logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

optant
ನಾಮವಾಚಕ
  • ಆಯ್ಕೆಗಾರ; ಆಯ್ಕೆ ಮಾಡುವವನು; ಆಯ್ದುಕೊಳ್ಳುವವನು.
  • ಎರಡು ರಾಷ್ಟ್ರೀಯತೆಗಳಲ್ಲಿ ಒಂದನ್ನು ಆರಿಸಿಕೊಳ್ಳುವವ(ಳು).

  • optative
    ಗುಣವಾಚಕ
    (ವ್ಯಾಕರಣ) ಇಚ್ಛಾರ್ಥಕ: optative use of subjunctive ಸಂಭಾವ್ಯ ಕ್ರಿಯಾರ್ಥದ ಇಚ್ಛಾರ್ಥಕ ಪ್ರಯೋಗ, ಉದಾಹರಣೆಗೆ may it not happen!

    optative
    ನಾಮವಾಚಕ
    (ವ್ಯಾಕರಣ)
  • ಇಚ್ಛಾರ್ಥಕ ರೂಪ.
  • ಇಚ್ಛಾರ್ಥಕ; ಧಾತು ರೂಪ.

  • optative mood
    ನಾಮವಾಚಕ
    (ವ್ಯಾಕರಣ) ಇಚ್ಛಾರ್ಥಕ ಧಾತುರೂಪ (ಮುಖ್ಯವಾಗಿ ಗ್ರೀಕ್‍ ಮತ್ತು ಸಂಸ್ಕೃತ ಭಾಷೆಗಳಲ್ಲಿ).

    optatively
    ಕ್ರಿಯಾವಿಶೇಷಣ
    (ವ್ಯಾಕರಣ)
  • ಇಚ್ಛಾರ್ಥಕವಾಗಿ; ಇಚ್ಛಾಬೋಧಕ ರೀತಿಯಲ್ಲಿ.
  • ಇಚ್ಛಾರ್ಥ ಧಾತುರೂಪದಲ್ಲಿ.

  • optic
    ಗುಣವಾಚಕ
    (ಅಂಗರಚನಾಶಾಸ್ತ್ರ) ಕಣ್ಣಿನ; ನೇತ್ರದ; ದೃಷ್ಟಿಯ; ಚಾಕ್ಷುಷ; ಚಕ್ಷುರಿಂದ್ರಿಯದ: optic nerve ಚಾಕ್ಷುಷ ನರ; ದೃಷ್ಟಿನರ.

    optic
    ನಾಮವಾಚಕ
  • ಕಣ್ಣು (ಈಗ ಸಾಮಾನ್ಯವಾಗಿ ಹಾಸ್ಯ ಪ್ರಯೋಗ)
  • ದೃಶ್ಯೋಪಕರಣಗಳಲ್ಲಿನ ಲೆನ್ಸು, ಮಸೂರ, ಮೊದಲಾದವು.
  • (ಬ್ರಿಟಿಷ್‍ ಪ್ರಯೋಗ) (Optic)Proprietary name ಆಪ್ಟಿಕ್‍; ಮದ್ಯವನ್ನು ಅಳೆದು ಹಾಕಲು ಸೀಸೆಯ ಕತ್ತಿಗೆ ಕಟ್ಟಿರುವ ಸಾಧನ.

  • optic angle
    ನಾಮವಾಚಕ
    ದೃಶ್ಯಕೋನ:
  • ಯಾವುದೇ ವಸ್ತುವಿನ ಎರಡು ಕೊನೆಗಳಿಂದ ಕಣ್ಣಿಗೆ ಬಂದು ತಲುಪುವ ಬೆಳಕಿನ ಕಿರಣಗಳ ನಡುವಣ ಕೋನ.
  • ಯಾವುದೇ ಬಿಂದುವಿನಿಂದ ಎರಡು ಕಣ್ಣುಗಳಿಗೂ ಬಂದು ತಲುಪುವ ಬೆಳಕಿನ ಕಿರಣಗಳ ನಡುವಣ ಕೋನ.

  • optic axis
    ನಾಮವಾಚಕ
    ದ್ಯುತೀಯ ಅಕ್ಷ:
  • ಮಸೂರ ಯಾ ಗೋಲೀಯ ದರ್ಪಣದ ವಕ್ರತಾಕೇಂದ್ರದ ಮೂಲಕ ಹಾದುಹೋಗುವ ಮತ್ತು ಸಮ್ಮಿತಿಯ ಅಕ್ಷಕ್ಕೆ ಸಮಾಂತವಾಗಿರುವ ರೇಖೆ.
  • ದ್ವಿವಕ್ರೀಕಾರಕ ಹರಳಿನಲ್ಲಿ ಯಾವ ದಿಕ್ಕಿನಲ್ಲಿ ದ್ವಿವಕ್ರೀಭವನ ಆಗುವುದಿಲ್ಲವೋ ಆ ದಿಕ್ಕಿಗೆ ಸಮಾಂತರವಾಗಿರುವ ರೇಖೆ.

  • optic lobe
    ನಾಮವಾಚಕ
    (ಅಂಗರಚನಾಶಾಸ್ತ್ರ) ದೃಷ್ಟಿಹಾಲೆ; ದೃಷ್ಟಿನರ ಹೊರಡುವ ಸ್ಥಳವಾಗಿರುವ, ಮಿದುಳಿನ ಹಿಂಭಾಗದ ಹಾಲೆ.


    logo