logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incursion
ನಾಮವಾಚಕ
  • ಶತ್ರು(ಗಳ) ದಾಳಿ.
  • ಹಠಾತ್‍ ದಾಳಿ; ಅನಿರೀಕ್ಷಿತ, ಆಕಸ್ಮಿಕ ಆಕ್ರಮಣ; ಇದ್ದಕ್ಕಿದ್ದಂತೆ ಮೇಲೆ ಬೀಳುವುದು.

  • incursive
    ಗುಣವಾಚಕ
    ಇದ್ದಕ್ಕಿದ್ದಂತೆ, ಹಠಾತ್ತನೆ – ಮೇಲೆ ಬೀಳುವ, ದಾಳಿ ಮಾಡುವ; ಅನಿರೀಕ್ಷಿತ ಆಕ್ರಮಣದ.

    incurvation
    ನಾಮವಾಚಕ
  • ವಕ್ರಾಕೃತಿಯಾಗುವಂತೆ ಬಗ್ಗಿಸುವಿಕೆ.
  • ಒಳಬಾಗಿಸುವಿಕೆ; ಒಳಗಡೆಗೆ ಬಾಗಿಸುವಿಕೆ.

  • incurve
    ಸಕರ್ಮಕ ಕ್ರಿಯಾಪದ
  • ವಕ್ರಾಕೃತಿಯಾಗುವಂತೆ, ಬಾಗುವಂತೆ – ಬಗ್ಗಿಸು.
  • (ಮುಖ್ಯವಾಗಿ ಭೂತಕೃದಂತದಲ್ಲಿ) ಒಳಬಾಗಿಸು; ಒಳಗಡೆಗೆ ಬಾಗಿಸು.

  • incus
    ನಾಮವಾಚಕ
    ಇಂಕಸ್‍; ಕಿವಿಯ ಪೊರೆಯಿಂದ ಮ್ಯಾಲಿಯಸ್‍ ಮೂಲಕ ಕಂಪನಗಳನ್ನು ಪಡೆಯುವ ಒಂದು ಎಲುಬು.

    incuse
    ಗುಣವಾಚಕ
    (ನಾಣ್ಯ ಮೊದಲಾದವುಗಳ ಮೇಲಣ ಮುದ್ರಣದ ವಿಷಯದಲ್ಲಿ) ಟಂಕಿಸಿದ; ಮುದ್ರಿಸಿದ; ಛಾಪಿಸಿದ; ಒಳಬಡಿದು ಯಾ ಮುದ್ರೆಯೊತ್ತಿ ಮಾಡಿದ.

    incuse
    ನಾಮವಾಚಕ
    (ಟಂಕಿಸಿದ) ಮುದ್ರೆ; ಛಾಪು; ಅಂಕನ.

    incuse
    ಸಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ಭೂತಕೃದಂತದಲ್ಲಿ) (ಚಿತ್ರ ಮೊದಲಾದವನ್ನು) ಟಂಕಿಸು; ಛಾಪಿಸು; ಮುದ್ರೆ ಬಡಿದು ಒತ್ತು.
  • (ನಾಣ್ಯ ಮೊದಲಾದವುಗಳ ಮೇಲೆ) ಮುದ್ರೆ ಒತ್ತು; ಚಿತ್ರ ಒತ್ತು.

  • Ind.
    ಸಂಕ್ಷಿಪ್ತ
  • Independent.
  • India(n).
  • Indiana.

  • indaba
    ನಾಮವಾಚಕ
    ಇಂಡಾಬ; ದಕ್ಷಿಣ ಆಹ್ರಿಕದ ಮೂಲನಿವಾಸಿಗಳ ಯಾ ಅವರೊಂದಿಗೆ ನಡೆಯುವ ಸಮ್ಮೇಳನ.


    logo