(ವ್ಯಕ್ತಿಯ ಬಳಕೆಗಾಗಿ ವಸ್ತುವನ್ನೋ ಅದರ ಸಮಾನ ಬೆಲೆಯನ್ನೋ ಹಿಂದಿರುಗಿಸುವ ಷರತ್ತಿನ ಮೇಲೆ) ಕಡ ಕೊಡು; ಎರವಲು ಕೊಡು.
(ಹಣವನ್ನು) ಬಡ್ಡಿಗಾಗಿ – ಕಡ ಕೊಡು, ಸಾಲ ಕೊಡು.
(ತಾತ್ಕಾಲಿಕವಾಗಿ ಯಾವುದೇ ವಸ್ತುವನ್ನು) ನೀಡು; ಕೊಡು; ಒದಗಿಸು: lend assistance ಸಹಾಯನೀಡು. lends a certain charm ಮೋಹಕತೆಯನ್ನು ಕೊಡುತ್ತದೆ.
(ಪದಾರ್ಥ ಮೊದಲಾದವನ್ನು) ಎರವಲಾಗಿ, ಬಾಡಿಗೆಗಾಗಿ – ಕೊಡು.
(ಯಾವುದೋ ಒಂದು ನೀತಿಗೆ ಯಾ ಉದ್ದೇಶಕ್ಕೆ) ಹೊಂದಿಕೊ; ಅನುಕೂಲಿಸು; ಒದಗು; ಒದಗಿ ಬರು; ಸಹಾಯಕವಾಗು; ನೆರವಾಗು; ಎಡೆಗೊಡು; ಅವಕಾಶನೀಡು: the word lends itself to misinterpretation ಆ ಪದ ಅಪವ್ಯಾಖ್ಯಾನಕ್ಕೆ ಅವಕಾಶ ನೀಡುತ್ತದೆ. ಎಡೆಗೊಡುತ್ತದೆ.
Lend-Lease
ನಾಮವಾಚಕ
(ಚರಿತ್ರೆ) ಲೆಂಡ್ಲೀಸ್ (ಪದ್ಧತಿ); ಲೇಣೆದೇಣೆ; ಕೊಡುಕೊಳ್ಳುವಿಕೆ; (ಬ್ರಿಟಿಷ್ ಸ್ವಾಮ್ಯದಲ್ಲಿನ ಸೈನ್ಯ ನೆಲೆಗಳ ಬಳಕೆಗೆ ಪ್ರತಿಯಾಗಿ ಅಮೆರಿಕ ಸಂಸ್ಥಾನಗಳು ಸಾಲವಾಗಿ ಕೊಡುತ್ತಿದ್ದ ಯುದ್ಧೋಪಕರಣಗಳು ಮೊದಲಾದವುಗಳಿಗೆ ಸಂಬಂಧಿಸಿದಂತೆ) 1941ರಲ್ಲಿ ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವೆ ನಿಯೋಜಿಸಿಕೊಳ್ಳಲಾಗಿದ್ದ ಒಪ್ಪಂದದ ವ್ಯವಸ್ಥೆ.
lendable
ಗುಣವಾಚಕ
ಕಡ, ಸಾಲ, ಎರವಲು ಕೊಡಬಹುದಾದ ಯಾ ಕೊಡಲರ್ಹವಾದ.
lender
ನಾಮವಾಚಕ
ಸಾಲದಾತ; ಸಾಲದಾಯಿ; ಸಾಲಗಾರ; ಸಾಲಿಗ; ಸಾಲ, ಎರವಲು – ಕೊಡುವವನು.
lending
ನಾಮವಾಚಕ
ಸಾಲ(ದಾನ); ಸಾಲ ಕೊಡುವಿಕೆ; ಎರವಲು ಕೊಡುವುದು.
lending library
ನಾಮವಾಚಕ
ಎರವಲು ಗ್ರಂಥಾಲಯ; ಪುಸ್ತಕಗಳನ್ನು ಬಾಡಿಗೆಗಾಗಿ ಕೊಡುವ ಪುಸ್ತಕ ಭಂಡಾರ.
length
ನಾಮವಾಚಕ
ಪದಗುಚ್ಛ
ನುಡಿಗಟ್ಟು
ಉದ್ದ; ನೀಳ; ನಿಡಿದು; ನೀಳು; ಲಂಬ; ಲಾಂಬಿ; ದೀರ್ಘತೆ.
ಹೊತ್ತು; ಅವಧಿ; ವೇಳೆ; ಕಾಲಾವಧಿ; ಕಾಲದ ವ್ಯಾಪ್ತಿ: the length of a speech ಭಾಷಣಕ್ಕೆ ಹಿಡಿಯುವ ಹೊತ್ತು. a stay of some length ಕೊಂಚ ಕಾಲಾವಧಿಯ ಮೊಕ್ಕಾಮು.
ಹರವು; ವಸ್ತು ಚಾಚುವಷ್ಟು, ವ್ಯಾಪಿಸುವಷ್ಟು – ದೂರ: at arm’s length ಕೈಯಳವು; ತೋಳು ಚಾಚುವಷ್ಟು ದೂರ. ships a cable’s length apart ಪರಸ್ಪರ ಒಂದು ಕೇಬಲಿನಷ್ಟು ದೂರವಿರುವ ಹಡಗುಗಳು.
ಒಂದುದ್ದ; ಕುದುರೆ, ದೋಣಿ, ಮೊದಲಾದವುಗಳ ಪಂದ್ಯದಲ್ಲಿ ಅವು ಎಷ್ಟು ಮುಂದಿವೆಯೆಂಬುದನ್ನು ಹೇಳುವಾಗ ಒಂದು ಕುದುರೆ, ದೋಣಿ, ಮೊದಲಾದವುಗಳ ಉದ್ದದಷ್ಟು.
ದೀರ್ಘ – ವ್ಯಾಪ್ತಿ, ವಿಸ್ತಾರ; ದೊಡ್ಡದಾದ ಹರವು; ನೀಳ: a length of hair ನೀಳಗೂದಲು.
ಅಷ್ಟು ದೂರ; ಅಷ್ಟು ಮಟ್ಟು; ಸಮರ್ಥವಾಗಿ ಮಾಡುವುದರಲ್ಲಿಯ ಯಾ ಸಾಧಿಸುವುದರಲ್ಲಿಯ ಮಟ್ಟ, ಪ್ರಮಾಣ: went to great lengths ಬಹುದೂರ ಯಾ ಬಹಳವಾಗಿ ಪ್ರಯತ್ನಿಸಿದ. prepared to go to any length ಯಾವ ಮಟ್ಟಕ್ಕೆ ಬೇಕಾದರೂ, ಎಷ್ಟು ದೂರ ಬೇಕಾದರೂ ಹೋಗಲು ಸಿದ್ಧವಾದ.
(ಛಂದಸ್ಸು) ಮಾತ್ರೆ; ಒಂದು ಸ್ವರದ ಯಾ ಉಚ್ಚಾರಣಾಂಶದ ಪ್ರಮಾಣ.
(ಕ್ರಿಕೆಟ್)
ಅಂತರ; ದೂರ; ವಿಕೆಟ್ಟಿಗೂ ಅದರ ಮುಂದೆ ಚೆಂಡು ಪುಟ ಏಳುವ ಸ್ಥಳಕ್ಕೂ ನಡುವಣ ದೂರ: bowler keeps a good length ಬೋಲರ್ ಚೆಂಡನ್ನು ವಿಕೆಟ್ಟಿನಿಂದ ಸರಿಯಾದ ದೂರದಲ್ಲಿ ಪುಟ ಏಳಿಸುತ್ತಿದ್ದಾನೆ.
(ಚೆಂಡು ಪುಟಿಸುವ) ಸರಿಯಾದ – ದೂರ, ಅಂತರ.
(ಬಟ್ಟೆಯ) ಒಂದು ನಿಗದಿಯಾದ ಉದ್ದ.
(ಧರಿಸಿದಾಗಿನ) ಉಡುಪಿನ ಉದ್ದ.
(ದೇಹದ ಪೂರ್ತಿಯಾದ) ಉದ್ದ(ದ ಪ್ರಮಾಣ).
lengthen
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಉದ್ದವಾಗು; ಲಂಬಿಸು; ಉದ್ದ – ಹೆಚ್ಚಾಗು, ಬೆಳೆ.
ಲಂಬಿಸು; ಉದ್ದಮಾಡು; ಉದ್ದವಾಗಿಸು; ಉದ್ದ – ಬೆಳೆಸು, ಹೆಚ್ಚಿಸು.
(ಛಂದಸ್ಸು) (ಸ್ವರವನ್ನು, ಮಾತ್ರೆಯನ್ನು) ಲಂಬಿಸು.
lengthener
ನಾಮವಾಚಕ
ಲಂಬಕ; ವಿಸ್ತಾರಕ; ಲಂಬಿಸುವವ; ಉದ್ದವಾಗಿಸುವವ.
lengthily
ಕ್ರಿಯಾವಿಶೇಷಣ
(ಭಾಷಣ, ಲೇಖನ, ಶೈಲಿ, ಭಾಷಣಕಾರ, ಮೊದಲಾದವರ ವಿಷಯದಲ್ಲಿ)
ವಿಪರೀತ ಲಂಬಿಸಿ; ಬಹಳ ಉದ್ದವಾಗಿ; ಅತಿ ದೀರ್ಘವಾಗಿ, ವಿಸ್ತಾರವಾಗಿ, ವಿವರವಾಗಿ.