logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

optima
ನಾಮವಾಚಕ
optimum ಪದದ ಬಹುವಚನ.

optimal
ಗುಣವಾಚಕ
= 2optimum.

optimally
ಕ್ರಿಯಾವಿಶೇಷಣ
  • ಅತ್ಯುತ್ತಮವಾಗಿ; ಪ್ರಶಸ್ತವಾಗಿ.
  • ಅತ್ಯಂತ ಅನುಕೂಲಕರವಾಗಿ.

  • optimise
    ಕ್ರಿಯಾಪದ
    = optimize.

    optimism
    ನಾಮವಾಚಕ
  • ಪ್ರಪಂಚ ಶ್ರೇಷ್ಠತಾವಾದ; ವಾಸ್ತವಿಕ ಪ್ರಪಂಚವೇ (ಇಹಲೋಕವೇ) ಇತರ ಎಲ್ಲ ಸಾಧ್ಯವಿರಬಹುದಾದ ಪ್ರಪಂಚಗಳಿಗಿಂತಲೂ ಶ್ರೇಷ್ಠವಾದದ್ದೆಂಬ, ಮುಖ್ಯವಾಗಿ ಲೈಬ್ನಿಟ್ಸ್‍ ಎಂಬ ತತ್ತ್ವಜ್ಞಾನಿಯು ಪ್ರತಿಪಾದಿಸಿದ ಸಿದ್ಧಾಂತ.
  • ಸರ್ವಶುಭವಾದ; ವಿಶ್ವದಲ್ಲಿ ಒಳಿತು ಕೆಡುಕನ್ನು ಅಂತಿಮವಾಗಿ ಜಯಿಸಲೇಬೇಕೆಂಬ ದೃಷ್ಟಿ, ವಾದ.
  • ಆಶಾವಾದ; ಆಶಾವಾದಿತ್ವ; ಗೆಲವುನೋಟ; ಶುಭಪ್ರತೀಕ್ಷೆ; ಒಳ್ಳೆಯದನ್ನೇ ಭಾವಿಸುವ, ನಿರೀಕ್ಷಿಸುವ ಪ್ರವೃತ್ತಿ.

  • optimist
    ನಾಮವಾಚಕ
    ಆಶಾವಾದಿ.

    optimist
    ಗುಣವಾಚಕ
    ಆಶಾವಾದದಿಂದ ಕೂಡಿದ; ಆಶಾವಾದಿತ್ವದ; ಶುಭ ಪ್ರತೀಕ್ಷೆಯ.

    optimistic
    ಗುಣವಾಚಕ
  • ಆಶಾವಾದದ; ಆಶಾವಾದದಿಂದ ಕೂಡಿದ; ಶುಭದೃಷ್ಟಿಯ; ಶುಭ ಪ್ರತೀಕ್ಷೆಯ; ಸಂಭವಿಸುವ ಘಟನೆಗಳು ಕೊನೆಗೆ ಅನುಕೂಲಕರವಾಗುವುವೆಂಬ ದೃಷ್ಟಿಯ.
  • ಆಶಾವಾದಿ; ಆಶಾವಾದವನ್ನು ಪ್ರತಿಬಿಂಬಿಸುವ: optimistic plan ಆಶಾವಾದಿಯಾದ ಯೋಜನೆ.
  • ಆಶಾವಾದದ; ಆಶಾವಾದಕ್ಕೆ ಸಂಬಂದಪಟ್ಟ.

  • optimistically
    ಕ್ರಿಯಾವಿಶೇಷಣ
    ಆಶಾವಾದದಿಂದ; ಶುಭಪ್ರತೀಕ್ಷೆಯಿಂದ; ಆಶಾವಾದಕ್ಕೆ ಸಂಬಂಧಪಟ್ಟಂತೆ.

    optimization
    ನಾಮವಾಚಕ
    ಅತ್ಯಂತ ಪ್ರಶಸ್ತವಾಗಿಸುವಿಕೆ; ಅತ್ಯುತ್ತಮವಾಗಿಸುವಿಕೆ.


    logo