ಕಳ್ಳಿಯ; ಪಾಪಾಸುಕಳ್ಳಿಯ ಯಾ ಕ್ಯಾಕ್ಟಯೇಸಿ ಕುಲಕ್ಕೆ ಸೇರಿದ.
cactal
ಗುಣವಾಚಕ
ಕಳ್ಳಿಯ; ಕಳ್ಳಿಗಳಿಗೆ ಸಂಬಂಧಿಸಿದ.
cactoid
ಗುಣವಾಚಕ
ಕಳ್ಳಿಯಾಕಾರದ; (ರಚನೆಯಲ್ಲಿ ಯಾ ಆಕಾರದಲ್ಲಿ) ಕಳ್ಳಿಯನ್ನು ಹೋಲುವ.
cactus
ನಾಮವಾಚಕ
ಕಳ್ಳಿ; ಪಾಪಾಸುಕಳ್ಳಿ; ಮೊಂಡುಗಳ್ಳಿ; ಕ್ಯಾಕ್ಟ ವಂಶದ, ದಪ್ಪವೂ ಮಾಂಸಲವೂ ಆದ ಕಾಂಡವುಳ್ಳ, ಸಾಮಾನ್ಯವಾಗಿ ಮುಳ್ಳುಗಳಿರುವ, ಆದರೆ ಎಲೆಗಳಿಲ್ಲದ ಮತ್ತು ಉಜ್ಜ್ವಲ ವರ್ಣದ ಹೂಗಳನ್ನು ಬಿಡುವ, ಹಲವು ವಿಧದ ಗಿಡಗಳು.
cactus dahlia
ನಾಮವಾಚಕ
ಕಳ್ಳಿಡೇಲಿಯ; ಕಳ್ಳಿಡೇರೆ ಹೂ; ಹೂವಿನ ಹೊರ ದಳವಲಯ ಹಿಂದಕ್ಕೆ ಸುತ್ತಿದಂತಿರುವ, ಕಳ್ಳಿಹೂವನ್ನು ಹೋಲುವ ಡೇರೆಹೂ.