logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indecisiveness
ನಾಮವಾಚಕ
  • ಅನಿರ್ಧಾರತೆ; ನಿರ್ಧಾರವಿಲ್ಲದಿರುವುದು; ತೀರ್ಮಾನಕ್ಕೆ ಬಾರದಿರುವುದು.
  • ಅನಿಶ್ಚಿತತೆ; ಸಂದಿಗ್ಧತೆ; ಅಸ್ಥಿರಚಿತ್ತತೆ.

  • indeclinable
    ಗುಣವಾಚಕ
    (ವ್ಯಾಕರಣ) ಅವ್ಯಯ(ವಾದ); ಪ್ರತ್ಯಯಗಳು ಸೇರಿ ರೂಪಾಂತರ, ರೂಪಭೇದ, ರೂಪವ್ಯತ್ಯಾಸ – ಆಗದ.

    indeclinable
    ನಾಮವಾಚಕ
    ಅವ್ಯಯ; ಪ್ರತ್ಯಯಗಳು ಸೇರದ ಪದ; ರೂಪಭೇದ ಹೊಂದದ ಪದ.

    indecomposable
    ಗುಣವಾಚಕ
    ಅವಿಶ್ಲೇಷ್ಯ; ಅವಿಘಟನೀಯ; ಪೃಥಕ್ಕರಿಸಲಾಗದ; ಘಟಕಗಳಾಗಿ ಒಡೆಯಲಾಗದ, ಬೇರ್ಪಡಿಸಲಾಗದ.

    indecorous
    ಗುಣವಾಚಕ
  • ತಗದ; ಶಿಷ್ಟವಲ್ಲದ; ಯೋಗ್ಯವಲ್ಲದ; ಅನುಚಿತ;
  • ಅಸಭ್ಯ; ಕೆಟ್ಟ ಅಭಿರುಚಿಯ; ಮರ್ಯಾದೆ ಈರಿದ.

  • indecorously
    ಕ್ರಿಯಾವಿಶೇಷಣ
  • ತಗದ ರೀತಿಯಲ್ಲಿ; ಅನುಚಿತವಾಗಿ.
  • ಅಸಭ್ಯವಾಗಿ; ಮರ್ಯಾದೆ ಈರಿ; ಕೆಟ್ಟ ಅಭಿರುಚಿಯಿಂದ.

  • indecorousness
    ನಾಮವಾಚಕ
  • ಅಯುಕ್ತತೆ; ಅನುಚಿತವಾಗಿರುವುದು.
  • ಅಸಭ್ಯತೆ.

  • indecorum
    ನಾಮವಾಚಕ
  • ಅನೌಚಿತ್ಯ.
  • ಅಸಭ್ಯತೆ; ಯೋಗ್ಯವಲ್ಲದ ನಡೆವಳಿಕೆ ಯಾ ಕಾರ್ಯ.

  • indeed
    ಕ್ರಿಯಾವಿಶೇಷಣ
  • ಸತ್ಯವಾಗಿ; ದಿಟವಾಗಿ; ನಿಜಕ್ಕೂ; ನಿಶ್ಚಯವಾಗಿ; ವಾಸ್ತವವಾಗಿ: he was, indeed, a remarkable man ನಿಶ್ಚಯವಾಗಿ ಅವನು ಅಸಾಧಾರಣ ಮನುಷ್ಯ.
  • (ವಿಶೇಷವಾಗಿ ಒತ್ತಿ ಹೇಳುವಾಗ) ನಿಜವಾಗಿಯೂ; ದಿಟವಾಗಿಯೂ; ಸತ್ಯವಾಗಿಯೂ: I shall be very glad indeed ನಿಜವಾಗಿಯೂ ನನಗೆ ತುಂಬಾ ಸಂತೋಷ. this is quick work indeed ದಿಟವಾಗಿಯೂ ಇದು ಚುರುಕಾದ ಕೆಲಸ. indeed it is ನಿಜವಾಗಿಯೂ ಅದೇ. yes, indeed ಹೌದು, ನಿಜ.
  • (ಸತ್ಯಾಂಶವನ್ನು ಹೇಳುವಲ್ಲಿ) ನಿಜವಾಗಿ; ವಾಸ್ತವವಾಗಿ: if indeed such a thing is possible ನಿಜವಾಗಿ ಅಂಥ ಒಂದು ವಿಷಯ ಸಾಧ್ಯವಾದ ಪಕ್ಷದಲ್ಲಿ. saw here recently, indeed yesterday ಇತ್ತೀಚೆಗೆ ನೋಡಿದೆ, ನಿಜವಾಗಿ ನೆನ್ನೆ.
  • (ಒಬ್ಬರ ಮಾತನ್ನು ಸಮರ್ಥಿಸುವಾಗ ಯಾ ವ್ಯಂಗ್ಯವಾಗಿ ನಿರಾಕರಿಸುವಾಗ) ನಿಜವಾಗಿ: who is this Mr. Rao? who is he, indeed! ಈ ರಾವ್‍ ಯಾರು? ನಿಜವಾಗಿ, ಅವರು ಯಾರು! (ಹಾಗೆಂದು ಕೇಳಬಹುದೇ ?)
  • (ಮಾತಿನ ಅರ್ಥದ ಒಂದು ಅಂಶವನ್ನು ಒಪ್ಪಿಕೊಳ್ಳುವಾಗ) ನಿಜವಾಗಿ: there are indeed exceptions ಅಪವಾದಗಳಿವೆ, ನಿಜ.
  • (ಪ್ರಶ್ನಾರ್ಥಕವಾಗಿ) ಹೌದೇ ? ಹಾಗೆಯೇ? ನಿಜವೇ? : “that’s Ram.” “Indeed?” “ಅವನು ರಾಮ.” “ಹೌದೇ?”

  • indeed
    ಭಾವಸೂಚಕ ಅವ್ಯಯ
  • ನಿಜವಾಗಿ! ಹಾಗೋ!
  • (ವ್ಯಂಗ್ಯಾರ್ಥದಲ್ಲಿ, ತಿರಸ್ಕಾರ ಸೂಚಕವಾಗಿ, ನಂಬದೆ ಸಂದೇಹ ಸೂಚಿಸುವಾಗ) ಓಹೋ! ಹೌದೇ! ಹಾಗೋ! ದಿಟವಾಗಿ! “he praised you to me.” “did he, indeed?” “ಅವನು ನನ್ನೆದುರಿಗೆ ನಿನ್ನನ್ನು ಹೊಗಳಿದ.” “ಹೌದೇ?”


  • logo