logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

indebted
ಗುಣವಾಚಕ
  • ಸಾಲಮಾಡಿದ; ಋಣಿಯಾದ; ಒಬ್ಬನಿಗೆ ಹಣ, ಸಾಲ – ತೀರಿಸಬೇಕಾಗಿರುವ.
  • (ರೂಪಕವಾಗಿ) ಉಪಕೃತನಾದ; (ಒಬ್ಬನಿಗೆ ಯಾವುದೋ ಒಂದರ ಸಲುವಾಗಿ) ಕೃತಜ್ಞತೆ ತೋರಿಸಬೇಕಾದ.

  • indebtedness
    ನಾಮವಾಚಕ
  • ಸಾಲ ಮಾಡಿರುವುದು.
  • ಋಣ; ಸಾಲ(ದ) ಮೊತ್ತ.
  • (ರೂಪಕವಾಗಿ) ಉಪಕೃತತ್ವ; ಕೃತಜ್ಞತೆ.

  • indecency
    ನಾಮವಾಚಕ
  • ಅಯುಕ್ತತೆ; ಅನೌಚಿತ್ಯ.
  • ಅಸಭ್ಯತೆ; ನಾಚಿಕೆಗೇಡು.
  • ಅಶ್ಲೀಲತೆ; ಭಂಡತನ.
  • ಭಂಡ ಮಾತು; ಪೋಕರಿ ಮಾತು; ಅಶ್ಲೀಲ ಭಾಷೆ, ಹಾಸ್ಯೋಕ್ತಿ ಮೊದಲಾದವು.

  • indecent
    ಗುಣವಾಚಕ ಪದಗುಚ್ಛ
  • ಅಯುಕ್ತ; ಅನುಚಿತ; ಯೋಗ್ಯವಲ್ಲದ; ಔಚಿತ್ಯ ಈರಿದ; ಇಲ್ಲಸಲ್ಲದ; ತಗದ: indecent haste ಇಲ್ಲಸಲ್ಲದ ಆತುರ.
  • ನಾಚಿಕೆಯಿಲ್ಲದ; ಅಸಭ್ಯ: indecent language ಅಸಭ್ಯ ಭಾಷೆ.
  • ಅಶ್ಲೀಲ; ಭಂಡ; ಬಂಡು: indecent jokes ಅಶ್ಲೀಲ ಹಾಸ್ಯ, ಜೋಕುಗಳು.

  • indecently
    ಕ್ರಿಯಾವಿಶೇಷಣ
  • ಅಯುಕ್ತವಾಗಿ; ಅನುಚಿತವಾಗಿ; ಸಲ್ಲದ ಹಾಗೆ; ಯೋಗ್ಯವಲ್ಲದ ರೀತಿಯಲ್ಲಿ.
  • ನಾಚಿಕೆಯಿಲ್ಲದಂತೆ; ಅಸಭ್ಯವಾಗಿ.
  • ಅಶ್ಲೀಲವಾಗಿ; ಭಂಡ ರೀತಿಯಲ್ಲಿ.

  • indeciduous
    ಗುಣವಾಚಕ
    (ಮರಗಳ ವಿಷಯದಲ್ಲಿ) ನಿತ್ಯಹಸುರಿನ; ನಿತ್ಯಹರಿದ್ವರ್ಣದ; ಸದಾಪರ್ಣಿ; ಕಾಲಕಾಲಕ್ಕೆ ಎಲೆ ಉದುರಿಹೋಗದ.

    indecipherable
    ಗುಣವಾಚಕ
  • (ಬರಹಗಳ ವಿಷಯದಲ್ಲಿ) ಓದಲಾಗದ; ಅಪಾಠ್ಯ; ಅಸ್ಪಷ್ಟವಾದ.
  • (ಲಿಪಿಯ ವಿಷಯದಲ್ಲಿ) ಅಗ್ರಾಹ್ಯ; ಸಂಕೇತ ಭೇದಿಸಲಾಗದ; ಸಂಜ್ಞೆ ಅರಿಯಲಾಗದ.
  • (ಬರಹದ ವಿಷಯದಲ್ಲಿ) ಅರ್ಥ ಮಾಡಿಕೊಳ್ಳಲಾಗದ; ಅರ್ಥ ಬಿಡಿಸಲಾಗದ; ದುರ್ಬೋಧವಾದ.

  • indecision
    ನಾಮವಾಚಕ
  • ಅನಿರ್ಧಾರ; ನಿರ್ಧಾರವಿಲ್ಲದಿರುವುದು; ನಿರ್ಣಯಕ್ಕೆ ಬಾರದಿರುವುದು.
  • ಸಂದಿಗ್ಧತೆ; ದೃಢಮನಸ್ಸಿಲ್ಲದಿರುವುದು; ಅನಿಶ್ಚಿತತೆ.

  • indecisive
    ಗುಣವಾಚಕ
  • ನಿರ್ಧಾರವಿಲ್ಲದ; ನಿರ್ಣಯಕ್ಕೆ, ತೀರ್ಮಾನಕ್ಕೆ – ಬಾರದ.
  • ಅನಿಶ್ಚಿತ; ಡೋಲಾಯಮಾನ; ಸಂದಿಗ್ಧ; ಅಸ್ಥಿರಮನಸ್ಸಿನ; ಈನಮೇಷ ನೋಡುವ.

  • indecisively
    ಕ್ರಿಯಾವಿಶೇಷಣ
  • ನಿರ್ಧಾರವಿಲ್ಲದೆ; ನಿರ್ಣಯಕ್ಕೆ ಬಾರದೆ.
  • ಅನಿಶ್ಚಿತವಾಗಿ; ಸಂದಿಗ್ಧವಾಗಿ; ಅಸ್ಥಿರ ಮನಸ್ಸಿನಿಂದ; ಹಿಂದುಮುಂದು ನೋಡುತ್ತಾ.


  • logo