಕ
  • (ಪ್ರಾಚೀನ ಪ್ರಯೋಗ) = independence.
  • (ಚರಿತ್ರೆ) (Independency) = Congregationalism.
  • ಸ್ವತಂತ್ರ ರಾಷ್ಟ್ರ ಯಾ ರಾಜ್ಯ.

  • independent
    ಗುಣವಾಚಕ
  • (ಯಾವುದೇ ಅಧಿಕಾರಕ್ಕೆ) ಅಧೀನವಲ್ಲದ; ಅಪರಾಧೀನ; ಸ್ವತಂತ್ರ.
  • ಸ್ವಯಮಾಡಳಿತದ; ಸ್ವಾಧಿಪತ್ಯದ.
  • (ಚರಿತ್ರೆ) (Independent) = Congregational.
  • ಸ್ವಾವಲಂಬಿ; ಸ್ವಾಯತ್ತ; ಸ್ವತಂತ್ರ(ವಾಗಿರುವ); ಅಪರತಂತ್ರ; ಪರಾವಲಂಬಿಯಲ್ಲದ; (ಪ್ರಾಮಾಣ್ಯ, ಕಾರ್ಯದಕ್ಷತೆ, ಮೊದಲಾದವಕ್ಕಾಗಿ) ಮತ್ತೊಂದನ್ನು ಅವಲಂಬಿಸಿರದ: independent proof ಸ್ವತಂತ್ರವಾದ ರುಜುವಾತು; ನೇರವಾದ ಸಾಕ್ಷ್ಯ independent research ಸ್ವಾಯತ್ತ ಸಂಶೋಧನೆ. independent observer ಸ್ವತಂತ್ರ ವೀಕ್ಷಕ.
  • (ಗಣಿತ) ಸ್ವತಂತ್ರ; ಸ್ವಮೌಲ್ಯದ; ಸ್ವತಂತ್ರವಾದ ಬೆಲೆಯುಳ್ಳ: independent variable ಸ್ವತಂತ್ರ ಚರ.
  • (ರೇಡಿಯೋ ವಿಷಯದಲ್ಲಿ) ಲೈಸನ್ಸ್‍ ತೆರಿಗೆಯಿಲ್ಲದ.
  • ಸ್ವತಂತ್ರ; ಹೊಟ್ಟೆಪಾಡಿಗಾಗಿ ದುಡಿಯಬೇಕಾಗಿಲ್ಲದ: independent income (ದುಡಿಯುವ ಅಗತ್ಯವಿಲ್ಲದ) ಸ್ವತಂತ್ರ ವರಮಾನ, ಆದಾಯ.
  • ಸ್ವತಂತ್ರ; ತನ್ನ ಅಭಿಪ್ರಾಯ ಯಾ ನಡೆವಳಿಗಾಗಿ ಇತರರನ್ನು ಅವಲಂಬಿಸದ.
  • (ರಾಜಕೀಯ ಮೊದಲಾದವುಗಳಲ್ಲಿ) ಸ್ವತಂತ್ರ; ಯಾವ ಪಕ್ಷಕ್ಕೂ ಸೇರದ.
  • ಸ್ವತಂತ್ರ; ಅಪರತಂತ್ರ; ಇತರರ ಋಣವನ್ನೊಲ್ಲದ; ಇತರರಿಂದ ಉಪಕಾರ ಪಡೆಯಲು ಒಪ್ಪದ, ಆಶಿಸದ.

  • independent
    ನಾಮವಾಚಕ
  • (ರಾಜಕೀಯ ಮೊದಲಾದವುಗಳಲ್ಲಿ) ಸ್ವತಂತ್ರ(ವರ್ತಿ); ಯಾವ ಪಕ್ಷಕ್ಕೂ ಸೇರದ.
  • (ಚರಿತ್ರೆ) (Independent) = Congregationalist.

  • independently
    ಕ್ರಿಯಾವಿಶೇಷಣ
    ಸ್ವತಂತ್ರವಾಗಿ.


    logo