logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orange-stick
ನಾಮವಾಚಕ
(ಉಗುರುಗಳನ್ನು ಶುಚಿಮಾಡಲು ಬಳಸುವ, ಚೂಪಾದ, ಸಾಮಾನ್ಯವಾಗಿ) ಕಿತ್ತಳೆ (ಗಿಡದ) ಕಡ್ಡಿ.

orange-wood
ನಾಮವಾಚಕ
ಕಿತ್ತಳೆ ಮರ; ಕಿತ್ತಳೆ ಹಣ್ಣಿನ ಮರ, ದಾರು.

orangeade
ನಾಮವಾಚಕ
ಕಿತ್ತಳೆ (ರಸ ಮೊದಲಾದವನ್ನು ಬೆರೆಸಿ ಮಾಡಿದ) ಪಾನೀಯ; ನಾರಂಗೀಯ (ಪಾನೀಯ).

Orangeism
ನಾಮವಾಚಕ
ಆರೆಂಜ್‍ ಸಿದ್ಧಾಂತ; ಐರ್ಲೆಂಡಿನಲ್ಲಿ ಪ್ರಾಟೆಸ್ಟೆಂಟ್‍ ಮತವನ್ನು ಬೆಂಬಲಿಸಲು 1795ರಲ್ಲಿ ಸ್ಥಾಪಿಸಿದ ಆರೆಂಜ್‍ ಸಂಘದ ತತ್ತ್ವಗಳು.

Orangeman
ನಾಮವಾಚಕ
ಐರ್ಲೆಂಡ್‍ನಲ್ಲಿ ಪ್ರಾಟೆಸ್ಟಂಟ್‍ ಪ್ರಾಬಲ್ಯ ಸ್ಥಾಪಿಸಲು ಏರ್ಪಟ್ಟ (1795) ಆರೆಂಜ್‍ ಸಂಘದವನು.

orangery
ನಾಮವಾಚಕ
ಕಿತ್ತಳೆಯ ತೋಟ, ತೋಪು.

orate
ಅಕರ್ಮಕ ಕ್ರಿಯಾಪದ
(ಹಾಸ್ಯ ಪ್ರಯೋಗ ಯಾ ಹೀನಾರ್ಥಕ ಪ್ರಯೋಗ) ಭಾಷಣ ಬಿಗಿ; ಮಹಾವಾಗ್ಮಿಯಂತೆ ಮಾತನಾಡು; ಮುಖ್ಯವಾಗಿ ಅಟಾಟೋಪದಿಂದ ಯಾ ಸುದೀರ್ಘವಾಗಿ ಭಾಷಣ ಬಿಗಿ ಯಾ ಮಾತನಾಡು.

oration
ನಾಮವಾಚಕ
  • (ಮುಖ್ಯವಾಗಿ ಒಂದು ಸಮಾರಂಭದಲ್ಲಿ ಮಾಡುವ ವಿಧ್ಯುಕ್ತ ಸ್ವರೂಪದ) ಭಾಷಣ; ಉಪನ್ಯಾಸ; ಪ್ರವಚನ.
  • (ವ್ಯಾಕರಣ)
    1. ಭಾಷಣ; ಭಾಷಣದ ರೀತಿ: direct oration ಪ್ರತ್ಯಕ್ಷ ಕಥನ; ಭಾಷಣದ (ನಡೆದಂತೆಯೇ, ಪದಗಳ ಬದಲಾವಣೆಯಿಲ್ಲದೆ ಮಾಡಿದ) ವರದಿ. indirect oration ಪರೋಕ್ಷ ಕಥನ; (ನಡೆದ ಭಾಷಣವನ್ನು ವರದಿಗಾರನು ತನ್ನ ಮಾತುಗಳನ್ನಾಗಿ ಮಾಡಿಕೊಂಡು ವರದಿ ಮಾಡಿದ) ಭಾಷಣದ ಪರೋಕ್ಷ ವರದಿ.
    2. ಭಾಷೆ; ಮಾತು.

  • orator
    ನಾಮವಾಚಕ
  • (ಸಾರ್ವಜನಿಕ) ಭಾಷಣಕಾರ.
  • ವಾಗ್ಮಿ; ವಾಕ್ಪಟು; ವಾಕ್ಚತುರ.
  • (ಅಮೆರಿಕನ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ನ್ಯಾಯಾಲಯದಲ್ಲಿ ಫಿರ್ಯಾದಿ, ದೂರು ಕೊಡುವವನು.
  • ಸಾರ್ವಜನಿಕ ಭಾಷಣಕಾರ; ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳ ಪರವಾಗಿ ವಿಶೇಷ ಸಮಾರಂಭಗಳಲ್ಲಿ ಭಾಷಣ ಮಾಡುವ ಅಧಿಕಾರಿ.

  • oratorial
    ಗುಣವಾಚಕ
    ಆರಟೋರಿಯೋದ; ನಾಟಕ ಮಿಶ್ರಿತ ಗೀತರೂಪಕದ.


    logo