logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

OR
ಸಂಕ್ಷಿಪ್ತ
  • operational research.
  • (ಅಮೆರಿಕನ್‍ ಪ್ರಯೋಗ) Oregon.
  • other ranks.

  • or
    ನಾಮವಾಚಕ
    (ವಂಶಲಾಂಛನ ವಿದ್ಯೆ) ವಂಶಲಾಂಛನದಲ್ಲಿ ಹೊಂಬಣ್ಣ ಯಾ ಹಳದಿ ಬಣ್ಣ.

    or
    ಗುಣವಾಚಕ
    (ವಂಶಲಾಂಛನ ವಿದ್ಯೆ) ಹೊಂಬಣ್ಣದ ಯಾ ಹಳದಿಯ: a crescent or ಹೊಂಬಣ್ಣದ ಬಾಲಚಂದ್ರ.

    or
    ಉಪಸರ್ಗ
    (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಮುಂಚೆ; ಮೊದಲು; ಮುನ್ನ (ಈಗ ಮುಖ್ಯವಾಗಿ ಕಾವ್ಯಪ್ರಯೋಗದಲ್ಲಿ or ever, or e’er ಎಂಬಲ್ಲಿ).

    or
    ಸಂಯೋಜಕಾವ್ಯಯ ಪದಗುಚ್ಛ
  • ಅಥವಾ; ವಾ; ಯಾ; ಇಲ್ಲ(ವೆ):
    1. ಮೊದಲನೆಯದನ್ನು ಬಿಟ್ಟು ಎಲ್ಲಾ ವಿಕಲ್ಪಗಳನ್ನು ಅಥವಾ ಕೊನೆಯದನ್ನು ಮಾತ್ರ ನಿರೂಪಿಸುವಾಗ: white, black or grey ಬಿಳಿ ಯಾ ಕರಿ ಯಾ ಬೂದು. white or black or grey ಬಿಳಿ, ಕರಿ ಯಾ ಬೂದು.
    2. (ಅನೇಕ ವೇಳೆ either ಜೊತೆಯಲ್ಲಿ) ಉಳಿದಿರುವ ಒಂದೇ ಸಾಧ್ಯತೆಯನ್ನು ಯಾ ಅವಕಾಶವನ್ನು ಸೂಚಿಸುವಾಗ: take it or leave it ತೆಗೋ ಯಾ ಬಿಡು. either come in or go out ಒಳಕ್ಕೆ ಬಾ ಇಲ್ಲವೆ ಹೊರಕ್ಕೆ ಹೋಗು.
    3. (whether ಜೊತೆ) ಪರೋಕ್ಷ ಪ್ರಶ್ನೆಯ ಅಥವಾ ಸಂಭಾವನಾವಾಚಕ ವಾಕ್ಯಖಂಡದ ಎರಡನೆಯ ಭಾಗವನ್ನು ಸೂಚಿಸುವಾಗ: ask him whether he was there or not ಅವನು ಅಲ್ಲಿದ್ದನೇ ಅಥವಾ ಇರಲಿಲ್ಲವೇ ಕೇಳು. must go whether I like or dislike it ನನಗೆ ಇಷ್ಟರವಿರಲಿ ಇಲ್ಲದಿರಲಿ ನಾನು ಹೋಗಲೇ ಬೇಕು.
    4. ಹಿಂದಿನ ಪದ ಮೊದಲಾದವುಗಳ ಸಮಾನಾರ್ಥಕ ಪದವನ್ನೋ ವಿವರಣೆಯನ್ನೋ ನೀಡುವಾಗ: suffered from vertigo or giddiness ವರ್ಟಿಗೋ ಅಥವಾ ತಲೆಸುತ್ತಿನಿಂದ ತೊಂದರೆಪಟ್ಟ.
    5. ತರುವಾಯದ ಮುಖ್ಯ ಯೋಚನೆಯೊಂದನ್ನು ತಿಳಿಸುವಾಗ: he must know or is he bluffing? ಅವನಿಗೆ ಗೊತ್ತಿರಬೇಕು–ಇಲ್ಲ ಸುಮ್ಮನೆ ಬಾಯಿಬಡಿಯುತ್ತಿದ್ದಾನೆಯೇ?
  • ಇಲ್ಲದಿದ್ದರೆ: run or you will be late ಓಡು ಇಲ್ಲದಿದ್ದರೆ ಕಾಲ ಮೀರುತ್ತದೆ.
  • (ಕಾವ್ಯಪ್ರಯೋಗ) ಎರಡರಲ್ಲಿ ಪ್ರತಿಯೊಂದೂ; ಒಂದೊಂದೂ: or in the heart or in the head ಹೃದಯದಲ್ಲಿ ಯಾ ತಲೆಯಲ್ಲಿ.

  • orach
    ನಾಮವಾಚಕ
    = orache.

    orache
    ನಾಮವಾಚಕ
    ಚಕ್ಕೋತನ, ಚಕ್ಕವತ್ತಿ, ಚಕ್ಕೋತಿ–ಸೊಪ್ಪು.

    oracle
    ನಾಮವಾಚಕ
  • ಪ್ರಶ್ನಸ್ಥಾನ; ದೇವವಾಣಿಯ ಕ್ಷೇತ್ರ; ನಿಮಿತ್ತ(ಕೇಳುವ) ಸ್ಥಾನ; ಪ್ರಾಚೀನ ಕಾಲದಲ್ಲಿ ಗ್ರೀಕರು ಮೊದಲಾದವರು ತಮ್ಮ ತಮ್ಮ ದೇವತೆಗಳನ್ನು ಸಲಹೆಗಾಗಿ ಯಾ ಭವಿಷ್ಯ ವಚನಕ್ಕಾಗಿ ಕೋರುತ್ತಿದ್ದ ಸ್ಥಳ.
  • ದೇವವಾಣಿ; ನಿಮಿತ್ತ; ಪ್ರಶ್ನೆಯೊಂದಕ್ಕೆ ದೇವವಾಣಿಯ ಕ್ಷೇತ್ರದಿಂದ ಅರ್ಚಕನ(ಳ) ಮೂಲಕ ಬಂದ (ಸಾಮಾನ್ಯವಾಗಿ ಸಂದಿಗ್ಧ ಯಾ ಅಸ್ಪಷ್ಟ) ನುಡಿ, ಉತ್ತರ.
  • ಯೆಹೂದ್ಯ ದೇವಾಲಯದ ಗರ್ಭಗುಡಿ ಯಾ ದೇವರ ಪೀಠ.
  • ದೈವೀಸ್ಫೂರ್ತಿ; ದೇವಾವೇಶ ಯಾ ದೇವವಾಣಿ.
  • ಪಾತ್ರಿ; ಪ್ರವಾದಿ; ದೇವವಾಣಿಯ ಕ್ಷೇತ್ರದಲ್ಲಿ ದೇವಾವೇಶದ ಯಾ ದೇವವಾಣಿಯ (ಮನುಷ್ಯನ ಯಾ ಇತರ ರೂಪದ) ಸಾಧನ, ಮಾಧ್ಯಮ, ವಾಹಕ.
  • ಅಮೋಘ ನಿರ್ದೇಶಕ, ಮಾರ್ಗದರ್ಶಕ; ವಿಫಲವೇ ಆಗದಂತಹ ನಿರ್ದೇಶನ ಕೊಡುವ ವ್ಯಕ್ತಿ: I am Sir Oracle ನಾನೊಬ್ಬ ಅಮೋಘ ಮಾರ್ಗದರ್ಶಕ.
  • ಭವಿಷ್ಯ; ತಪ್ಪಾಗದ ಮಾರ್ಗದರ್ಶನ ನೀಡುವ ಉಕ್ತಿ, ವಚನ, ಮೊದಲಾದವು.
  • ತುಂಬು ವಿವೇಕದ ಯಾ ಬಹಳ ಗಂಭೀರವಾದ ಯಾ ಪರಿಣಾಮಕಾರಿಯಾದ ಅಭಿಪ್ರಾಯಗಳನ್ನು ಅಧಿಕಾರವಾಣಿಯಿಂದ ತಿಳಿಸುವ ವ್ಯಕ್ತಿ.
  • (Oracle) Proprietary name ಇಂಡಿಪೆಂಡೆಂಟ್‍ ಟೆಲಿವಿಷನ್‍ ಸಂಸ್ಥೆಯ ಒದಗಿಸುವ ‘ಟೆಲಿಟೆಕ್ಸ್ಟ್‍’ (teletext) ಸೇವೆ.

  • oracular
    ಗುಣವಾಚಕ
  • ದೇವವಾಣಿಯ ಯಾ ಅದಕ್ಕೆ ಸಂಬಂಧಿಸಿದ.
  • ಸಂದಿಗ್ಧವಾದ; ನಿಗೂಢವಾದ; ಅಸ್ಪಷ್ಟವಾದ; ದ್ವಂದ್ವಾರ್ಥದ.
  • ಭವಿಷ್ಯವಾಚಿ.

  • oracularity
    ನಾಮವಾಚಕ
  • ದೇವವಾಣಿಯಂತಿರುವಿಕೆ.
  • ಸಂದಿಗ್ಧತೆ; ದ್ವಂದ್ವಾರ್ಥಕತೆ; ಅಸ್ಪಷ್ಟತೆ; ನಿಗೂಢತೆ.
  • ಭವಿಷ್ಯವಾಚಿಯಾಗಿರುವಿಕೆ.


  • logo