logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leggy
ಗುಣವಾಚಕ
  • (ಹುಡುಗ, ಕುದುರೆ ಮರಿ, ನಾಯಿಮರಿ, ಮೊದಲಾದವುಗಳ ವಿಷಯದಲ್ಲಿ) ಉದ್ದಗಾಲಿನ; ನಿಡುಗಾಲಿನ; ನೀಳ ಸಣಕಲು ಕಾಲುಗಳುಳ್ಳ.
  • (ಹೆಂಗಸಿನ ವಿಷಯದಲ್ಲಿ) ಆಕರ್ಷಕವಾದ ಉದ್ದಗಾಲುಗಳುಳ್ಳ.
  • (ಮುಖ್ಯವಾಗಿ ಸಸ್ಯಗಳ ವಿಷಯದಲ್ಲಿ) ಉದ್ದಕಾಂಡದ.

  • leghorn
    ನಾಮವಾಚಕ
  • (ಟೊಪ್ಪಿ ಮೊದಲಾದವಕ್ಕೆ ಬಳಸುವ) ಹೆಣೆದ ಹುಲ್ಲು.
  • ಇದರಿಂದ ಮಾಡಿದ ಹ್ಯಾಟು, ಟೊಪ್ಪಿಗೆ.
  • (Leghorn) ಗಟ್ಟಿಮುಟ್ಟಾದ, ಮನೆಯಲ್ಲಿ ಸಾಕುವ, ಒಂದು ಬಗೆಯ ಪಕ್ಷಿ ಯಾ ಅದರ ತಳಿ.

  • legibility
    ನಾಮವಾಚಕ
    (ಓದಲು) ಸ್ಪಷ್ಟತೆ; ಸ್ಫುಟತೆ; ವಿಶದತೆ; ಸುಲಭವಾಗಿ ಓದುವಂತಿರುವಿಕೆ.

    legible
    ಗುಣವಾಚಕ
    (ಕೈ ಬರವಣಿಗೆ, ಮುದ್ರಣ, ಮೊದಲಾದವುಗಳ ವಿಷಯದಲ್ಲಿ) ಸ್ಪಷ್ಟವಾದ; ಸ್ಫುಟವಾದ; ಸುಲಭವಾಗಿ ಓದಲಾಗುವ.

    legibly
    ಕ್ರಿಯಾವಿಶೇಷಣ
    ಸ್ಪಷ್ಟವಾಗಿ; ಸ್ಫುಟವಾಗಿ; ಸುಲಭವಾಗಿ ಓದುವಂಥ ರೀತಿಯಲ್ಲಿ.

    legion
    ನಾಮವಾಚಕ ಪದಗುಚ್ಛ
  • ಲೀಜನ್‍; (ಪುರಾತನ ರೋಮನ್‍ ಸೈನ್ಯದಲ್ಲಿ 3000–6000 ಪದಾತಿಗಳು, ಸುಮಾರು 300 ಅಶ್ವ ಸೈನ್ಯವೂ ಇರುತ್ತಿದ್ದ) ಸೈನ್ಯದಳ.
  • ದೊಡ್ಡ ಸಮೂಹ; ದೊಡ್ಡ ಸಂಖ್ಯೆ; ದೊಡ್ಡ ಗುಂಪು; ಅಪಾರ ಸಂಖ್ಯೆ.
  • (ವ್ಯವಸ್ಥಿತವಾದ) ದೊಡ್ಡ ಸಂಘ, ಸಂಸ್ಥೆ; ಮಹಾ – ಸಂಘ, ಸಂಸ್ಥೆ.

  • legion
    ಆಖ್ಯಾತಕ ಗುಣವಾಚಕ
    ಅಪಾರ ಸಂಖ್ಯೆಯಲ್ಲಿರುವ; ಅಸಂಖ್ಯಾತ: his good works have been legion ಅವನ ಒಳ್ಳೆಯ ಕೃತಿಗಳು ಅಸಂಖ್ಯಾತ.

    legionary
    ಗುಣವಾಚಕ
    ಸೇನಾ ದಳದ ಯಾ ದಳಗಳ.

    legionary
    ನಾಮವಾಚಕ
    (ದಳವೊಂದಕ್ಕೆ ಸೇರಿದ) ಸೈನಿಕ; ದಳದ ಸೈನಿಕ.

    legioned
    ಗುಣವಾಚಕ
    (ಕಾವ್ಯಪ್ರಯೋಗ) ದಳದಳಗಳಾಗಿ ವ್ಯೂಹ ರಚಿಸಿದ: like legioned soldiers ದಳದಳಗಳಾಗಿ ವಿಂಗಡಿಸಿದ, ವಿಭಜಿಸಿದ ಸೈನಿಕರಂತೆ.


    logo