(ಬಹುವಚನ ಅದೇ ಯಾ zlotys). ಪೋಲೆಂಡಿನ ನಾಣ್ಯಪದ್ಧತಿಯ ಏಕಮಾನ.
Zn
ಸಂಕೇತ
(ರಸಾಯನವಿಜ್ಞಾನ) zinc.
zodiac
ನಾಮವಾಚಕ
ಪದಗುಚ್ಛ
signs of the zodiac (ರಾಶಿಚಕ್ರದ ಯಾ ರಾಶಿಕುಂಡಲಿಯ) ಮೇಷಾದಿ ಹನ್ನೆರಡು ರಾಶಿಗಳು (ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ).
ರಾಶಿಚಕ್ರ:
ಆಕಾಶದಲ್ಲಿ ಸೂರ್ಯನ ತೋರ್ಕೆಯ ಪಥವಾದ ಕ್ರಾಂತಿವೃತ್ತದಿಂದ ಇಕ್ಕೆಲಗಳಲ್ಲೂ ಸುಮಾರು ಎಂಟು ಡಿಗ್ರಿ ಅಂತರವನ್ನೊಳಗೊಂಡ, ವರ್ಷಾದ್ಯಂತ ಗ್ರಹಗಳೆಲ್ಲವೂ ಸಂಚರಿಸುವ ಪ್ರದೇಶವಾಗಿರುವ, ಹನ್ನೆರಡು ಸಮಭಾಗಗಳಾಗಿ ಮಾಡಿ ಆ ಭಾಗಗಳಿಗೆ ಮೇಷ ವೃಷಭಾದಿ ಹೆಸರುಗಳನ್ನಿಟ್ಟು ದ್ವಾದಶ ರಾಶಿಗಳೆಂದು ಪರಿಗಣಿಸಲಾಗಿರುವ ಚಕ್ರಾಕಾರದ ಪಟ್ಟೆ.
ಅದರ ಚಿತ್ರ.
ಪೂ ವೃತ್ತ, ವಲಯ.
zodiacal
ಗುಣವಾಚಕ
ರಾಶಿಚಕ್ರದ, ಅದಕ್ಕೆ ಸಂಬಂಧಿಸಿದ.
zodiacal light
ನಾಮವಾಚಕ
ರಾಶಿಪ್ರಭೆ; ರಾಶಿಚಕ್ರ ಪ್ರಭೆ; ಅರುಣರಾಗ; ಮುಖ್ಯವಾಗಿ ಉಷ್ಣವಲಯದಲ್ಲಿ ಸೂರ್ಯೋದಯಕ್ಕೆ ಮುಂಚೆ ಪೂರ್ವದಲ್ಲಿ ಮತ್ತು ಸೂರ್ಯಾಸ್ತದ ತರುವಾಯ ಪಶ್ಚಿಮದಲ್ಲಿ ಕಾಣಬರುವ, ನೀಳವಾದ ತ್ರಿಕೋನಾಕಾರದ ಪ್ರಭೆ.
zoetrope
ನಾಮವಾಚಕ
(ಚರಿತ್ರೆ) ಜೀವ(ದೃಶ್ಯ)ಚಕ್ರ; ಉರುಳೊಂದರ ಒಳಮೈ ಮೇಲೆ ಚಿತ್ರಗಳ ಅನುಕ್ರಮ ಸಾಲೊಂದಿದ್ದು, ಉರುಳೆಯನ್ನು ತಿರುಗಿಸುತ್ತಾ, ಕಂಡಿಯೊಂದರ ಮೂಲಕ ಅದನ್ನು ನೋಡಿದಾಗ ಅವು ಚಲಿಸುತ್ತಿರುವಂತೆ ಕಾಣಿಸುವ ಭ್ರಮೆಯನ್ನು ಕಲ್ಪಿಸುತ್ತಿದ್ದ, ಒಂದು ಆಟದ ಸಲಕರಣೆ.
zoic
ಗುಣವಾಚಕ
ಪ್ರಾಣಿಗಳ ಯಾ ಅವಕ್ಕೆ ಸಂಬಂಧಿಸಿದ.
(ಭೂವಿಜ್ಞಾನ) (ಶಿಲೆ ಮೊದಲಾದವುಗಳ ವಿಷಯದಲ್ಲಿ) ಪಳೆಯುಳಿಕೆ ಯಾ ಹಾಸಿಲುಗಳಿರುವ; ಜೈವಿಕ ಕುರುಹುಗಳಿರುವ; ಪ್ರಾಣಿಯ ಯಾ ಸಸ್ಯದ ಗುರುತುಗಳಿರುವ.
Zollner's lines
ನಾಮವಾಚಕ
ಟ್ಸೋಲ್ನರ್ ರೇಖೆಗಳು; ಸಮಾಂತರವಾಗಿರುವ, ಆದರೆ ಅವುಗಳನ್ನು ಛೇದಿಸುವ ಓರೆಯಾದ ಮೊಟಕು ರೇಖೆಗಳ ಕಾರಣದಿಂದ ಸಮಾಂತರವಾಗಿ ಕಾಣದಿರುವ ರೇಖೆಗಳು.
zollverein
ನಾಮವಾಚಕ
German (ಚರಿತ್ರೆ) (ಮುಖ್ಯವಾಗಿ 19ನೆಯ ಶತಮಾನದ ಜರ್ಮನಿಯ ರಾಜ್ಯಗಳಲ್ಲಿದ್ದ) ಸುಂಕದ ಸಂಘ.