logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laciniated
ಗುಣವಾಚಕ
= laciniate.

laciniation
ನಾಮವಾಚಕ
(ಸಸ್ಯವಿಜ್ಞಾನಮತ್ತು ಪ್ರಾಣಿವಿಜ್ಞಾನ) ಕ್ರಕಚಿಕೆ; ಏಣು ಕಚ್ಚುಕಚ್ಚಾಗಿರುವಿಕೆ.

lack
ನಾಮವಾಚಕ ಪದಗುಚ್ಛ
ಕೊರತೆ; ಊನ; ಕೊರೆ; ರಾಹಿತ್ಯ; ಅಭಾವ; ನ್ಯೂನತೆ; ಇಲ್ಲದಿರುವುದು: a lack of talent ಪ್ರತಿಭೆಯ ಕೊರತೆ.
  • for lack of ಇಲ್ಲದ್ದರಿಂದ; ಅಭಾವದಿಂದ: went hungry for lack of money ಧನಾಭಾವದಿಂದ ಉಪವಾಸವಿದ್ದ.
  • no lack of (ಏನೂ) ಕೊರತೆಯಿಲ್ಲ; ಅಭಾವವಿಲ್ಲ.

  • lack
    ಸಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    ಇಲ್ಲದಿರು; ರಹಿತವಾಗಿರು; ಕಡಿಮೆ ಹೊಂದಿರು; ನ್ಯೂನವಾಗಿರು; ಸಾಲದೆ ಇರು; ಸಾಕಾದಷ್ಟನ್ನು ಹೊಂದಿರದೆ ಇರು: lacks confidence ಆತ್ಮವಿಶ್ವಾಸ ಇಲ್ಲದಾಗಿದೆ. he lacks courage ಅವನಿಗೆ ಧೈರ್ಯ ಕಡಿಮೆಯಾಗಿದೆ, ಧೈರ್ಯವಿಲ್ಲ. lack for ಇಲ್ಲದಿರು; ಇಲ್ಲವಾಗು; ರಹಿತವಾಗು; ಅಭಾವವಾಗಿರು; ಕೊರತೆಯಾಗಿರು; ಸಾಲದಿರು; ಕಡಿಮೆಯಾಗಿರು; ಇಲ್ಲದೆ ಹೋಗು: they lacked for nothing ಅವರಿಗೆ ಏನೂ ಕೊರತೆಯಾಗಿರಲಿಲ್ಲ; ಬೇಕಾದುದೆಲ್ಲವೂ ಅವರ ಬಳಿ ಇದ್ದಿತು.
  • be lacking ಅವಶ್ಯವಾದಾಗ ಇಲ್ಲದಿರು, ಒದಗದಿರು: money for the project is still lacking ಯೋಜನೆಗೆ ಬೇಕಾದ ಹಣ ಇನ್ನೂ ಒದಗಿಲ್ಲ.
  • be lacking in (something) (ಯಾವುದರದೇ) ಸಾಕಷ್ಟು ಇಲ್ಲದಿರು; ಸಾಕಾಗದಿರು: lacking in strength ಶಕ್ತಿ ಸಾಲದೆ.

  • lackadaisical
    ಗುಣವಾಚಕ
  • ಬಳಲಿದಂತೆ ನಟಿಸುವ; ದಣಿದಂತೆ ತೋರಿಸಿಕೊಳ್ಳುವ; ಬಳಲಿಕೆಯ ಸೋಗಿನ; ಆಯಾಸ ಪ್ರದರ್ಶನ ಮಾಡುವ.
  • ಉತ್ಸಾಹಶೂನ್ಯ; ನಿರುತ್ಸಾಹದ; ಉದಾಸೀನ; ಲವಲವಿಕೆ ಇಲ್ಲದ; ಯಾವುದಕ್ಕೂ ಮನಸ್ಸಿಲ್ಲದ.
  • ನೀರಸ; ಜಡ.
  • ಸೋಗಿನ; ನಟನೆಯ; ಆಡಂಬರ ಪ್ರದರ್ಶನದ; ಹಾವಭಾವ ನಟಿಸುವ.
  • ಪ್ರತಿಷ್ಠೆ ಜಂಬಗಳ; ಇಲ್ಲದ ದೊಡ್ಡತನ ಮತ್ತು ಮರ್ಯಾದೆಗಳನ್ನು ಪ್ರದರ್ಶಿಸುವ.

  • lackadaisically
    ಕ್ರಿಯಾವಿಶೇಷಣ
  • ಬಳಲಿದಂತೆ ನಟಿಸುವ.
  • ಉತ್ಸಾಹವಿಲ್ಲದೆ; ಲವಲವಿಕೆ ಇಲ್ಲದೆ.
  • ಜಡತ್ವದಿಂದ.
  • ನಟಿಸುತ್ತ; ಸೋಗಿನಿಂದ; ಆಡಂಬರ ಪ್ರದರ್ಶಿಸುತ್ತ.
  • ದೊಡ್ಡಸ್ತಿಕೆಯಿಂದ; ಪ್ರತಿಷ್ಠೆ ತೋರಿಸುತ್ತ.

  • lackadaisicalness
    ನಾಮವಾಚಕ
  • ಬಳಲಿಕೆಯ ಸೋಗು.
  • ವಿಷಣ್ಣತೆ; ಉತ್ಸಾಹ ಶೂನ್ಯತೆ; ಔದಾಸೀನ್ಯ.
  • ಜಡತ್ವ.
  • ಆಡಂಬರ ಪ್ರದರ್ಶನ; ಸೋಗು; ನಟನೆ.
  • ದೊಡ್ಡಸ್ತಿಕೆಯ ಸೋಗು, ಪ್ರದರ್ಶನ.

  • lacker
    ನಾಮವಾಚಕ
    1lacquer ಪದದ ರೂಪಾಂತರ.

    lacker
    ನಾಮವಾಚಕ
    2lacquer ಪದದ ರೂಪಾಂತರ.

    lackey
    ನಾಮವಾಚಕ
  • (ಹೀನಾರ್ಥಕ ಪ್ರಯೋಗ) ಚಮಚ; ದಾಸ; ಗುಲಾಮ; ದಾಸ್ಯದಿಂದ ವರ್ತಿಸುವ ಅಭಿಮಾನಿ, ಅನುಯಾಯಿ.
  • ಪರೋಪಜೀವಿ; ಪರಪುಟ್ಟ.
  • (ಚರಿತ್ರೆ) (ಸಾಮಾನ್ಯವಾಗಿ ಪೋಷಾಕು ತೊಟ್ಟ) ಅಡಿಯಾಳು; ಸೇವಕ; ಜವಾನ.
  • ದಾಸ; ಕಿಂಕರ; ತೈನಾತಿ; ಅತಿವಿನೀತ; ಅಡಿಯಾಳಿನಂತೆ ನಡೆಯುವವನು.


  • logo