(ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ) ಕೃತ; ನಿರ್ಮಿತ; ರಚಿತ; ರೂಪಿತ; ರಚಿಸಿದ; ಮಾಡಿದ; ರೂಪಿಸಿದ (ಮೊದಲಾದ ಅರ್ಥಗಳಲ್ಲಿ, ಸಾಮಾನ್ಯವಾಗಿ ಸಮಾಸ ಉತ್ತರ ಪದವಾಗಿ): well-made ಸುನಿರ್ಮಿತ. stoutly-made ಸ್ಥೂಲಕಾಯದ.
ಕಲ್ಪಿತ; ಇಲ್ಲಸಲ್ಲದ; ಸುಳ್ಳಂಬಳ್ಳಿನ; ತಾನೇ ಕಟ್ಟಿದ; ಸುಳ್ಳಿನ: to tell made stories about oneself ತನ್ನ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಹೇಳಿಕೊಂಡು.
Madeira
ನಾಮವಾಚಕ
ಪದಗುಚ್ಛ
Madeira cake ಮಡೀರ ಕೇಕ್; ಸ್ಪಂಜಿನಂತೆ ಮೆತುವಾದ, ಒಂದು ರೀತಿಯ ಕೇಕು, ಸಿಹಿತಿಂಡಿ.
ಅಟ್ಲಾಂಟಿಕ್ ಸಾಗರದಲ್ಲಿನ ಒಂದು ದ್ವೀಪ.
ಅಲ್ಲಿ ತಯಾರಾಗುವ ಒಂದು ಬಗೆಯ ಬಿಳಿ ವೈನು, ಮದ್ಯ.
madeleine
ನಾಮವಾಚಕ
ಒಂದು ಬಗೆಯ ಸಣ್ಣದಾದ ಸ್ಪಂಜ್ ಕೇಕು.
Mademoiselle
ನಾಮವಾಚಕ
(ಹ್ರೆಂಚ್) ಅವಿವಾಹಿತ ಸ್ತ್ರೀ; ಕನ್ಯೆ; ಕುಮಾರಿ; ಇನ್ನೂ ಮದುವೆಯಿಲ್ಲದ ಹ್ರೆಂಚ್ ಹೆಂಗಸು.
(ಹ್ರೆಂಚ್) ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಹ್ರೆಂಚ್ ಶಿಕ್ಷಕಿ, ಉಪಾಧ್ಯಾಯಿನಿ.
ಶ್ರೀಮತಿ; ಹ್ರೆಂಚ್ ಕನ್ಯೆಗೆ ಯಾ ಹೆಂಗಸಿಗೆ ಗೌರವದ ಒಕ್ಕಣೆಯಾಗಿ ಬಳಸುವ ಪದ.
madhouse
ನಾಮವಾಚಕ
(ಪ್ರಾಚೀನ ಪ್ರಯೋಗ ಯಾ ಆಡುಮಾತು) ಹುಚ್ಚಾಸ್ಪತ್ರೆ.
ಗೊಂದಲದ, ಗಲಾಟೆಯ, ರಂಪದ – ಪ್ರದೇಶ, ಜಾಗ.
madia
ನಾಮವಾಚಕ
ಮಾಡಿಯ; ಸೂರ್ಯಕಾಂತಿ ಬಳಗದ ಒಂದು ಗಿಡ.
madly
ಕ್ರಿಯಾವಿಶೇಷಣ
ಬುದ್ಧಿಕೆಟ್ಟು; ಉನ್ಮಾದದಿಂದ; ಹುಚ್ಚು ಹಿಡಿದು.
ಆವೇಶದಿಂದ; ಅತಿ ವೇಗದಿಂದ; ರಭಸದಿಂದ; ತುಂಬಾ ಜೋರಾಗಿ; ಅತಿ ರಭಸದಿಂದ; ತರಾತುರಿಯಿಂದ; ಅತಿ ಆತುರದಲ್ಲಿ: they worked madly to fix the bridge ಸೇತುವೆಯನ್ನು ಸರಿಮಾಡಲು ಅವರು ತರಾತುರಿಯಿಂದ ಕೆಲಸ ಮಾಡಿದರು.
ಅವಿವೇಕವಾಗಿ; ತಿಳಿಗೇಡಿತನದಿಂದ: they lived madly, wasting all their money ಅವರು ಹಣವೆಲ್ಲವನ್ನೂ ದುಂದು ಮಾಡುತ್ತಾ ಅವಿವೇಕದ ಜೀವನ ನಡೆಸಿದರು.