(ಶಿಲ್ಪದ ವಿಷಯದಲ್ಲಿ) ಸಾಂಪ್ರದಾಯಿಕ; ಸಾಂಪ್ರದಾಯಿಕ ಮಾದರಿಯನ್ನನುಸರಿಸಿದ.
icono-
ಸಮಾಸ ಪೂರ್ವಪದ
ವಿಗ್ರಹದ, ವಿಗ್ರಹಕ್ಕೆ ಸಂಬಂಧಿಸಿದ, ಪ್ರತಿರೂಪದ, ಎಂಬರ್ಥಗಳಲ್ಲಿ ಬಳಸುವ ಪೂರ್ವಪ್ರತ್ಯಯ: iconography.
iconoclasm
ನಾಮವಾಚಕ
ವಿಗ್ರಹಭಂಜನೆ; ಮೂರ್ತಿಭಂಜನೆ; ವಿಗ್ರಹಗಳನ್ನು ಒಡೆದು ಹಾಕುವುದು (ರೂಪಕವಾಗಿ ಸಹ).
iconoclast
ನಾಮವಾಚಕ
ಮೂರ್ತಿಭಂಜಕ; ವಿಗ್ರಹಭಂಜಕ; ಮುಖ್ಯವಾಗಿ ಪೌರಸ್ತ್ಯ ಚರ್ಚುಗಳಲ್ಲಿ ಮೂರ್ತಿಪೂಜೆಗೆ ವಿರೋಧವಾಗಿ ಕ್ರಿಸ್ತಶಕ 8-9ನೆಯ ಶತಮಾನಗಳಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿದವನು ಯಾ $16-17$ನೆ ಶತಮಾನದ ಪ್ಯೂರಿಟನ್.
ಶ್ರದ್ಧಾಭಂಜಕ; ಪ್ರಿಯವೆಂದೆಣಿಸಿದ ನಂಬಿಕೆ, ಭಾವನೆಗಳನ್ನು ಖಂಡಿಸುವವನು.
iconoclastic
ಗುಣವಾಚಕ
ವಿಗ್ರಹ ಭಂಜಕ; ವಿಗ್ರಹಗಳನ್ನು ಒಡೆದು ಹಾಕಬೇಕೆನ್ನುವ.
ಶ್ರದ್ಧಾಭಂಜಕ; ಪ್ರಿಯವೆಂದೆಣಿಸಿದ ಭಾವನೆಗಳನ್ನು ಖಂಡಿಸುವ.
iconographer
ನಾಮವಾಚಕ
ಪ್ರತಿಮಾ ಶಿಲ್ಪಿ; ಮೂರ್ತಿಶಿಲ್ಪಕಾರ.
ಮೂರ್ತಿ ಚಿತ್ರಕಾರ.
iconographical
ಗುಣವಾಚಕ
ಮೂರ್ತಿ ಶಿಲ್ಪದ ಯಾ ಅದಕ್ಕೆ ಸಂಬಂಧಿಸಿದ.
ಚಿತ್ರೀಯ; ಒಂದು ವಿಷಯವನ್ನು ಚಿತ್ರ, ರೇಖನಗಳಿಂದ ನಿರೂಪಿಸುವ ಯಾ ವರ್ಣಿಸುವ.
ಸಚಿತ್ರ; ಚಿತ್ರಪ್ರಧಾನವಾದ.
ಮೂರ್ತಿ ಶಿಲ್ಪಿಯ; ಪ್ರತಿಮಾ ವಿವರಣೆಗಳನ್ನುಳ್ಳ; ಚಿತ್ರ, ಶಿಲ್ಪ ಮೊದಲಾದವನ್ನು ವಿವರಿಸುವ.
iconography
ನಾಮವಾಚಕ
ಪ್ರತಿಮಾಶಿಲ್ಪ; ಮೂರ್ತಿಶಿಲ್ಪ; ಮೂರ್ತಿಚಿತ್ರಣ; ಯಾವುದೇ ವಿಷಯವನ್ನು ಚಿತ್ರದ ಯಾ ಪ್ರತಿಮೆಯ ಮೂಲಕ ನಿರೂಪಿಸುವುದು.
ಸಚಿತ್ರಪುಸ್ತಕ; ಚಿತ್ರಗಳೇ ಪ್ರಧಾನವಾಗಿರುವ ಪುಸ್ತಕ.
ಪ್ರತಿಮಾಶಾಸ್ತ್ರ; ಚಿತ್ರ, ಶಿಲ್ಪ, ಮೊದಲಾದವುಗಳನ್ನು ವಿವರಿಸುವ ಗ್ರಂಥ.
ಪ್ರತಿಮಾಧ್ಯಯನ; ಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಕುರಿತ ಚಿತ್ರ ಯಾ ಶಿಲ್ಪಗಳ ಅಧ್ಯಯನ.