logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orange
ನಾಮವಾಚಕ ಪದಗುಚ್ಛ
  • ಕಿತ್ತಳೆ; ನಾರಂಗಿ; ಕಿತ್ತಳೆಯ ಗಿಡ ಯಾ ಹಣ್ಣು.
  • ಕಿತ್ತಳೆ ಬಣ್ಣ.

  • orange
    ಗುಣವಾಚಕ
    ಕಿತ್ತಳೆ ಬಣ್ಣದ; ಕೇಸರಿ ಬಣ್ಣದ.

    Orange
    ಗುಣವಾಚಕ
    (ಐರ್ಲೆಂಡಿನ) ಆರೆಂಜ್‍ಸಂಘದವರ, ಅವರಿಗೆ ಸಂಬಂಧಿಸಿದ ಯಾ ಅವರ ಚಟುವಟಿಕೆಗಳ.

    orange blossom
    ನಾಮವಾಚಕ
    ಕಿತ್ತಳೆ ಹೂವುಗಳು (ಮದುವಣಗಿತ್ತಿಯು ಧರಿಸಿಕೊಳ್ಳುವ ವಾಡಿಕೆ).

    orange colour
    ನಾಮವಾಚಕ
    ಕಿತ್ತಳೆ ಬಣ್ಣ; ಕೇಸರಿ ಬಣ್ಣ.

    orange flower water
    ನಾಮವಾಚಕ
    ನಿರಲಿ (neroli) ಸುಗಂಧ ತೈಲವನ್ನು ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣ.

    orange peel
    ನಾಮವಾಚಕ
  • ಕಿತ್ತಳೆ(ಹಣ್ಣಿನ) ಸಿಪ್ಪೆ.
  • (ಕಿತ್ತಳೆ ಸಿಪ್ಪೆಯನ್ನು ಹೋಲುವ) ತರಕಲು ಮೇಲ್ಮೈ.

  • orange pekoe
    ನಾಮವಾಚಕ
    ತುಂಬ ಸಣ್ಣಸಣ್ಣ ಟೀ ಎಲೆಗಳಿಂದ ತಯಾರಿಸಿದ ಚಹಾ, ಟೀ.

    orange squash
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಕಿತ್ತಳೆ ಪಾನಕ; ಕಿತ್ತಳೆಹಣ್ಣಿನ ಷರಬತ್ತು; ಕಿತ್ತಳೆ ಹಣ್ಣು ಮತ್ತು ಇತರ ವಸ್ತುಗಳನ್ನು ಹಾಕಿ ತಯಾರಿಸಿದ, ಅನೇಕವೇಳೆ ಸಾಂದ್ರರೂಪದಲ್ಲಿ ಮಾರುವ, ಪಾನಕ.

    orange-fin
    ನಾಮವಾಚಕ
    ಟ್ರಾಟ್‍ ಜಾತಿಯ ಕಡಲ ಮೀನು; ಕಿತ್ತಳೆ ಮೀನು.


    logo