logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incredibility
ನಾಮವಾಚಕ
  • ಅವಿಶ್ವಸನೀಯತೆ; ಅಶ್ರದ್ಧೇಯತೆ; ನಂಬಲಾಗದಂಥ ಲಕ್ಷಣ; ನಂಬಲು ಅಸಾಧ್ಯವಾಗಿರುವಿಕೆ; ನಂಬಿಕೆಗೆ ಈರಿರುವಿಕೆ.
  • (ಆಡುಮಾತು) ನಂಬಲು ಕಷ್ಟವಾಗಿರುವಿಕೆ.
  • (ಆಡುಮಾತು) ಸೋಜಿಗ ಹುಟ್ಟಿಸುವಂತಿರುವಿಕೆ; ಅಚ್ಚರಿಗೊಳಿಸುವಂತಿರುವಿಕೆ; ಆಶ್ಚರ್ಯಜನಕತೆ; ವಿಸ್ಮಯಕಾರಿತೆ.

  • incredible
    ಗುಣವಾಚಕ
  • ನಂಬಲಾಗದ; ಅವಿಶ್ವಸನೀಯ; ಅಶ್ರದ್ಧೇಯ; ನಂಬಲಶಕ್ಯವಾದ; ನಂಬಿಕೆಗೆ ಈರಿದ.
  • (ಆಡುಮಾತು) ನಂಬಲು ಕಷ್ಟವಾದ.
  • (ಆಡುಮಾತು) (ನಂಬಲಾಗದಷ್ಟು) ವಿಚಿತ್ರವಾದ; ಆಶ್ಚರ್ಯಕರವಾದ; ಸೋಜಿಗದ; ವಿಸ್ಮಯಕಾರಿ; ಅಚ್ಚರಿಗೊಳಿಸುವ.

  • incredibly
    ಕ್ರಿಯಾವಿಶೇಷಣ
  • ನಂಬಲಾಗದಂತೆ; ಅವಿಶ್ವಸನೀಯವಾಗಿ; ನಂಬಲಶಕ್ಯವಾಗಿ; ನಂಬಿಕೆಗೆ ಈರಿ.
  • (ಆಡುಮಾತು) ನಂಬಲು ಕಷ್ಟವಾಗುವಂತೆ.
  • (ಆಡುಮಾತು) (ನಂಬಲಾಗದಷ್ಟು) ವಿಚಿತ್ರವಾಗಿ; ಸೋಜಿಗವಾಗಿ; ಆಶ್ಚರ್ಯಕರವಾಗಿ.

  • incredulity
    ನಾಮವಾಚಕ
  • ನಂಬದ ಸ್ವಭಾವ; ಸಂಶಯಪ್ರಕೃತಿ; ಸಂದೇಹ ಸ್ವಭಾವ.
  • ಸಂದೇಹ; ಅನುಮಾನ; ಸಂಶಯ.

  • incredulous
    ಗುಣವಾಚಕ
    ನಂಬದ; ಶಂಕಿಸುವ; ಸಂಶಯಪಡುವ; ಸಂದೇಹಪ್ರಕೃತಿಯ; ಸಂಶಯಾತ್ಮಕ; ಅನುಮಾನ ಸ್ವಭಾವದ.

    incredulously
    ಕ್ರಿಯಾವಿಶೇಷಣ
    ಸಂಶಯಪಡುತ್ತ; ಸಂಶಯಾತ್ಮಕವಾಗಿ; ಸಂಶಯಗೂಡಿ; ಅನುಮಾನದಿಂದ; ನಂಬಿಕೆಯಿಲ್ಲದಂತೆ; ನಂಬಿಕೆಯಿಲ್ಲದ ರೀತಿಯಲ್ಲಿ; ಸಂದೇಹ ದೃಷ್ಟಿಯಿಂದ.

    increment
    ನಾಮವಾಚಕ
  • ಏರಿಕೆ; ವೃದ್ಧಿ; ಹೆಚ್ಚುವಿಕೆ; ಹೆಚ್ಚಾಗುವಿಕೆ; ಹೆಚ್ಚಿಸುವಿಕೆ.
  • ಹೆಚ್ಚುವರಿ; ಹೆಚ್ಚಳ; ಏರಿಕೆ; ಬಡತಿ; ಹೆಚ್ಚಿದ ಮೊತ್ತ.
  • ಲಾಭ; ನಹೆ.
  • (ಗಣಿತ) ವೃದ್ಧಿ; ವೃದ್ಧ್ಯಂಶ; ಹೆಚ್ಚಳ; ಚರ ಪರಿಮಾಣದಲ್ಲಿ ಆಗುವ ಅಲ್ಪ ಹೆಚ್ಚಳ.

  • incriminate
    ಸಕರ್ಮಕ ಕ್ರಿಯಾಪದ
  • ತಪ್ಪಿತಹೊರಿಸು; ಅಪರಾಧವನ್ನು ಆರೋಪಿಸು; ತಪ್ಪಿಗೆ ಗುರಿಮಾಡು.
  • ದೋಷಾರೋಪಣೆಯಲ್ಲಿ ಸಿಕ್ಕಿಸು; ದೋಷಾರೋಪಣೆಗೆ ಒಳಪಡಿಸು; ದೋಷದಲ್ಲಿ ಭಾಗಿಯನ್ನಾಗಿ ಮಾಡು.
  • ಅಪರಾಧವನ್ನು – ಸಮರ್ಥಿಸುವಂತಿರು, ಸಾಬೀತುಗೊಳಿಸುವಂತಿರು; ಅಪರಾಧಕ್ಕೆ ಸಾಕ್ಷ್ಯದಂತಿರು, ರುಜುವಾತಂತಿರು: incriminating evidence (ಅಪರಾಧವನ್ನು) ಸಾಬೀತುಗೊಳಿಸುವಂತಿರುವ ಸಾಕ್ಷ್ಯ.

  • incrimination
    ನಾಮವಾಚಕ
  • ಅಪರಾಧಾರೋಪ; ತಪ್ಪಿತ ಹೊರಿಸುವುದು; ಅಪರಾಧವನ್ನು ಆರೋಪಿಸುವುದು.
  • ಅಪರಾಧದಲ್ಲಿ ಸಿಕ್ಕಿಕೊಳ್ಳುವುದು.
  • ತಪ್ಪಿತ ಹೊರಿಸಿರುವ ಪರಿಸ್ಥಿತಿ; ಅಪರಾಧಸ್ಥಿತಿ.
  • ಅಪರಾಧದಲ್ಲಿ ಸಿಕ್ಕಿಕೊಂಡಿರುವ ಪರಿಸ್ಥಿತಿ; ಅಪರಾಧಗ್ರಸ್ತತೆ; ಅಪರಾಧಭಾಗಿತ್ವ.

  • incriminatory
    ಗುಣವಾಚಕ
  • ಆರೋಪಣೀಯ; ತಪ್ಪಿತ ಹೊರಿಸುವಂಥ; ತಪ್ಪಿಗೀಡುಮಾಡುವಂಥ.
  • ಅಪರಾಧವನ್ನು ಸಾಬೀತುಮಾಡುವಂಥ.


  • logo