logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

umber
ಗುಣವಾಚಕ
  • ಕಂದುಕಾವಿ ಬಣ್ಣದ.
  • ಕಪ್ಪುಕಂದಿನ; ಹೊಗೆ ಬಣ್ಣದ.

  • umber
    ನಾಮವಾಚಕ
  • ಅಂಬರ್‍ ರಂಗು; ಕಂದುಕಾವಿ ರಂಗು; ಕಾವಿಯಂಥ ಆದರೆ ಅದಕ್ಕಿಂತ ಹೆಚ್ಚು ಕಪ್ಪುಕಂದಿನ, ಒಂದು ನೈಸರ್ಗಿಕ ವರ್ಣದ್ರವ್ಯ.
  • ಅಂಬರ್‍ ಯಾ ಕಂದುಕಾವಿ ಬಣ್ಣ.

  • umber
    ಸಕರ್ಮಕ ಕ್ರಿಯಾಪದ
    ಕಂದುಕಾವಿ ಬಣ್ಣ ಹಾಕು; ಅಂಬರ್‍ನಂಥ ಬಣ್ಣ ಲೇಪಿಸು.

    umbilical
    ಗುಣವಾಚಕ
  • ಹೊಕ್ಕುಳಿನ; ನಾಭಿಯ; ಹೊಕ್ಕುಳಿನ ಹತ್ತಿರವಿರುವ ಯಾ ಹೊಕ್ಕುಳಿಗೆ ಸಂಬಂಧಿಸಿದ.
  • ಕೇಂದ್ರಸ್ಥ; ಮಧ್ಯದಲ್ಲಿ, ಕೇಂದ್ರದಲ್ಲಿ ಇರುವ.

  • umbilical cord
    ನಾಮವಾಚಕ
  • ಹೊಕ್ಕುಳಬಳ್ಳಿ; ನಾಭಿರಜ್ಜು; ಭ್ರೂಣವನ್ನು ಮಾಸಿಗೆ ಸೇರಿಸುವ, ಮೆತುವಾಗಿ ಬಾಗಿಸಬಹುದಾದ, ಹಗ್ಗದಂಥ ರಚನೆ.
  • (ವಾಯುಯಾನ) ನಾಭಿರಜ್ಜು; ಕ್ಷಿಪಣಿಯನ್ನೂ ಅದನ್ನು ಉಡಾಯಿಸುವ ಸಾಧನವನ್ನೂ ಯಾ ಆಕಾಶನೌಕೆಯನ್ನೂ ಆಕಾಶದಲ್ಲಿರುವ ಗಗನ ಯಾತ್ರಿಯನ್ನೂ ಕೂಡಿಸುವ, ಮೆತುವಾದ ಹೊರಜಿ ಯಾ ಹಗ್ಗ.

  • umbilicate
    ಗುಣವಾಚಕ
  • ಹೊಕ್ಕುಳಿನಾಕಾರದ.
  • ಹೊಕ್ಕುಳುಳ್ಳ.

  • umbilicus
    ನಾಮವಾಚಕ
  • (ಅಂಗರಚನಾಶಾಸ್ತ್ರ) ನಾಭಿ; ಹೊಕ್ಕುಳು.
  • (ಜೀವವಿಜ್ಞಾನ) ಸಸ್ಯ ಯಾ ಪ್ರಾಣಿಗಳಲ್ಲಿ ನಾಭಿಯಂಥ ರಚನೆ.
  • (ಜ್ಯಾಮಿತಿ) (ವಕ್ರರೇಖೆಯ) ನಾಭಿ; ತಲ ಒಂದರ ಮೇಲಿರುವ ಮತ್ತು ಅದರ ಮೂಲಕ ಹಾದು ಹೋಗುವ ಎಲ್ಲ ಅಡ್ಡಕೊಯ್ತಗಳಿಗೂ ಸಮವಕ್ರತೆ ಇರುವಂಥ ಬಿಂದು.

  • umbles
    ನಾಮವಾಚಕ
    (ಜಿಂಕೆ ಮೊದಲಾದವುಗಳ) (ತಿನ್ನಲು ಬರುವ ಜಠರ, ಕರುಳು ಮೊದಲಾದವುಗಳ) ಮಾಂಸಭಾಗಗಳು.

    umbo
    ನಾಮವಾಚಕ
  • ಗುರಾಣಿಯ (ಮುಖ್ಯವಾಗಿ ಮಧ್ಯದಲ್ಲಿರುವ) ಉಬಉ, ಗುಬಟು.
  • (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಉಬಉ; ಗಂತಿ; ಗುಬಟು; ಮುಂಚಾಚು.

  • umbonal
    ಗುಣವಾಚಕ
  • (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಗುಬಟಿನ ಹಾಗಿರುವ; ಉಬ್ಬಿದಂಥ; ಗ್ರಂಥಿಯ ಹಾಗಿರುವ: an umbonal structure ಗುಬಟಿ ನಂಥ ರಚನೆ.
  • (ಗುರಾಣಿಯ ಮಧ್ಯಭಾಗದ, ಯಾ ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ ಸಹ) ಗುಬಟಿನ ಬಳಿಯ; ಗುಬಟು ಪ್ರದೇಶದ; ಗಂತಿಗೆ ಸೇರಿದ: the umbonal region ಗುಬಟಿನ ಪ್ರದೇಶ.


  • logo