ಆರಾಮದ ಉಡುಪು; ಬಿಡುವಿನುಡುಪು; ವಿರಾಮದುಡುಪು; ಅನೌಪಚಾರಿಕ ಉಡುಪು, ಮುಖ್ಯವಾಗಿ ಓಟದ ಪಥದ ಸೂಟುಗಳು ಯಾ ಇತರ ಕ್ರೀಡಾ ಉಡುಪು.
leitmotif
ನಾಮವಾಚಕ
(ಸಂಗೀತ) ಪ್ರಧಾನ ಸ್ವರಪುಂಜ; ಆವರ್ತಕ ಸ್ವರಗುಚ್ಛ; ಗೀತ ನಾಟಕಗಳಲ್ಲಿ ಯಾವುದಾದರೂ ನಿರ್ದಿಷ್ಟ ಪಾತ್ರದ, ಪರಿಸ್ಥಿತಿಯ ಯಾ ಭಾವದ ಜೊತೆಗೆ ಸಂಬಂಧಪಡೆದ, ಅವು ಬರುವಾಗಲೆಲ್ಲ ಶ್ರುತವಾಗುವ ಸ್ವರಪುಂಜ.
ಮುಖ್ಯ ವಿಷಯ; ಪ್ರಧಾನೋದ್ದೇಶ; ಆವರ್ತಕ ವಿಷಯ; ಕೃತಿಯ, ಗ್ರಂಥದ ಉದ್ದಕ್ಕೂ ಪದೇಪದೇ ಆವರ್ತವಾಗುವ ವಿಷಯ, ಸಂಗತಿ, ಪದ, ಪದಗುಚ್ಛ, ಭಾವ ಯಾ ಭಾವನೆ: faith in art has been the leitmotif of his autobiography ಕಲೆಯಲ್ಲಿಯ ನಂಬಿಕೆಯೇ ಅವನ ಆತ್ಮಚರಿತ್ರೆಯ ಪ್ರಧಾನ ವಿಷಯವಾಗಿದೆ.
leitmotiv
ನಾಮವಾಚಕ
= leitmotif.
lek
ನಾಮವಾಚಕ
ಲೆಕ್; ಆಲ್ಬೇನಿಯಾದ ಹಣದ ಮುಖ್ಯ ಘಟಕ, ಮಾನ.
lek
ನಾಮವಾಚಕ
ಲೆಕ್; ಕೂಡಲು; ಸಂಗಮಸ್ಥಾನ; ಕೂಟಸ್ಥಳ; ಕೂಟದ ಕಾಲದಲ್ಲಿ ಗಂಡುಹಕ್ಕಿಗಳ ಪ್ರದರ್ಶನ ಮತ್ತು ಹೆಣ್ಣುಹಕ್ಕಿಗಳೊಡನೆ ಸಂಭೋಗಕ್ಕಾಗಿ ಕೆಲವು ಬಗೆಯ ಹಕ್ಕಿ ಗುಂಪುಗಳು ಬಳಸುವ ಪ್ರದೇಶ.
LEM
ಸಂಕ್ಷಿಪ್ತ
lunar excursion module.
leman
ನಾಮವಾಚಕ
(ಪ್ರಾಚೀನ ಪ್ರಯೋಗ)
ನಲ್ಲ ಯಾ ನಲ್ಲೆ; ಪ್ರಿಯತಮ ಯಾ ಪ್ರಿಯತಮೆ.
ಮಿಂಡ; ವಿಟ; ಜಾರ; ಇಟ್ಟುಕೊಂಡವನು.
ರಖಾವು; ಉಪಪತ್ನಿ; ಜಾರೆ; ಇಟ್ಟುಕೊಂಡವಳು.
leman sole
ನಾಮವಾಚಕ
= 2lemon.
lemma
ನಾಮವಾಚಕ
ಪೂರ್ವಪಕ್ಷ; ಅವಲಂಬಪ್ರತಿಜ್ಞೆ; (ವಾದದಲ್ಲಿ, ಪ್ರತಿಪಾದನೆಯಲ್ಲಿ, ಬಳಸುವ) ಸ್ವೀಕೃತ ಯಾ ಸಿದ್ಧಾಂತದ ಪ್ರತಿಜ್ಞೆ.
ಶೀರ್ಷಿಕೆ; ವಿಷಯ ನಿರ್ದೇಶ; ವಿಷಯ ಸೂಚನೆ (ವಾಕ್ಯ); ಸಾಹಿತ್ಯ ಪ್ರಬಂಧದ, ನಿಘಂಟು ಪ್ರಕರಣದ, ಯಾ ಟಿಪ್ಪಣಿ, ಮೊದಲಾದವುಗಳ ಮೊದಲಿನಲ್ಲಿ ವಿಷಯ ಸೂಚಿಕೆಯಾಗಿ ಕೊಟ್ಟಿರುವ ಶೀರ್ಷಿಕೆ.
(ಒಂದು ಚಿತ್ರ ಮೊದಲಾದವಕ್ಕೆ ಹಾಕಿದ) ಆದರ್ಶ – ವಚನ, ಸೂಕ್ತಿ, ವಾಕ್ಯ.
(ಬಹುವಚನದಲ್ಲಿ lemmata) ಸೂಚಕ ಶೀರ್ಷಿಕೆ; ಟಿಪ್ಪಣಿಯ ವಿಷಯವನ್ನು ಯಾ ವಾದವನ್ನು ಸೂಚಿಸುವ ಶೀರ್ಷಿಕೆ.