ದೃಷ್ಟಿಮಾಪನ; ದೃಷ್ಟಿಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಅಳೆಯುವುದು.
optophone
ನಾಮವಾಚಕ
ದ್ಯುತಿವಾಣಿ; ಬೆಳಕಿನ ಏರಿಳಿತಗಳನ್ನು ಶಬ್ದದ ಏರಿಳಿತಗಳಾಗಿ ಪರಿವರ್ತಿಸುವ ಮೂಲಕ ಕುರುಡರು ಬೆಳಕನ್ನೂ ಅದರ ಪ್ರಮಾಣವನ್ನೂ ಕಿವಿಯಿಂದ ಗುರುತಿಸಲು, ಆ ಮೂಲಕ ಅಚ್ಚಾಗಿರುವುದನ್ನು ಓದಲೂ ಸಹ ನೆರವು ನೀಡುವ ಒಂದು ಉಪಕರಣ.
ಓಪನ್ಷಿಯ; ಉರುಳೆಯಾಕಾರದ ಯಾ ದೀರ್ಘವೃತ್ತಾಕಾರದ ಕಾಂಡಗಳೂ, ಮುಳ್ಳುಮುಳ್ಳಾದ ರೋಮುಗಳೂ ಉಳ್ಳ, ಒಂದು ಬಗೆಯ ಕಳ್ಳಿಯ (cactus) ಕುಲ.
opus
ನಾಮವಾಚಕ
(ಸಂಗೀತಗಾರನ ಯಾವುದೇ ಬಗೆಯ) ಪ್ರತ್ಯೇಕ ರಚನೆ, ಕೃತಿ.
(ಮುಖ್ಯವಾಗಿ ಅವನ ಕೃತಿಗಳ ಸಂಖ್ಯೆಯಲ್ಲಿ ಇಷ್ಟನೆಯದೆಂದು ಪ್ರಸ್ತಾಪಿಸುವಾಗ ಪ್ರಯೋಗ) (ಸಂಕ್ಷಿಪ್ತ op) Beethoven op 15 ಬೀಥೋವನ್ ಕೃತಿಗಳಲ್ಲಿ 15ನೆಯದು.
(ಯಾವುದೇ) ಸಾಹಿತ್ಯಕೃತಿ ಯಾ ಕಲಾಕೃತಿ.
opus Dei
ನಾಮವಾಚಕ
(ಕ್ರೈಸ್ತಧರ್ಮ)
ದೇವರ ಬಗ್ಗೆ ಮಾನವನ ಆದ್ಯ ಕರ್ತವ್ಯವೆಂದು ಪರಿಗಣಿತವಾದ ಸಾರ್ವಜನಿಕ ಪೂಜಾಕರ್ಮ, ಪೂಜಾವಿಧಿ.
(Opus Dei) ಸಮಾಜದಲ್ಲಿ ಕ್ರೈಸ್ತಧರ್ಮದ ಆದರ್ಶಗಳನ್ನು ಪುನಸ್ಸಂಸ್ಥಾಪಿಸಲು 1928ರಲ್ಲಿ ಸ್ಪೇನ್‍ದೇಶದಲ್ಲಿ ಸ್ಥಾಪಿತವಾದ ಲೌಕಿಕರು ಮತ್ತು ಪಾದ್ರಿಗಳ ಒಂದು ರೋಮನ್ ಕ್ಯಾಥೋಲಿಕ್ ಸಂಸ್ಥೆ.