logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legman
ನಾಮವಾಚಕ
ಕಾಲಾಳು; ಓಡಾಡಿ ಸುದ್ದಿ ಸಂಗ್ರಹಿಸುವುದು, ಸಾಮಾನು ಸಂಗ್ರಹಿಸುವುದು ಮೊದಲಾದವುಗಳಿಗಾಗಿ ನೇಮಕವಾದ ವ್ಯಕ್ತಿ.

Lego
ನಾಮವಾಚಕ
ಲೆಗೊ; ಪರಸ್ಪರ ಕೂಡಿಕೊಳ್ಳುವ ಘನಾಕಾರ ಮೊದಲಾದ ರೂಪಗಳಲ್ಲಿರುವ ಪ್ಲಾಸ್ಟಿಕ್‍ ತುಂಡುಗಳಿಂದ ಯಾ ಬ್ಲಾಕುಗಳಿಂದ ಕೂಡಿದ ಒಂದು ಕಟ್ಟಡ ನಿರ್ಮಾಣದ ಆಟದ ಸಾಮಾನು.

legume
ನಾಮವಾಚಕ
  • ದ್ವಿದಳಧಾನ್ಯ ಸಸ್ಯದ (ತಿಂಗಳ ಹುರುಳಿ, ಅವರೆ, ತೊಗರಿ, ಬಟಾಣಿ, ಮೊದಲಾದವುಗಳ)
    1. ಕಾಯಿ; ಕೋಡುಕಾಯಿ.
    2. ಬೀಜಕೋಶ; ಶಿಂಬೆ.
    3. ಕಾಳು.
  • (ತಿಂಗಳ ಹುರುಳಿ, ಬಟಾಣಿ ಬಳಗದ) ಯಾವುದೇ ದ್ವಿದಳಧಾನ್ಯದ – ಸಸ್ಯ ಯಾ ತರಕಾರಿ.

  • leguminous
    ಗುಣವಾಚಕ
    ದ್ವಿದಳ ಧಾನ್ಯದ; ದ್ವಿದಳಧಾನ್ಯದಂಥ; ಲೆಗ್ಯುಮಿನೇಸೀ ವಂಶದ ಹುರುಳಿ, ಬಟಾಣಿಗಳನ್ನೊಳಗೊಂಡ, ಬೀಜಕೋಶಗಳಲ್ಲಿ ಬೀಜಗಳು ಹುದುಗಿರುವ, (ಸಾಮಾನ್ಯವಾಗಿ ಬೇರಿನ ಸಣ್ಣಗಂಟುಗಳು ನೈಟ್ರೊಜನ್ನನ್ನು ನೆಲೆಗೊಳಿಸಲು ಸಮರ್ಥವಾಗಿರುವ) ಗಿಡಗಳ ಬಳಗದ ಯಾ ಅವುಗಳಂಥ.

    legwork
    ನಾಮವಾಚಕ
    ಕಾಲುಕೆಲಸ; ಬಹಳ ಓಡಾಟ, ಪ್ರಯಾಣ, ಅಥವಾ ದೇಹಶ್ರಮ ಇರುವ ಕೆಲಸ.

    lehr
    ನಾಮವಾಚಕ
    ಗಾಜು ಕುಲುಮೆ; ಗಾಜಿಗೆ ಹದಕೊಡುವ ಕುಲುಮೆ.

    lei
    ನಾಮವಾಚಕ
    (ಪಾಲಿನೇಷಿಯದ) ಹೂಮಾಲೆ; ಹೂವಿನ ಹಾರ, ದಂಡೆ, ಸರ.

    lei
    ನಾಮವಾಚಕ
    leu ಪದದ ಬಹುವಚನ.

    Leibnizian
    ಗುಣವಾಚಕ
    ಜರ್ಮನ್‍ ತತ್ತ್ವಶಾಸ್ತ್ರಜ್ಞನಾದ ಜಿ. ಡಬ್ಲು. ಲೈಬ್ನಿಟ್ಸ್‍ (ಮರಣ 1716) ಯಾ ಅವನ ತತ್ತ್ವಗಳಿಗೆ ಸಂಬಂಧಿಸಿದ; ಮುಖ್ಯವಾಗಿ ಭೌತದ್ರವ್ಯವನ್ನು ಅವಿನಶ್ವರ, ಅವಿಭಜನೀಯ, ಮೂಲವಸ್ತುಗಳ ಒಂದು ಸಮೂಹ ಮತ್ತು ಚೇತನ ಮತ್ತು ಜಡದ್ರವ್ಯದ ನಡುವೆ ಒಂದು ಪೂರ್ವಸಿದ್ಧ ಸಾಮರಸ್ಯವಿದೆ ಎಂದು ಭಾವಿಸುವ.

    Leibnizian
    ನಾಮವಾಚಕ
    (ಜರ್ಮನ್‍ ತತ್ತ್ವಶಾಸ್ತ್ರಜ್ಞ) ಲೈಬ್ನಿಟ್ಸ್‍ನ ಅನುಯಾಯಿ.


    logo