logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inculcator
ನಾಮವಾಚಕ
ಬೋಧಕ; (ವಿಷಯ, ಅಭ್ಯಾಸ, ಭಾವನೆ, ಮೊದಲಾದವನ್ನು ಮನಸ್ಸಿಗೆ ಹತ್ತುವಂತೆ) ಒತ್ತಿಹೇಳುವವನು, ಅಚ್ಚೊತ್ತುವವನು.

inculpate
ಸಕರ್ಮಕ ಕ್ರಿಯಾಪದ
  • ತಪ್ಪಿತ ಹೊರಿಸು; ಅಪರಾಧ ಆರೋಪಿಸು; ದೋಷಾರೋಪಣಮಾಡು.
  • ದೋಷಾರೋಪಣೆಗೆ ಸಿಕ್ಕಿಸು; ಆಪಾದನೆಗೆ – ಒಳಪಡಿಸು, ಗುರಿಮಾಡು, ಈಡುಮಾಡು, ಬಾಧ್ಯನನ್ನಾಗಿ ಯಾ ಭಾಗಿಯನ್ನಾಗಿ ಮಾಡು.

  • inculpation
    ನಾಮವಾಚಕ
  • ಅಪರಾಧಾರೋಪಣೆ; ತಪ್ಪಿತ ಹೊರಿಸುವುದು; ಅಪರಾಧ ಆರೋಪಿಸುವುದು; ದೋಷಾರೋಪಣೆ ಮಾಡುವುದು.
  • ಅಪರಾಧ ಬಾಧ್ಯತೆ; ಅಪರಾಧಭಾಗಿತ್ವ; ದೋಷಾರೋಪಣೆಗೆ ಸಿಕ್ಕಿಸುವುದು; ಆಪಾದನೆಗೆ ಒಳಪಡಿಸುವುದು.

  • inculpatory
    ಗುಣವಾಚಕ
  • ತಪ್ಪಿತ ಹೊರಿಸುವ; ಅಪರಾಧ ಆರೋಪಿಸುವ; ದೋಷಾರೋಪಣೆ ಮಾಡುವ.
  • ದೋಷಾರೋಪಣೆಗೆ ಸಿಕ್ಕಿಸುವ; ಆಪಾದನೆಗೆ – ಒಳಪಡಿಸುವ, ಬಾಧ್ಯಗೊಳಿಸುವ, ಭಾಗಿಯನ್ನಾಗಿ ಮಾಡುವ.

  • incult
    ಗುಣವಾಚಕ
  • (ವಿರಳ ಪ್ರಯೋಗ) ಉತ್ತಿರದ; ಬೇಸಾಯ ಮಾಡದ.
  • ನಯಮಾಡದ; ಒರಟೊರಟಾದ.
  • (ಮನುಷ್ಯನ ಯಾ ನಡೆವಳಿಯ ವಿಷಯದಲ್ಲಿ) ಒರಟೊರಟಾದ; ನಯವಿಲ್ಲದ; ಅನಾಗರಿಕ; ಅಸಂಸ್ಕೃತ; ಪಾಮರ.

  • incumbency
    ನಾಮವಾಚಕ
    ಸ್ಥಾನಿಕತ್ವ; ಸ್ಥಾನಿಕನ ಯಾ ಹುದ್ದೇದಾರನ – ಹುದ್ದೆ, ಅಧಿಕಾರ, ಅಧಿಕಾರಾವಧಿ, ಅಧಿಕಾರಕ್ಷೇತ್ರ ಹಾಗೂ ಅದರ ವ್ಯಾಪ್ತಿ.

    incumbent
    ನಾಮವಾಚಕ
  • (ಕ್ರೈಸ್ತ ಮಠದ) ದತ್ತಿದಾರ; ಉಂಬಳಿದಾರ; ದತ್ತಿಯನ್ನು ಅನುಭವಿಸುತ್ತಿರುವವನು.
  • (ಯಾವುದೇ) ಹುದ್ದೆದಾರ; ಸ್ಥಾನಿಕ; ಒಂದು ಹುದ್ದೆಯಲ್ಲಿರುವ ಅಧಿಕಾರಿ, ನೌಕರ.

  • incumbent
    ಗುಣವಾಚಕ
  • ಭಾರ ಬಿದ್ದಿರುವ; ಮೇಲೆ – ಬಿದ್ದಿರುವ, ಒತ್ತುತ್ತಿರುವ.
  • (ವ್ಯಕ್ತಿಯ) ಹೊಣೆಯಾಗಿರುವ; ಕರ್ತವ್ಯವಾಗಿರುವ; ಜವಾಬ್ದಾರಿಯಾಗಿರುವ; ಮಾಡಬೇಕಾಗಿರುವ; ಹೊತ್ತಿರುವ; ವ್ಯಕ್ತಿಯ ಮೇಲೆ ಬಿದ್ದಿರುವ: it is incumbent on you to carry out orders ಆಜ್ಞೆಗಳನ್ನು ಪಾಲಿಸುವುದು ನಿನ್ನ (ಮೇಲೆ ಬಿದ್ದ) ಹೊಣೆ, ಕರ್ತವ್ಯ.

  • incunable
    ನಾಮವಾಚಕ
    = incunabulum (2).

    incunabulum
    ನಾಮವಾಚಕ
  • (ಬಹುವಚನದಲ್ಲಿ) (ಒಂದು ವಿಷಯದ) ಆದಿ; ಆರಂಭದಶೆ; ಪ್ರಾರಂಭಿಕ ಸ್ಥಿತಿ; ಮೊದಲ ಹಂತಗಳು.
  • ಆದ್ಯಮುದ್ರಿತ ಪುಸ್ತಕ; ಮುದ್ರಣ ಬಳಕೆಗೆ ಬಂದ ಹೊಸದರಲ್ಲಿ (ಮುಖ್ಯವಾಗಿ 1500ಕ್ಕೆ ಮೊದಲು) ಅಚ್ಚಾದ ಪುಸ್ತಕ.


  • logo