ದ್ಯುತಿ ಸಮಾಂಗಿ; ದ್ಯುತಿ ಸಮಾಂಗತೆಯನ್ನು ತೋರ್ಪಡಿಸುವ ಎರಡು ಅಥವಾ ಹೆಚ್ಚು ಸಮಾಂಗಿಗಳಲ್ಲಿ ಒಂದು.
optical isomerism
ನಾಮವಾಚಕ
ದ್ಯುತಿ ಸಮಾಂಗತೆ; ಅಣುವಿನಲ್ಲಿ ಅಸಮಮಿತ ಪರಮಾಣು ಯಾ ಪರಮಾಣುಗಳು ಇರುವುದರಿಂದಲೋ ಯಾ ಒಟ್ಟಿನಲ್ಲಿ ಅಣುವೇ ಅಸಮಮಿತವಾಗಿರುವುದರಿಂದಲೋ ಉದ್ಭವಿಸುವ, ಧ್ರುವೀಕೃತ ಬೆಳಕಿನ ವಿಷಯದಲ್ಲಿ ಸಮಾಂಗಿಗಳು ಭಿನ್ನ ರೀತಿಯಲ್ಲಿ ನಡೆದುಕೊಳ್ಳುವ, ಒಂದು ಬಗೆಯ ಸ್ಟೀರಿಯೋ ಸಮಾಂಗತೆ.
optical microscope
ನಾಮವಾಚಕ
ದ್ಯುತಿ ಸೂಕ್ಷ್ಮದರ್ಶಕ; ಬೆಳಕನ್ನೇ (ಇಲೆಕ್ಟ್ರಾನ್‍ಗಳನ್ನಲ್ಲ) ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ, ವಸ್ತುಗಳ ಗಾತ್ರವನ್ನು ದೊಡ್ಡದು ಮಾಡಿ ತೋರಿಸುವ ಉಪಕರಣ.
optical rotation
ನಾಮವಾಚಕ
ದ್ಯುತಿಭ್ರಮಣ; ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಸುವುದು.
optical telescope
ನಾಮವಾಚಕ
ದ್ಯುತಿದೂರದರ್ಶಕ; ಬೆಳಕನ್ನೇ (ರೇಡಿಯೋ ಅಲೆಗಳನ್ನಲ್ಲ) ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ, ದೂರದ ವಸ್ತುಗಳು ಹತ್ತಿರದಲ್ಲಿರುವಂತೆ ತೋರಿಸುವ ಉಪಕರಣ.
optically
ಕ್ರಿಯಾವಿಶೇಷಣ
ನೋಟದಿಂದ; ದೃಷ್ಟಿಯಿಂದ; ಕಣ್ಣಿನಿಂದ.
ದೃಗ್ವೈಜ್ಞಾನಿಕವಾಗಿ ಯಾ ದೃಗ್ವೈಜ್ಞಾನಿಕ ಲಕ್ಷಣಗಳಿಗೆ ಸಂಬಂಧಿಸಿದಂತೆ.
optically active
ಗುಣವಾಚಕ
ದ್ಯುತಿಪಟು; (ರಾಸಾಯನಿಕ ಸಂಯುಕ್ತಗಳ ಯಾ ಹರಳುಗಳ ವಿಷಯದಲ್ಲಿ) ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಸುವ.
optically inactive
ಗುಣವಾಚಕ
ದ್ಯುತಿನಿಷ್ಪಟು; ದ್ಯುತಿನಿಷ್ಕ್ರಿಯ; (ರಾಸಾಯನಿಕ ಸಂಯುಕ್ತಗಳ ಯಾ ಹರಳುಗಳ ವಿಷಯದಲ್ಲಿ) ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಸಿದ.
optician
ನಾಮವಾಚಕ
ದೃಕ್ಸಾಧನ ತಯಾರಕ; ದೃಗುಪರಣಕಾರ; ಚಷ್ಮಕಾರ; ದೃಕ್ ಸಾಧನಗಳನ್ನು, ಸಲಕರಣೆಗಳನ್ನು ತಯಾರಿಸುವವನು ಯಾ ಮಾರುವವನು.
ಕನ್ನಡಕ ತಯಾರಕ ಯಾ ವ್ಯಾಪಾರಿ.
ನೇತ್ರತಜ್ಞ; ಕಣ್ಣಿನ ಯಾ ದೃಷ್ಟಿಯ ದೋಷಗಳನ್ನು ಪತ್ತೆಮಾಡಿ ಅವನ್ನು ಸರಿಪಡಿಸುವಲ್ಲಿ ತರಬೇತು ಪಡೆದಿರುವವನು.
optics
ನಾಮವಾಚಕ
ದೃಗ್ವಿಜ್ಞಾನ:
ದೃಷ್ಟಿಯ ಮತ್ತು ದೃಷ್ಟಿಗೆ ಸಾಧನವಾದ ಬೆಳಕಿನ ಉತ್ಪತ್ತಿ, ಪ್ರಸಾರ, ಮೊದಲಾದವನ್ನು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ.
ಇತರ ವಿಕಿರಣದ ಯಾ ಕಣಗಳ ಇಂಥ ವರ್ತನೆಯನ್ನು ಕುರಿತು ಅಧ್ಯಯನ ಮಾಡುವ ವಿಜ್ಞಾನ.