(ಮುಖ್ಯವಾಗಿ ಲೆನ್ಸಿನ ವಿಷಯದಲ್ಲಿ) ದೃಷ್ಟಿ ಸಹಾಯಕ; ನೋಡಲು ಸಹಾಯಕವಾಗುವಂತೆ ಯಾ ದೃಗ್ವಿಜ್ಞಾನದ ಸೂತ್ರಗಳುಗನುಸಾರವಾಗಿ ರಚಿಸಿದ.
optical activity
ನಾಮವಾಚಕ
(ರಸಾಯನವಿಜ್ಞಾನ) ದ್ಯುತಿಪಟುತ್ವ; ಹರಳಿನ ಮೂಲಕ ಯಾ ಸೂಕ್ತ ದ್ರಾವಕದಲ್ಲಿ ಲೀನಮಾಡಿ ತಯಾರಿಸಿದ ಅದರ ದ್ರಾವಣದ ಮೂಲಕ ಸಮತಲ ಧ್ರುವೀಕೃತ ಬೆಳಕಿನ ರಶ್ಮಿಯನ್ನು ಹಾಯಿಸಿದಾಗ ಬೆಳಕಿನ ಧ್ರುವೀಕರಣ ಸಮತಲವನ್ನು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಸಬಲ್ಲ (ಕೆಲವು ಸಂಯುಕ್ತಗಳಲ್ಲಿ ಕಂಡುಬರುವ) ಗುಣ.
optical art
ನಾಮವಾಚಕ
ದೃಕ್ಕಲೆ; ದೃಶ್ಯಕಲೆ; (ವಿನ್ಯಾಸ ಮತ್ತು ಬಣ್ಣಗಳ ಖಚಿತ ಬಳಕೆಯ ಮೂಲಕ) ಚಲನೆಯ ಭ್ರಮೆಯನ್ನುಂಟುಮಾಡುವ ವರ್ಣಚಿತ್ರ ಕಲೆ.
optical brightener
ನಾಮವಾಚಕ
ಹೊಳಪಿಗ; ದೀಪ್ತಿಕಾರಿ; ಒಗೆದ ಬಟ್ಟೆಗಳಿಗೆ ಬಿಳುಪನ್ನು ಕೊಡಲು ಬಳಸುವ, ದೀಪ್ತಿಕಾರಿ ವಸ್ತು.
optical character recognition
ನಾಮವಾಚಕ
ಅಕ್ಷರ ಗ್ರಾಹಕ; ದ್ಯುತಿವಿದ್ಯುತ್ ಸಾಧನಗಳ ಮೂಲಕ ಮುದ್ರಿತ ಅಕ್ಷರಗಳನ್ನು ಗುರುತಿಸುವುದು.