logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

objectless
ಗುಣವಾಚಕ
  • ವಸ್ತುರಹಿತ; ನಿರ್ವಸ್ತುಕ; ವಸ್ತುಶೂನ್ಯವಾದ; ಯಾವ ವಸ್ತುವೂ ಇಲ್ಲದ.
  • ಉದ್ದೇಶರಹಿತ; ನಿರುದ್ದೇಶವಾದ; ಯಾವ ಗುರಿಯೂ, ಉದ್ದೇಶವೂ ಇಲ್ಲದ.

  • objector
    ನಾಮವಾಚಕ
    ಆಕ್ಷೇಪಿ; ಆಕ್ಷೇಪಕ; ಅಡ್ಡಿಗಾರ; ಆಕ್ಷೇಪ ಮಾಡುವವನು.

    objet d'art
    ನಾಮವಾಚಕ
  • ಚಿಕ್ಕ ಕಲಾ(ತ್ಮಕ) ವಸ್ತು; ಕಲಾಮೌಲ್ಯವುಳ್ಳ ಪುಟ್ಟ ವಸ್ತು.
  • ತೀರ ಕಡಮೆ ಬೆಲೆಯ ಕ್ಷುದ್ರಒಡವೆ.

  • objurgate
    ಸಕರ್ಮಕ ಕ್ರಿಯಾಪದ
    (ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸು; ದೂಷಿಸು; ಛೇಡಿಸು; ನಿಂದಿಸು; ಛೀಮಾರಿ ಹಾಕು.

    objurgation
    ನಾಮವಾಚಕ
    (ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸುವುದು; ಖಂಡನೆ; ಕಟು–ನಿಂದೆ, ದೂಷಣೆ; ಛೀಮಾರಿ(ಹಾಕುವುದು).

    objurgatory
    ಗುಣವಾಚಕ
    (ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸುವ; ದೂಷಿಸುವ; ಕಟುವಾಗಿ ನಿಂದಿಸುವ; ಛೀಮಾರಿ ಹಾಕುವ.

    oblanceolate
    ಗುಣವಾಚಕ
    (ಸಸ್ಯವಿಜ್ಞಾನ) (ಮುಖ್ಯವಾಗಿ ಎಲೆಗಳ ವಿಷಯದಲ್ಲಿ) ಬುಡದಲ್ಲಿ ಹೆಚ್ಚು ಚೂಪಾಗಿರುವ; ಈಟಿಯು ತಲೆಯಾಕಾರದ; ಶೂಲಶಿರರೂಪದ.

    oblate
    ನಾಮವಾಚಕ
    ದೀಕ್ಷಿತ; ದೀಕ್ಷಾಬದ್ಧ; ಧಾರ್ಮಿಕ ದೀಕ್ಷೆ ತೆಗೆದುಕೊಂಡ, ಧರ್ಮ ಪ್ರವರ್ತಕನಾಗಿರುವೆನೆಂಬ ವ್ರತ ಕೈಗೊಂಡ ವ್ಯಕ್ತಿ; ಧಾರ್ಮಿಕ ಜೀವನಕ್ಕೂ ಧರ್ಮ ಪ್ರವರ್ತನಕ್ಕೂ ತನ್ನನ್ನು ಅರ್ಪಿಸಿಕೊಂಡ ವ್ಯಕ್ತಿ.

    oblate
    ಗುಣವಾಚಕ
    (ಜ್ಯಾಮಿತಿ) (ಗೋಳಾಭದ ವಿಷಯದಲ್ಲಿ) ಚಪ್ಪಟೆ ತುದಿಗಳ; ಧ್ರುವಗಳಲ್ಲಿ ಚಪ್ಪಟೆಯಾಗಿರುವ.

    oblate spheroid
    ನಾಮವಾಚಕ
    (ಜ್ಯಾಮಿತಿ) ಚಪ್ಪಟೆ ಗೋಳಾಭ; ಕೆಳ ಮತ್ತು ಮೇಲು ತುದಿಗಳು ಸಮತಲವಾಗಿರುವ, ಚಪ್ಪಟೆಯಾಗಿರುವ ಗೋಲ; ದೀರ್ಘವೃತ್ತವನ್ನು ಅದರ ಲಘು ಅಕ್ಷದ ಸುತ್ತ ತಿರುಗಿಸಿದರೆ ಉತ್ಪತ್ತಿಯಾಗುವ ಘನಾಕೃತಿ.


    logo