ಒರಟಾದ, ನಯವಿಲ್ಲದ, ಅಸಭ್ಯ, ಅಶಿಷ್ಟ, ಅಯೋಗ್ಯ, ಅನುಚಿತ – ನಡವಳಿಕೆ, ಮಾತು: a tale full of indelicacies ಅಸಭ್ಯ ಮಾತು ತುಂಬಿದ ಕಥೆ.
indelicate
ಗುಣವಾಚಕ
ಒರಟಾದ; ನಯವಿಲ್ಲದ; ಅಸಂಸ್ಕೃತ.
ಅಸಭ್ಯ; ಅಶಿಷ್ಟ; ಅಯೋಗ್ಯ; ಮರ್ಯಾದೆಯಿಲ್ಲದ: an indelicate anecdote ಮರ್ಯಾದಾಹೀನ ಕಥೆ.
ಅನುಚಿತ; ಅಯುಕ್ತ; ಔಚಿತ್ಯವರಿಯದ; ಸಮಯ ಸಂದರ್ಭದ ಪರಿಜ್ಞಾನವಿಲ್ಲದ: an indelicate allusion to her poverty ಅವಳ ಬಡತನವನ್ನು ಕುರಿತ ಅನುಚಿತ ಪ್ರಸ್ತಾಪ.
indelicately
ಕ್ರಿಯಾವಿಶೇಷಣ
ಒರಟುತನದಿಂದ.
ಅಸಭ್ಯವಾಗಿ; ಮರ್ಯಾದೆಯಿಲ್ಲದೆ.
ಅನುಚಿತವಾಗಿ; ಔಚಿತ್ಯವರಿಯದೆ.
indemnification
ನಾಮವಾಚಕ
ಪರಿಹಾರಕಾರ್ಯ; ನಷ್ಟ ತುಂಬಿಸುವಿಕೆ; indemnification of the countries that had suffered the worst damage ಅತ್ಯಂತ ನಷ್ಟಕ್ಕೊಳಗಾಗಿದ್ದ ದೇಶಗಳ ನಷ್ಟ ತುಂಬಿಸುವಿಕೆ. did not lose hope of indemnification ಪರಿಹಾರದ ಆಸೆಯನ್ನು ಬಿಡಲಿಲ್ಲ.
(ಒಬ್ಬನನ್ನು ನಷ್ಟ ಯಾ ಹಾನಿಯಿಂದ) ಕಾಪಾಡು; ರಕ್ಷಣೆಕೊಡು; ಭದ್ರಪಡಿಸು.
(ಒಬ್ಬನನ್ನು) ನಿರ್ಬಾಧಿತಗೊಳಿಸು; ರಕ್ಷಿಸು; ಕಾಪಾಡು; ಕಾನೂನಿನ ಹೊಣೆಗೆ ಸಿಕ್ಕದಂತೆ ಉಳಿಸು.
(ಒಬ್ಬನಿಗೆ ಉಂಟಾಗಿರುವ ನಷ್ಟ, ಖರ್ಚುವೆಚ್ಚಗಳಿಗೆ ಪ್ರತಿಯಾಗಿ) ಪರಿಹಾರಕೊಡು; ನಷ್ಟ ತುಂಬಿಕೊಡು.
indemnity
ನಾಮವಾಚಕ
(ಕೆಡುಕು ಯಾ ನಷ್ಟ ಆಗದಂತೆ) ರಕ್ಷಣೆ (ಕೊಡುವುದು); ಸುಭದ್ರತೆ; ಭದ್ರಪಡಿಸುವುದು.
(ನ್ಯಾಯಶಾಸ್ತ್ರ) ವಿನಾಯಿತಿ; ತೆರಬೇಕಾದ ದಂಡ ಮೊದಲಾದವುಗಳಿಂದ ನ್ಯಾಯಬದ್ಧವಾದ ವಿನಾಯಿತಿ.
ನಷ್ಟ ಪರಿಹಾರ; ನಷ್ಟಭರ್ತಿ; ಪಟ್ಟ ನಷ್ಟಕ್ಕೆ ಪ್ರತಿಯಾದ ಪರಿಹಾರ.
ಪರಿಹಾರಧನ; ನಷ್ಟ ಪರಿಹಾರದ ಮೊಬಲಗು; ಪಟ್ಟ ನಷ್ಟಕ್ಕೆ ಪ್ರತಿಯಾಗಿ ಕೊಟ್ಟ ಪರಿಹಾರದ ಹಣ; ಮುಖ್ಯವಾಗಿ ಯುದ್ಧದಲ್ಲಿ ಗೆದ್ದವನು ಸೋತವನೊಡನೆ ರಾಜಿ ಮಾಡಿಕೊಳ್ಳಲು ನಷ್ಟ ಪರಿಹಾರವಾಗಿ ಒತ್ತಾಯದಿಂದ ಪಡೆಯುವ ಹಣ.
(ಯಾವುದೋ ಒಂದು ವಸ್ತುವಿನಲ್ಲಿ, ವಸ್ತುವಿನ ಮೇಲೆ) ಹಲ್ಲು ಮಾಡು; ಹಲ್ಲಿನಂಥ ಕಚ್ಚುಗಳನ್ನು ಮಾಡು; ಮೊನೆಯಾಕಾರದ ಗುರುತುಮಾಡು: an indented stick ಹಲ್ಲುಕೋಲು; ಕ್ಷತದಂಡ; ಕಚ್ಚು ಮಾಡಿದ ಕೋಲು.
(ಕರಾವಳಿ ಮೊದಲಾದವುಗಳಲ್ಲಿ) ಕೋಚುಕೊರೆ; ಉದ್ದನೆಯ ಕೋಚುಗಳನ್ನುಂಟುಮಾಡು; ಒಳಚಾಚುಗಳನ್ನು ಕೊರೆ: the coastline is indented by the sea into small bays ಸಮುದ್ರವು ಕರಾವಳಿ ಅಂಚನ್ನು ಕೋಚುಕೋಚಾಗಿ ಕೊರೆದು ಸಣ್ಣ ಕೊಲ್ಲಿಗಳನ್ನು ಮಾಡಿದೆ.
ಕೋಚಾಗಿ – ಹರಿ, ಕತ್ತರಿಸು, ವಿಭಾಗಿಸು; ದುಪ್ರತಿಯಾಗಿ ತಯಾರಿಸಿದ ದಸ್ತೈವಜನ್ನು ಅಂಚುಗಳು ಕೋಚುಕೋಚಾಗಿರುವಂತೆ (ಕೂಡಿಸಿದಾಗ ಎರಡು ಭಾಗಗಳ ಅಂಚುಗಳು ಒಂದಕ್ಕೊಂದು ಹೊಂದಿಕೊಂಡು, ಒಂದೇ ದಸ್ತಾವೇಜಿನ ಭಾಗಗಳೆಂದು ತೋರಿಸಲು ಸಾಧ್ಯವಾಗುವಂತೆ) ಕತ್ತರಿಸು, ವಿಭಾಗಿಸು.
(ದಸ್ತೈವಜನ್ನು) ಕರಾರುವಾಕ್ಕಾದ ದುಯ್ಯಂಪ್ರತಿ ಯಾ ದುಪ್ರತಿ ಮಾಡು.
(ಮುದ್ರಣ ಮೊದಲಾದವುಗಳಲ್ಲಿ) ಒಳತಳ್ಳು; ಒಳಸರಿಸು; ಬೇರೆ ಪ್ಯಾರಾವನ್ನು ಪ್ರಾರಂಭಿಸುವಾಗ ಮೊದಲ ಪಂಕ್ತಿಯನ್ನು ಮುದ್ರಣದ ಇತರ ಸಾಲುಗಳ ನೇರದಿಂದ ಸ್ವಲ್ಪ ಒಳಕ್ಕೆ ತಳ್ಳು.
(ಬ್ರಿಟಿಷ್ ಪ್ರಯೋಗ) ಕೋರಿಕೆ ಕಳುಹಿಸು; (ಸಾಮಾನ್ಯವಾಗಿ ದುಪ್ರತಿ ಬರಹದಲ್ಲಿ) ಯಾವುದಾದರೂ ಪದಾರ್ಥಕ್ಕಾಗಿ ವ್ಯಕ್ತಿಯನ್ನು ಕೋರು, ಕೇಳು.
indent
ನಾಮವಾಚಕ
ಕಚ್ಚು ಕಚ್ಚಾಗಿರುವುದು; ಕಚ್ಚು ಕಚ್ಚು – ಮಾಡಿರುವುದು, ಮಾಡುವುದು.
(ಬ್ರಿಟಿಷ್ ಪ್ರಯೋಗ) ಸಾಮಾನು ಸರಂಜಾಮುಗಳಿಗಾಗಿ ಸಲ್ಲಿಸಿದ ಅಧಿಕೃತ ಕೋರಿಕೆ ಪತ್ರ.
(ಬ್ರಿಟಿಷ್ ಪ್ರಯೋಗ) (ಸರಕಿಗಾಗಿ, ಮುಖ್ಯವಾಗಿ ಹೊರಗಿನಿಂದ ಬಂದ) ಕೋರಿಕೆ (ಪತ್ರ).
indent
ಸಕರ್ಮಕ ಕ್ರಿಯಾಪದ
ಒಳಕ್ಕೆ – ತಗ್ಗಿಸು, ನೆಗ್ಗಿಸು; ಒತ್ತಿ ಗುರುತು ಬೀಳುವಂತೆ ಮಾಡು: the spectacles indented the sides of the nose ಕನ್ನಡಕ ಮೂಗಿನ ಎರಡು ಕಡೆಯಲ್ಲೂ ಒತ್ತಿ ಗುರುತು ಬೀಳಿಸಿತು.
(ಗುರುತು ಮೊದಲಾದವನ್ನು) ಒತ್ತು; ಛಾಪಿಸು; ಮುದ್ರಿಸು: indent a pattern on metal ಲೋಹದ ಮೇಲೆ ಚಿತ್ರ ಒತ್ತು, ಛಾಪಿಸು.