logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

optimize
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ಆಶಾವಾದಿಯಾಗಿರು; ಯಾವುದೇ ಪರಿಸ್ಥಿತಿಯಲ್ಲಿ ಕೊನೆಗೆ ಒಳಿತಾಗುವುದೆಂಬ ಭರವಸೆ ಹೊಂದಿರು.
  • ಅತ್ಯುತ್ತಮವಾಗಿಸು; ಅತ್ಯಂತ ಪ್ರಶಸ್ತವಾಗಿಸು.
  • ಅತ್ಯಂತ ಲಾಭ, ಪ್ರಯೋಜನ, ಅನುಕೂಲ–ಪಡೆದುಕೊ.

  • optimum
    ನಾಮವಾಚಕ
  • (ಮುಖ್ಯವಾಗಿ ಜೀವವಿಜ್ಞಾನ) ಪ್ರಶಸ್ತ ಪರಿಸ್ಥಿತಿ; ಅತ್ಯುತ್ತಮ ಸ್ಥಿತಿ; ಹಿತವಾದ ಸ್ಥಿತಿ; (ಮುಖ್ಯವಾಗಿ ಜೀವಿಯ ಬೆಳವಣಿಗೆ ಮತ್ತು ಪುನರುತ್ಪಾದನೆಗೆ) ಅತ್ಯಂತ ಅನುಕೂಲವಾದ ಪರಿಸ್ಥಿತಿ.
  • (ವಿರುದ್ಧ ಪ್ರವೃತ್ತಿಗಳ ನಡುವಣ) ಅತ್ಯಂತ ಹಿತವಾದ ಸಮನ್ವಯ, ಮಧ್ಯಸ್ಥಸ್ಥಿತಿ.

  • optimum
    ಗುಣವಾಚಕ
  • ಅತ್ಯುತ್ತಮ; ಪ್ರಶಸ್ತ.
  • ಅತ್ಯಂತ ಅನುಕೂಲಕರ; ಅತ್ಯಂತ ಹಿತವಾದ: optimum temperature ಅತ್ಯಂತ ಹಿತವಾದ ತಾಪ, ಶಾಖ, ಉಷ್ಣ.

  • option
    ನಾಮವಾಚಕ ಪದಗುಚ್ಛ
  • ಆಯ್ಕೆ; ಆಯುವುದು.
  • ಆಯ್ದದ್ದು ಯಾ ಆಯಬಹುದಾದದ್ದು: make one’s option ತನ್ನ ಆಯ್ಕೆಯನ್ನು ಮಾಡು.
  • ಆಯ್ಕೆಯ ಸ್ವಾತಂತ್ರ್ಯ.
  • (ಸರಕಾರದ ಸಾಲಪತ್ರ, ಪತ್ರ ವ್ಯಾಪಾರ ಕಟ್ಟೆ, ಮೊದಲಾದವುಗಳ ವಿಷಯದಲ್ಲಿ) ಗೊತ್ತಾದ ಬಂಡವಾಳಪತ್ರ ಮೊದಲಾದವನ್ನು ಗೊತ್ತಾದ ಕಾಲದಲ್ಲಿ, ಗೊತ್ತಾದ ಬೆಲೆಗೆ, ತರಿಸಿಕೊಳ್ಳಲು ಯಾ ಬಟವಾಡೆ (ಪಾವತಿ) ಮಾಡಲು, ಹಣಕೊಟ್ಟು ಪಡೆದ ಹಕ್ಕು.

  • optional
    ಗುಣವಾಚಕ
  • ನಿರ್ಬಂಧವಲ್ಲದ; ಐಚ್ಛಿಕ; ವಿಕಲ್ಪ; ತನ್ನ ಇಚ್ಛೆಗೆ ಬಿಟ್ಟ.
  • ಆಯ್ಕೆಗೆ ಬಿಟ್ಟ; ಆಯಬಹುದಾದ.

  • optionality
    ನಾಮವಾಚಕ
  • ನಿರ್ಬಂಧವಿಲ್ಲದಿರುವಿಕೆ; ಐಚ್ಛಿಕತೆ; ತನ್ನ ಇಚ್ಛೆಗೆ ಬಿಟ್ಟಿರುವಿಕೆ.
  • ಆಯ್ಕೆಗೆ ಬಿಟ್ಟಿರುವಿಕೆ; ಆಯಬಹುದಾಗಿರುವಿಕೆ.

  • optionally
    ಕ್ರಿಯಾವಿಶೇಷಣ
    ಐಚ್ಛಿಕವಾಗಿ.

    optometer
    ನಾಮವಾಚಕ
    ದೃಷ್ಟಿಮಾಪಕ; ದೃಷ್ಟಿಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಅಳೆಯುವ ಉಪಕರಣ.

    optometric
    ಗುಣವಾಚಕ
    ದೃಷ್ಟಿಮಾಪನದ ಯಾ ಅದಕ್ಕೆ ಸಂಬಂಧಿಸಿದ.

    optometrist
    ನಾಮವಾಚಕ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)
  • ದೃಷ್ಟಿಮಾಪನಕಾರ; ದೃಷ್ಟಿಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಅಳೆಯುವವ.
  • (ಅಮೆರಿಕನ್‍ ಪ್ರಯೋಗ) = ophthalmic optician.


  • logo