logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legionella
ನಾಮವಾಚಕ
ಲೀಜನಲ; ಲೀಜನೇರ್‍ ರೋಗಕಾರಕವಾದ ‘ಲೀಜನಲ ನ್ಯುಮೋಹಿಲ’ ಎಂಬ ರೋಗಾಣು, ಬ್ಯಾಕ್ಟೀರಿಯ.

legionnaire
ನಾಮವಾಚಕ
ಲೀಜನೇರ್‍:
  • ವಿದೇಶೀ ಸ್ವಯಂಸೇವಕಯೋಧರ ದಳದ (foreign 1legion) ಸದಸ್ಯ.
  • ಅಮೆರಿಕನ್‍ ಲೀಜನ್‍ (American 1legion)ನ ಯಾ ರಾಯಲ್‍ ಬ್ರಿಟಿಷ್‍ ಲೀಜನ್‍ನ (Royal British legion) ಸದಸ್ಯ.

  • legionnaires' disease
    ನಾಮವಾಚಕ
    ಲೀಜನೇರ್‍ ಕಾಯಿಲೆ, ರೋಗ; 1976ರಲ್ಲಿ ಅಮೆರಿಕನ್‍ ಲೀಜನ್‍ (American 1legion) ಸಭೆಯಲ್ಲಿ ತಲೆದೋರಿದ ಒಂದು ಬಗೆಯ ಬ್ಯಾಕ್ಟೀರಿಯಾಗಳಿಂದ ಬರುವ ನ್ಯುಮೋನಿಯ ರೋಗ.

    legislate
    ಅಕರ್ಮಕ ಕ್ರಿಯಾಪದ
  • ಶಾಸನ ರಚಿಸು; ಕಾನೂನು ಮಾಡು.
  • ಕಾನೂನಿನ ಪ್ರಕಾರ ಅವಕಾಶ – ಕಲ್ಪಿಸು, ಮಾಡಿಕೊಡು.

  • legislation
    ನಾಮವಾಚಕ
  • ಶಾಸನ, ಕಾಯಿದೆ, ಕಾನೂನು – ರಚನೆ; ಶಾಸನ, ಕಾನೂನು ಮಾಡುವುದು.
  • (ಸಾಮೂಹಿಕವಾಗಿ) ಕಾನೂನುಗಳು; ಶಾಸನಗಳು.

  • legislative
    ಗುಣವಾಚಕ
  • ಶಾಸಕ; ವಿಧಾಯಕ; ಶಾಸನ, ಕಾನೂನು ರಚಿಸುವ ಅಧಿಕಾರವುಳ್ಳ.
  • ಶಾಸನರಚನೆಯ; ಕಾನೂನು ರಚನೆಗೆ ಸಂಬಂಧಿಸಿದ.

  • legislatively
    ಕ್ರಿಯಾವಿಶೇಷಣ
    ವಿಧಾಯಕವಾಗಿ; ಶಾಸನ ರಚಿಸುವ ರೀತಿಯಲ್ಲಿ.

    legislator
    ನಾಮವಾಚಕ
  • ಶಾಸಕ; ಶಾಸನಸಭೆಯ ಸದಸ್ಯ.
  • = lawgiver.

  • legislatorial
    ಗುಣವಾಚಕ
    (ವಿರಳ ಪ್ರಯೋಗ)
  • ಶಾಸನ ಮಾಡುವ ಅಧಿಕಾರವುಳ್ಳ.
  • ಶಾಸನಾಧಿಕಾರಿಯ.
  • ಶಾಸನಾಧಿಕಾರದ.

  • legislatress
    ನಾಮವಾಚಕ
    ಶಾಸಕಿ; ಶಾಸನಸಭೆಯ ಸದಸ್ಯೆ.


    logo